ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಈ ಹಿಂದೆ ಕರೆಗಳು ಮತ್ತು ಸಂದೇಶಗಳಿಗೆ ಮಾತ್ರ ಬಳಸುತ್ತಿದ್ದ ಫೋನ್‌ಗಳು ಇಂದು ಪ್ರತಿಯೊಂದು ಅಗತ್ಯಕ್ಕೂ ಅನಿವಾರ್ಯವಾಗಿವೆ. ಅನೇಕರು ತಮ್ಮ ಹೆಚ್ಚಿನ ಸಮಯವನ್ನು ಕಳೆಯುವುದು ಫೋನಿನ ಜೊತೆಗೆಯೇ. ಆದರೆ ಈ ಫೋನ್ಗಳಲ್ಲಿ ಧೂಳು, ಕೊಳೆ ಸೇರಿಕೊಳ್ಳುವುದು ಮಾಮೂಲಿ. ಈ ಧೂಳು ನಿಮ್ಮ ಡಿಸ್ ಪ್ಲೇ ಮೇಲೆ ಬಂದರೆ ಅದನ್ನು ಅಳಿಸಬಹುದು. ಆದರೆ ನಿಮ್ಮ ಫೋನ್‌ನ ಸ್ಪೀಕರ್‌ಗಳ ಒಳಗೆ ಹೋದರೆ..?
ಧೂಳುಗಳು ಸ್ಪೀಕರ್‌ಗಳ ಒಳಗೆ ಹೋದರೆ ಅದರ ಕಾರ್ಯನಿರ್ವಹಣೆಯಲ್ಲಿ ತೊಂದರೆಗಳು ಉಂಟಾಗುತ್ತವೆ. ಆದರೆ ನೀವು ಆಗಾಗ ಸ್ಕ್ರೀನ್ ಕ್ಲೀನ್ ಮಾಡುವ ಹಾಗೆ ನಿಮ್ಮ ಫೋನ್‌ನ ಸ್ಪೀಕರ್‌ಗಳನ್ನು ಕ್ಲೀನ್ ಮಾಡಿದರೆ ಫೋನಿನ ಬಾಳಿಕೆ ತುಂಬಾ ಚೆನ್ನಾಗಿರುತ್ತದೆ. ಫೋನ್ ಡಿಸ್ ಪ್ಲೇಯನ್ನು ಒರೆಸುವುದು ಸುಲಭ ಆದರೆ ಸ್ಪೀಕರ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಅಷ್ಟೊಂದು ಸುಲಭವಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡಬೇಕು ನೋಡೋಣ.
Ulefone armor 24: 22000mAh ಬ್ಯಾಟರಿ: ಈ ರೀತಿಯ ಫೋನ್ ನೀವು ಹಿಂದೆಂದೂ ನೋಡಿರಲ್ಲ
ಧೂಳನ್ನು ಸ್ವಚ್ಛಗೊಳಿಸಲು ಮೃದುವಾದ ಪೇಂಟ್ ಬ್ರಷ್, ಟೂತ್ ಬ್ರಷ್ ಅಥವಾ ಜಿಗುಟಾದ ಧೂಳನ್ನು ತೆಗೆದುಹಾಕಲು ಸಣ್ಣ ಹ್ಯಾಂಡ್ಹೆಲ್ಡ್ ಏರ್ ಬ್ಲೋವರ್ ಅನ್ನು ಬಳಸಿಕೊಂಡು ನಿಮ್ಮ ಫೋನ್‌ನ ಸ್ಪೀಕರ್‌ಗಳನ್ನು ಸ್ವಚ್ಛಗೊಳಿಸಬಹುದು. ಗಟ್ಟಿಯಾದ ಕೊಳಕು ಉಳಿದಿದ್ದರೆ ನೀವು ಅದನ್ನು ಸ್ಪಂಜುಗಳಿಂದ ಸ್ವಚ್ಛಗೊಳಿಸಬಹುದು.
ನೀರಿನಿಂ ಫೋನ್ ಅನ್ನು ಎಂದಿಗೂ ಸ್ವಚ್ಛಗೊಳಿಸ ಬಾರದು. ಹೀಗೆ ಮಾಡಿದರೆ ಶಾರ್ಟ್-ಸರ್ಕ್ಯೂಟಿಂಗ್ ಅಥವಾ ಸೂಕ್ಷ್ಮ ಭಾಗಗಳಿಗೆ ಹಾನಿ ಉಂಟಾಗಬಹುದು. ಅಂತೆಯೆ ಫೋನ್ ಅನ್ನು ಸ್ವಚ್ಛಗೊಳಿಸಲು ಪೇಪರ್ಕ್ಲಿಪ್, ಹೊಲಿಗೆ ಸೂಜಿ, ಪಿನ್ಗಳು ಅಥವಾ ಯಾವುದೇ ಚೂಪಾದ ವಸ್ತುವನ್ನು ಬಳಸಬೇಡಿ.
ಕ್ಲೀನ್ ಟೂತ್ ಬ್ರಷ್ ಅಥವಾ ಪೇಂಟ್ ಬ್ರಷ್‌ನಂತಹ ಮೃದುವಾದ ಬ್ರಷ್ ಅನ್ನು ಬಳಸಿಕೊಂಡು ನಿಮ್ಮ ಫೋನ್‌ನ ಸ್ಪೀಕರ್ ಗ್ರಿಲ್‌ಗಳನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಇದರಿಂದ ನೀವು ಧೂಳನ್ನು ಹೊಡೆದು ಹಾಕಬಹುದು. ಆದರೆ, ಹೆಚ್ಚು ಒಳಗೆ ತಳ್ಳಬೇಡಿ. ತುಂಬಾ ಕೊಳೆಯಿದ್ದರೆ, ಅದನ್ನು ತೆಗೆದುಹಾಕಲು ಹ್ಯಾಂಡ್ಹೆಲ್ಡ್ ಏರ್ ಬ್ಲೋವರ್ ಅನ್ನು ಬಳಸಿ. ಹ್ಯಾಂಡ್ಹೆಲ್ಡ್ ಬ್ಲೋವರ್ ಗಾಳಿಗಿಂತ ಹೆಚ್ಚು ಮೃದುವಾಗಿರುತ್ತದೆ. ಇದು ಸ್ಪೀಕರ್ ನಿಂದ ಧೂಳನ್ನು ಸುಲಭವಾಗಿ ತೆಗೆದುಹಾಕುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ