Tech Tips: ಮನೆಗೆ ಸಿಸಿಟಿವಿ ಹಾಕುವ ಪ್ಲಾನ್ನಲ್ಲಿದ್ದೀರಾ?: ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ

ಸಿಸಿಟಿವಿ ಕ್ಯಾಮೆರಾ ಎಂದರೆ ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಕ್ಯಾಮೆರಾ. ಸ್ಮಾರ್ಟ್ ಫೋನ್ ಖರೀದಿಸುವಾಗ ಅದರ ಕ್ಯಾಮೆರಾದ ಮೇಲೆ ಹೇಗೆ ಫೋಕಸ್ ಮಾಡುತ್ತೇವೆಯೋ ಅದೇ ರೀತಿ ಸಿಸಿಟಿವಿ ಖರೀದಿಸುವಾಗ ಅದರ ಕ್ಯಾಮೆರಾದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬ್ರಾಂಡ್‌ಗಳ ಸಿಸಿಟಿವಿ ಕ್ಯಾಮೆರಾಗಳು ಲಭ್ಯವಿವೆ. ನೀವು ಸಹ ನಿಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲು ಬಯಸಿದರೆ, ಖರೀದಿಸುವ ಮೊದಲು ಈ 5 ವಿಷಯಗಳನ್ನು ನೆನಪಿನಲ್ಲಿಡಿ.

Tech Tips: ಮನೆಗೆ ಸಿಸಿಟಿವಿ ಹಾಕುವ ಪ್ಲಾನ್ನಲ್ಲಿದ್ದೀರಾ?: ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ
Cctv

Updated on: May 26, 2025 | 7:41 PM

ಬೆಂಗಳೂರು (ಮೇ. 26): ಸಿಸಿಟಿವಿ ಕ್ಯಾಮೆರಾಗಳ (CCTV) ಬಳಕೆ ಅಂಗಡಿಗಳು ಮತ್ತು ಕಚೇರಿಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲವಿತ್ತು. ಆದರೀಗ ಕಾಲ ಬದಲಾಗಿದೆ, ಹೆಚ್ಚುತ್ತಿರುವ ತಂತ್ರಜ್ಞಾನ ಮತ್ತು ಇಳಿಕೆಯ ಬೆಲೆಗಳಿಂದಾಗಿ, ಸಿಸಿಟಿವಿ ಕ್ಯಾಮೆರಾಗಳು ಸಾಮಾನ್ಯ ಜನರ ಕೈಗೆಟುಕುವ ಮಟ್ಟಕ್ಕೆ ಬಂದಿವೆ. ಸಿಸಿಟಿವಿ ಕ್ಯಾಮೆರಾಗಳು ಸುರಕ್ಷತೆಯ ಭಾವವನ್ನು ನೀಡುವುದಲ್ಲದೆ, ನಿಮ್ಮ ಕಣ್ಣುಗಳು ತಲುಪಲು ಸಾಧ್ಯವಾಗದ ಸ್ಥಳಗಳ ಬಗ್ಗೆ ಕೂತಲ್ಲಿಂದಲೇ ನೋಡಲು ಸಾಧ್ಯವಾಗುತ್ತದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ಕಾರಿನಿಂದ ಹಿಡಿದು ನಿಮ್ಮ ಮನೆಗೆ ಪ್ರವೇಶಿಸುವ ವ್ಯಕ್ತಿಯವರೆಗೆ ಎಲ್ಲವನ್ನೂ ಏಕಕಾಲದಲ್ಲಿ ಮೇಲ್ವಿಚಾರಣೆ ಮಾಡಬಹುದು.

ಸಿಸಿಟಿವಿ ಕ್ಯಾಮೆರಾ ಎಂದರೆ ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಕ್ಯಾಮೆರಾ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬ್ರಾಂಡ್‌ಗಳ ಸಿಸಿಟಿವಿ ಕ್ಯಾಮೆರಾಗಳು ಲಭ್ಯವಿವೆ. ನೀವು ಸಹ ನಿಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲು ಬಯಸಿದರೆ, ಖರೀದಿಸುವ ಮೊದಲು ಈ 5 ವಿಷಯಗಳನ್ನು ನೆನಪಿನಲ್ಲಿಡಿ.

ಕ್ಯಾಮೆರಾ ಗುಣಮಟ್ಟ

ಇದನ್ನೂ ಓದಿ
15 ಸಾವಿರದೊಳಗಿನ ಟಾಪ್ ಕ್ವಾಲಿಟಿ ಕ್ಯಾಮೆರಾ ಸ್ಮಾರ್ಟ್​ಫೋನ್ ಇಲ್ಲಿದೆ ನೋಡಿ
ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಎರಡು ಮೈಕ್ರೊಫೋನ್‌ಗಳು ಏಕೆ ಇರುತ್ತವೆ?
ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಬಳಕೆದಾರರಿಗೆ ಪ್ರಮುಖ ಸುದ್ದಿ
ಭಾರತದಲ್ಲಿ ಬಿಡುಗಡೆ ಆಯಿತು 6000mAh ಬ್ಯಾಟರಿ ಹೊಸ ಫೋನ್: ಬೆಲೆ ಕೇವಲ ...

ಸ್ಮಾರ್ಟ್ ಫೋನ್ ಖರೀದಿಸುವಾಗ ಅದರ ಕ್ಯಾಮೆರಾದ ಮೇಲೆ ಹೇಗೆ ಫೋಕಸ್ ಮಾಡುತ್ತೇವೆಯೋ ಅದೇ ರೀತಿ ಸಿಸಿಟಿವಿ ಖರೀದಿಸುವಾಗ ಅದರ ಕ್ಯಾಮೆರಾದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಹೊಸ ಸಿಸಿಟಿವಿ ಖರೀದಿಸಲು ಹೋದಾಗ, ಅದರಲ್ಲಿ ಕನಿಷ್ಠ 2 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಕಡಿಮೆ ಮೆಗಾಪಿಕ್ಸೆಲ್ ಸಂವೇದಕದಿಂದಾಗಿ ಚಿತ್ರದ ಗುಣಮಟ್ಟ ತೀರಾ ಕಳಪೆ ಆಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೂರದಲ್ಲಿನ ವ್ಯಕ್ತಿಯ ಮುಖ ಅಥವಾ ವಸ್ತು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ನೀವು ಬಯಸಿದರೆ, 4MP ಅಥವಾ 8MP ಕ್ಯಾಮೆರಾ ಸಂವೇದಕದೊಂದಿಗೆ ಕೂಡ ಸಿಸಿಟಿವಿ ಖರೀದಿಸಬಹುದು.

ನೈಟ್ ಮೋಡ್ ಆಯ್ಕೆ ಹೊಂದಿರಬೇಕು

ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಬರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ನೈಟ್ ಮೋಡ್ ವೈಶಿಷ್ಟ್ಯವು ಲಭ್ಯವಿದೆ. ನೈಟ್ ಮೋಡ್ ಇರುವುದರಿಂದ, ಸಿಸಿಟಿವಿ ಕ್ಯಾಮೆರಾಗಳು ಕತ್ತಲೆಯಲ್ಲಿಯೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ ಮತ್ತು ಮನೆಯ ಸುತ್ತಲೂ ಭದ್ರತೆಗೆ ಇದು ಉತ್ತಮವಾಗಿದೆ.

360 ಡಿಗ್ರಿ ವೀವ್

ಸಿಸಿಟಿವಿಯನ್ನು ಖರೀದಿಸುವಾಗ, ಅದು ಎಷ್ಟು ಪ್ರದೇಶವನ್ನು ಆವರಿಸುತ್ತದೆ ಎಂಬುದನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ, 360 ಡಿಗ್ರಿ ಮೋಷನ್ ವ್ಯೂ ಹೊಂದಿರುವ ಸಿಸಿಟಿವಿ ಕ್ಯಾಮೆರಾವನ್ನು ಖರೀದಿಸುವುದು ಲಾಭದಾಯಕವಾಗಿದೆ. ಈ ಕ್ಯಾಮೆರಾ ಇಡೀ ಪ್ರದೇಶವನ್ನು ಕವರ್ ಮಾಡುತ್ತದೆ.

Best Camera Smartphone: 15 ಸಾವಿರದೊಳಗಿನ ಟಾಪ್ ಕ್ವಾಲಿಟಿ ಕ್ಯಾಮೆರಾ ಸ್ಮಾರ್ಟ್​ಫೋನ್ ಇಲ್ಲಿದೆ ನೋಡಿ

ಸೈನ್ ಮೂವ್

ಇದು ಕೂಡ ಹೊಸ ತಂತ್ರಜ್ಞಾನವಾಗಿದ್ದು, ಸಿಸಿಟಿವಿ ಕ್ಯಾಮೆರಾಗಳಲ್ಲಿ ಇರಲೇಬೇಕು. ಗೆಸ್ಚರ್ ಮೋಷನ್‌ನಿಂದಾಗಿ, ಚಲಿಸುತ್ತಿರುವ ವಸ್ತುಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಕ್ಯಾಮೆರಾ ಸುಲಭವಾಗಿ ಕವರ್ ಮಾಡಲು ಸಾಧ್ಯವಾಗುತ್ತದೆ.

ಅಲರ್ಟ್

ಇತರ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ, ಸಿಸಿಟಿವಿ ಕ್ಯಾಮೆರಾಗಳು ಅಲರ್ಟ್ ನೋಟಿಫಿಕೇಷನ್ ಅನ್ನು ಸಹ ಹೊಂದಿರಬೇಕು. ಉನ್ನತ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಅಲಾರ್ಮ್ ನೋಟಿಫಿಕೇಶನ್ ಲಭ್ಯವಿದ್ದು, ಯಾವುದೇ ಅಪರಿಚಿತ ವಸ್ತುವು ಅವರ ಬಳಿ ಬಂದಾಗ, ಅಲಾರಂ ಜೋರಾಗಿ ರಿಂಗಣಿಸಲು ಪ್ರಾರಂಭಿಸುತ್ತದೆ ಮತ್ತು ನೋಟಿಫಿಕೇಷನ್ ಅನ್ನು ಸ್ವೀಕರಿಸಲಾಗುತ್ತದೆ.

ಎಚ್ಚರ ವಹಿಸಿ:

ಕೆಲವು ಸಂದರ್ಭಗಳಲ್ಲಿ, ಸುರಕ್ಷತೆಗಾಗಿ ನೀವು ಹಾಕಿದ ಸಿಸಿಟಿವಿ ನಿಮಗೆ ಸಮಸ್ಯೆಯಾಗಬಹುದು. ಯಾರೊಬ್ಬರ ಆತ್ಮೀಯ ಛಾಯಾಚಿತ್ರಗಳು ಅಥವಾ ಖಾಸಗಿ ದೃಶ್ಯಗಳನ್ನು ಸಿಸಿಟಿವಿ ಮೂಲಕ ರೆಕಾರ್ಡ್ ಮಾಡಿ ಸಾರ್ವಜನಿಕಗೊಳಿಸಿದರೆ, ಅದು ಐಟಿ ಕಾಯ್ದೆ 2000 ರ ಸೆಕ್ಷನ್ 66E ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ಇದಲ್ಲದೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಹೆಸರಿನಲ್ಲಿ ಯಾರಿಗಾದರೂ ಬೆದರಿಕೆ ಹಾಕುವ ಯಾವುದೇ ಚಟುವಟಿಕೆ ಬೆಳಕಿಗೆ ಬಂದರೆ, ಐಪಿಸಿ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:41 pm, Mon, 26 May 25