Flipkart Big Saving Days Sale: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಬಿಗ್ ಸೇವಿಂಗ್ ಡೇಸ್ ಸೇಲ್: ಆಫರ್ ಮಿಸ್ ಮಾಡ್ಬೇಡಿ
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ (Flipkart Big Saving Days sale) ಸೇಲ್ಗೆ ಚಾಲನೆ ಸಿಕ್ಕಿದೆ. ಇದೇ ಡಿಸೆಂಬರ್ 21ರ ವರೆಗೆ ಈ ಬಹುನಿರೀಕ್ಷಿತ ಸೇಲ್ ಲೈವ್ ಆಗಲಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್ ಟೈಮ್ ಎನ್ನಬಹುದು.
ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಭರ್ಜರಿ ಮೇಳಗಳು ಆರಂಭವಾಗುತ್ತಿದೆ. ಅಮೇಜಾನ್ (Amazon) ಸದ್ಯದಲ್ಲೇ ಹೊಸ ಸೇಲ್ ಬಗ್ಗೆ ಘೋಷಣೆ ಮಾಡಲಿದ್ದರೆ ಇತ್ತ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ (Flipkart Big Saving Days sale) ಸೇಲ್ಗೆ ಚಾಲನೆ ಸಿಕ್ಕಿದೆ. ಇದೇ ಡಿಸೆಂಬರ್ 21ರ ವರೆಗೆ ಈ ಬಹುನಿರೀಕ್ಷಿತ ಸೇಲ್ ಲೈವ್ ಆಗಲಿದೆ. ಮಾರಾಟದ ಸಮಯದಲ್ಲಿ, ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು (Smartphones), ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್ ಆಫರ್‌ಗಳನ್ನು ನೀಡಲಾಗಿದೆ.
ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್ನಲ್ಲಿ ಮೊಬೈಲ್ಗಳ ಮೇಲೆ ಸೇರಿದಂತೆ ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ಫ್ಲಿಪ್‌ಕಾರ್ಟ್ ಮುಂದಾಗಿದೆ. ಖರೀದಿದಾರರು ರಿಯಲ್ ಮಿ, ಒಪ್ಪೋ, ಸ್ಯಾಮ್ಸಂಗ್, ಆ್ಯಪಲ್ ಕಂಪನಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು ಊಹಿಸಲಾಗದ ರೀತಿಯ ಡಿಸ್ಕೌಂಟ್ ಪಡೆದುಕೊಳ್ಳಬಹುದು.
iPhone 14: ದಂಪತಿಯ ಪ್ರಾಣ ಉಳಿಸಿದ ಐಫೋನ್ನಲ್ಲಿನ ಆ ಒಂದು ಆಯ್ಕೆ: ಇದು ಹೇಗೆ ಸಾಧ್ಯವಾಯಿತು ನೋಡಿ
ಮುಖ್ಯವಾಗಿ ಪೋಕೋ ಕಂಪನಿಯ ಫೋನ್ಗಳು ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಬಿಗ್ ಸೇವಿಂಗ್ ಡೇಸ್ ಸೇಲ್ನಲ್ಲಿ Poco F4 5G ಸ್ಮಾರ್ಟ್ಫೋನ್ನ 6GB RAM ಮತ್ತು 128GB ROM ಆಯ್ಕೆಯ ಬೇಸ್ ಮಾಡೆಲ್‌ಗೆ 24,999 ರೂ. ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ ಬ್ಯಾಂಕ್ ಆಫರ್ ಕೂಡ ಸೇರ್ಪಡೆಯಾಗಿದೆ. ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 870 5G ಪ್ರೊಸೆಸರ್ನಿಂದ ಚಾಲಿತವಾಗಿದೆ ಮತ್ತು 120 Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ.
Poco X4 Pro 5G ಸ್ಮಾರ್ಟ್ಫೋನನ್ನು ನೀವು 15,499 ರೂ. ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 695 ಪ್ರೊಸೆಸರ್ನಿಂದ ಚಾಲಿತವಾಗಿದೆ. 120Hz ರಿಫ್ರೆಶ್ ದರದೊಂದಿಗೆ 6.67-ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಇದರಲ್ಲಿ 64MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿಗಳಿಗಾಗಿ 16MP ಕ್ಯಾಮೆರಾ ನೀಡಲಾಗಿದೆ.
ಇನ್ನು ಐಫೋನ್ 13ರ ಮೇಲೆ ಬಂಪರ್ ಆಫರ್ ಅನ್ನು ಫ್ಲಿಪ್‌ಕಾರ್ಟ್ ಘೋಷಿಸಿದೆ. ಈ ಫೋನನ್ನು ನೀವು 63,999 ರೂಗಳಿಗೆ ಖರೀದಿ ಮಾಡಬಹುದು. ಬ್ಯಾಂಕ್ ಆಫರ್‌ಗಳೂ ಲಭ್ಯವಿದ್ದು, ಇದರ ಸಹಾಯದಿಂದ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿಸಬಹುದು. ಎಲ್ಲಾ ಆಫರ್‌ಗಳನ್ನು ಒಟ್ಟುಗೂಡಿಸಿದಾಗ, ನೀವು ಈ ಸ್ಮಾರ್ಟ್‌ಫೋನ್ ಅನ್ನು 50,000 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಗಮನಾರ್ಹವಾಗಿ, ಫ್ಲಿಪ್‌ಕಾರ್ಟ್ 128GB ಸ್ಟೋರೇಜ್ ಹೊಂದಿರುವ ಐಫೋನ್ 13 ಫೋನ್ ಮೇಲೆ ಈ ರಿಯಾಯಿತಿಯನ್ನು ನೀಡುತ್ತಿದೆ. ಇದುವರೆಗೆ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನ್ನ ಮೂಲ ಬೆಲೆ 69,900 ರೂಪಾಯಿ ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ