iPhone 14: ದಂಪತಿಯ ಪ್ರಾಣ ಉಳಿಸಿದ ಐಫೋನ್​ನಲ್ಲಿನ ಆ ಒಂದು ಆಯ್ಕೆ: ಇದು ಹೇಗೆ ಸಾಧ್ಯವಾಯಿತು ನೋಡಿ

ಆ್ಯಪಲ್ ಕಂಪನಿಯ ಐಫೋನ್ 14 (iPhone 14) ಮೊಬೈಲ್ ಪತಿ-ಪತ್ನಿಯರ ಜೀವ ಉಳಿಸಿದೆ ಎಂದು ವರದಿಯಾಗಿದೆ. ಫೋನ್‌ನಲ್ಲಿರುವ ಉಪಗ್ರಹ ಆಧಾರಿತ ವ್ಯವಸ್ಥೆ (SOS​) ದಂಪತಿಯ ಜೀವವನ್ನು ಉಳಿಸಿದೆ.

iPhone 14: ದಂಪತಿಯ ಪ್ರಾಣ ಉಳಿಸಿದ ಐಫೋನ್​ನಲ್ಲಿನ ಆ ಒಂದು ಆಯ್ಕೆ: ಇದು ಹೇಗೆ ಸಾಧ್ಯವಾಯಿತು ನೋಡಿ
iPhone 14
Follow us
TV9 Web
| Updated By: Vinay Bhat

Updated on: Dec 16, 2022 | 1:06 PM

ಮೊಬೈಲ್​ಗಳು (Mobile) ಮನುಷ್ಯನ ಪ್ರಾಣ ತೆಗೆದಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಆದರೆ, ಇಲ್ಲೊಂದು ಅಚ್ಚರಿ ಎಂಬಂತೆ ಮೊಬೈಲ್ ಪ್ರಾಣ ಉಳಿಸಿದೆ ಎಂದರೆ ನಂಬಲೇ ಬೇಕು. ಹೌದು, ಈ ಘಟನೆ ನಡೆದಿರುವುದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ. ಆ್ಯಪಲ್ ಕಂಪನಿಯ ಐಫೋನ್ 14 (iPhone 14) ಮೊಬೈಲ್ ಪತಿ-ಪತ್ನಿಯರ ಜೀವ ಉಳಿಸಿದೆ ಎಂದು ವರದಿಯಾಗಿದೆ. ಫೋನ್‌ನಲ್ಲಿರುವ ಉಪಗ್ರಹ ಆಧಾರಿತ ವ್ಯವಸ್ಥೆ (SOS​) ದಂಪತಿಯ ಜೀವವನ್ನು ಉಳಿಸಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದ ಏಂಜಲೀಸ್ ಫಾರೆಸ್ಟ್ ಹೆದ್ದಾರಿಯಲ್ಲಿ ಪತಿ-ಪತ್ನಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅವರ ಕಾರು ಪರ್ವತದಿಂದ ಸುಮಾರು 300 ಅಡಿ ಕೆಳಗೆ ಬಿದ್ದಿದೆ. ಕಾರು ಗುಡ್ಡದಲ್ಲಿ ಸಿಲುಕಿದ ಪರಿಣಾಮ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಗುಡ್ಡಗಾಡು ಪ್ರದೇಶವಾಗಿದ್ದರಿಂದ ಆ ಸಮಯದಲ್ಲಿ ಇವರ ಐಫೋನ್‌ನಲ್ಲಿ ನೆಟ್‌ವರ್ಕ್ ಕೂಡ ಇರಲಿಲ್ಲ. ಆದರೆ ಈ ಸಂದರ್ಭ ಇವರ ಬಳಿಯಿದ್ದ ಐಫೋನ್ 14 ಸಹಾಯಕ್ಕೆ ಬಂತು. ಐಫೋನ್ 14 ಸರಣಿಯಲ್ಲಿ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವಿದ್ದು ಕಾರು ಅಪಘಾತವಾಗಿರುವುದನ್ನು ಗಮನಿಸಿ ತುರ್ತು ಸಂಖ್ಯೆಯನ್ನು ಸಂಪರ್ಕಿಸಿದೆ. ಬಳಿಕ ಸ್ಯಾಟಲೈಟ್ SOS ವೈಶಿಷ್ಟ್ಯವನ್ನು ಬಳಸಿ ಸಹಾಯಕ್ಕಾಗಿ ಕರೆ ಮಾಡಿದೆ. ಹೀಗೆ ಇವರ ಪ್ರಾಣವನ್ನು ಕಾಪಾಡಲಾಗಿದೆ.

ಇದನ್ನೂ ಓದಿ
Image
Tech Tips: ವಾಟ್ಸ್​ಆ್ಯಪ್​ನಲ್ಲಿ ಟೈಪ್ ಮಾಡದೇ ಟೆಕ್ಸ್ಟ್​​​ ಮೆಸೇಜ್ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?
Image
Realme 10 Pro+: 108MP ಕ್ಯಾಮೆರಾದ ರಿಯಲ್ ಮಿ 10 ಪ್ರೊ+ 5G ಸ್ಮಾರ್ಟ್‌ಫೋನ್‌ ಈಗ ಖರೀದಿಗೆ ಲಭ್ಯ: ಬೆಲೆ ಎಷ್ಟು?
Image
Year Ender 2022: 2022ರ ನಂಬರ್ 1 ಸ್ಮಾರ್ಟ್​ಫೋನ್ ಯಾವುದು ಗೊತ್ತೇ?: ಇಲ್ಲಿದೆ ನೋಡಿ
Image
Paytm: ಪೇಟಿಎಂನಿಂದ ಧಮಾಕ ಆಫರ್: ವಿದ್ಯುತ್ ಬಿಲ್ ಪಾವತಿಸಿದರೆ ಅಷ್ಟೂ ಹಣ ವಾಪಸ್

Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

ಇತ್ತೀಚೆಗಷ್ಟೆ ಹಿಮಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ ವ್ಯಕ್ತಿಯೊಬ್ಬ ಅಲ್ಲಿಯೇ ಸಿಲುಕಿಕೊಂಡಾಗ ಇದೇ ಸ್ಯಾಟಲೈಟ್ SOS ವೈಶಿಷ್ಟ್ಯ ಆತನನ್ನು ಕಾಪಾಡಿದ ಘಟನೆ ನಡೆದಿತ್ತು. ಮೊಬೈಲ್​ನಲ್ಲಿ ಯಾವುದೇ ನೆಟ್​ವರ್ಕ್​, ಇಂಟರ್​ನೆಟ್​ ಇರಲಿಲ್ಲ. ಸಂಪರ್ಕ ಸಾಧಿಸಲು ಎಲ್ಲ ಅವಕಾಶಗಳು ಮುಚ್ಚಿಹೋದಾಗ ತನ್ನಲ್ಲಿದ್ದ ಆ್ಯಪಲ್​ ಐಫೋನ್​ 14 ಮೂಲಕ ಉಪಗ್ರಹ ಸಹಾಯದಿಂದ ಕಾಲ್​ ಮಾಡಿ ತಾನಿರುವ ಸ್ಥಳದ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಇದರ ಸಂಕೇತಗಳನ್ನು ಪಡೆದ ಆ್ಯಪಲ್​ ಸಂಸ್ಥೆಯ ಸ್ವಯಂಸೇವಕರು ವ್ಯಕ್ತಿ ಸಿಲುಕಿದ್ದ ಜಾಗವನ್ನು ಎಸ್​ಒಎಸ್​ ನೆರವಿನಿಂದ ಪತ್ತೆ ಮಾಡಿದ್ದಾರೆ. ಬಳಿಕ ಹಿಮದಲ್ಲಿ ಸಿಲುಕಿದ್ದಾತನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಗ್ರಾಮೀಣ ಮತ್ತು ಸಂಕೀರ್ಣ ಪ್ರದೇಶಗಳಲ್ಲಿ ನೆಟ್​ವರ್ಕ್​ ಇಲ್ಲದೇ ಪರದಾಡುವ ಜನರಿಗೆ ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆಯು ನೆರವಾಗಲಿದೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ.

ಏನಿದು Emergency SOS via satellite ಫೀಚರ್‌?:

ಐಫೋನ್‌ 14 ಸರಣಿಯಲ್ಲಿರುವ ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿರುವ Emergency SOS via satellite ಅಕ್ಷರಶಃ ತುರ್ತು ಸಹಾಯಕ ಆಯ್ಕೆ ಆಗಿದೆ. ಸುಲಭವಾಗಿ ಹೇಳುವುದಾದರೆ, ಯಾವುದೇ ವೈ-ಫೈ ಕನೆಕ್ಟಿವಿಟಿ ಅಥವಾ ಸೆಲ್ಯುಲರ್ ಕನೆಕ್ಟಿವಿಟಿ ಇಲ್ಲದ ಅಥವಾ ಸಿಗದ ಸಂದರ್ಭಗಳಲ್ಲಿಯೂ ಬಳಕೆದಾರರು ಮೆಸೆಜ್‌ ಅಪ್ಲಿಕೇಶನ್ ಮೂಲಕ ಮೆಸೆಜ್‌ ಕಳುಹಿಸಬಹುದಾಗಿದೆ. ಬಳಕೆದಾರರು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿರುವಾಗ ಖಂಡಿತಾ ಇದೊಂದು ಉಪಯುಕ್ತ ಫೀಚರ್‌ ಎನ್ನಬಹುದು. ಏರ್‌ಪ್ಲೇನ್ ಮೋಡ್ ಅನ್ನು ಆನ್‌ ಮಾಡುವ ಮೂಲಕ ಈ ಆಯ್ಕೆ ಪರೀಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು. ಈ ಆಯ್ಕೆಯು ಆರಂಭದಲ್ಲಿ ಕೆನಡ ಹಾಗೂ ಯುಎಸ್‌ಎ ರಾಷ್ಟ್ರಗಳಲ್ಲಿ ಲಭ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು