Tech Tips: ಸ್ಮಾರ್ಟ್​ಫೋನ್ ಅಪ್​ಡೇಟ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ..?

|

Updated on: Mar 07, 2024 | 12:49 PM

Smartphone Update: ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅನ್ನು ನವೀಕರಿಸಿದಾಗಲೆಲ್ಲಾ ಅದು ಸ್ಮಾರ್ಟ್‌ಫೋನ್‌ನ ವೇಗವನ್ನು ಬಹಳಷ್ಟು ಹೆಚ್ಚಿಸುತ್ತದೆ ಎಂಬುದನ್ನು ನೆನಪಿಡಿ. ಆಗ ಫೋನ್​ನಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಹ್ಯಾಂಗ್ ಆಗುವ ಸಮಸ್ಯೆ ಬರುವುದಿಲ್ಲ. ನೀವು ಮೊಬೈಲ್​ನಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಅಪ್ಡೇಟ್ ಕೊಡಲೇ ಬೇಕು.

Tech Tips: ಸ್ಮಾರ್ಟ್​ಫೋನ್ ಅಪ್​ಡೇಟ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ..?
Smartphone Update
Follow us on

ಸ್ಮಾರ್ಟ್​ಫೋನ್ (Smartphone) ಎಂದಮೇಲೆ ಅದರಲ್ಲಿ ಅಪ್ಡೇಟ್​ಗಳು ಬರುವುದು ಸಾಮಾನ್ಯ. ಆದರೆ ಕೆಲವರು ಅದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಈ ಅಪ್ಡೇಟ್ ಸೂಚನೆ ನಿಮಗೆ ತಿಂಗಳುಗಳವರೆಗೆ ಕಾಣಿಸುತ್ತಲೇ ಇರುತ್ತದೆ. ನೀವು ಅಪ್ಡೇಟ್ ಮಾಡದಿದ್ದರೆ ಸಮಸ್ಯೆ ಏನು?. ಅಪ್ಡೇಟ್ ಕೊಡದಿದ್ದರೆ ನಿಮ್ಮ ಫೋನ್​ನಲ್ಲಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಸಮಯಕ್ಕೆ ಸರಿಯಾಗಿ ಅಪ್ಡೇಟ್ ಆಗದೇ ಇದ್ದಾಗ ಮೊಬೈಲ್ ಬಿಸಿಯಾಗಲು ಪ್ರಾರಂಭಿಸುತ್ತದೆ. ಸೆಕ್ಯುರಿಟಿ ಸಮಸ್ಯೆ ಕಾಣಿಸಬಹುದು. ಫೋನ್ ಹ್ಯಾಕ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿಯೇ ಸ್ಮಾರ್ಟ್​ಫೋನ್ ಸಾಫ್ಟ್ ವೇರ್​ಗಳನ್ನು ಸರಿಯಾದ ಸಮಯಕ್ಕೆ ಅಪ್ಡೇಟ್ ಮಾಡುವುದು ಬಹಳ ಮುಖ್ಯ ಎನ್ನುವುದು ಟೆಕ್ ತಜ್ಞರ ಅಭಿಪ್ರಾಯ.

ಅಪ್ಡೇಟ್ ಮುಖ್ಯವೇ?

ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅನ್ನು ನವೀಕರಿಸಿದಾಗಲೆಲ್ಲಾ ಅದು ಸ್ಮಾರ್ಟ್‌ಫೋನ್‌ನ ವೇಗವನ್ನು ಬಹಳಷ್ಟು ಹೆಚ್ಚಿಸುತ್ತದೆ ಎಂಬುದನ್ನು ನೆನಪಿಡಿ. ಆಗ ಫೋನ್​ನಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಹ್ಯಾಂಗ್ ಆಗುವ ಸಮಸ್ಯೆ ಬರುವುದಿಲ್ಲ. ನೀವು ಮೊಬೈಲ್​ನಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಅಪ್ಡೇಟ್ ಕೊಡಲೇ ಬೇಕು. ನೀವು ನಿಮ್ಮ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಅನ್ನು ದೀರ್ಘಕಾಲದವರೆಗೆ ನವೀಕರಿಸದೆ ಬಿಟ್ಟರೆ, ಮದರ್‌ಬೋರ್ಡ್ ಒಂದು ಹಂತದಲ್ಲಿ ಕೆಟ್ಟದಾಗಿ ಹೋಗಬಹುದು. ಪರಿಣಾಮವಾಗಿ, ಫೋನ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ಭಾರತದಲ್ಲಿ ಬಹುನಿರೀಕ್ಷಿತ ನಥಿಂಗ್ ಫೋನ್ 2a ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನಿದೆ ಫೀಚರ್ಸ್

ಹ್ಯಾಕಿಂಗ್​ನಿಂದ ಸುರಕ್ಷಿತವಾಗಿರುತ್ತದೆ

ಫೋನ್ ಅಪ್‌ಡೇಟ್ ಆದ ತಕ್ಷಣ ಫೋನ್‌ನಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅಲ್ಲದೆ ಫೋನಿನ ಸೆಕ್ಯುರಿಟಿ ಕೂಡ ಸಾಕಷ್ಟು ಹೆಚ್ಚುತ್ತದೆ. ಫೋನ್‌ನಲ್ಲಿ ಯಾವುದೇ ದೋಷಗಳು ಅಥವಾ ವೈರಸ್‌ಗಳು ಇದ್ದರೆ, ಅವುಗಳನ್ನು ಅಪ್‌ಡೇಟ್ ಮೂಲಕ ತೆಗೆದುಹಾಕಲಾಗುತ್ತದೆ. ಹಾಗಾಗಿ ಈ ಸೈಬರ್ ಕ್ರೈಮ್ ಜಗತ್ತಿನಲ್ಲಿ ಫೋನ್ ಅನ್ನು ಹ್ಯಾಕಿಂಗ್ ನಿಂದ ರಕ್ಷಿಸಲು ಸರಿಯಾದ ಸಮಯಕ್ಕೆ ಸ್ಮಾರ್ಟ್​ಫೋನ್ ಸಾಫ್ಟ್ ವೇರ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.

ಕ್ಯಾಮೆರಾ ಪ್ರಿಯರನ್ನು ದಂದಾಗಿಸಿರುವ ಒಪ್ಪೋ F25 ಪ್ರೊ 5G ಸ್ಮಾರ್ಟ್​ಫೋನ್ ಮಾರಾಟ ಆರಂಭ

ಹಾಗೆಯೆ ನಿಮ್ಮ ಫೋನ್‌ಗೆ ನವೀಕರಣಗಳು ಅಂದರೆ ಅಪ್ಡೇಟ್ ಬರುವುದು ನಿಂತಾಗ, ಫೋನ್ ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥಮಾಡಿಕೊಳ್ಳಿ. ಕಂಪನಿಗಳು ಅಪ್ಡೇಟ್ ನೀಡುವುದು ಏಕೆಂದರೆ ನಿಮ್ಮ ಸ್ಮಾರ್ಟ್​ಫೋನ್​ಗಳಿಗೆ ಯಾವುದೇ ತೊಂದರೆ ಅಥವಾ ವೈರಸ್ ಅಟ್ಯಾಕ್ ಆಗದಿರಲಿ ಮತ್ತು ಸುರಕ್ಷತೆಗಾಗಿ ನವೀಕರಣಗಳನ್ನು ನೀಡಲಾಗುತ್ತದೆ. ಈ ಅಪ್ಡೇಟ್ ನೀಡುವುದನ್ನು ಕಂಪನಿ ನಿಲ್ಲಿಸಿದಾಗ ಫೋನ್ ಬದಲಾವಣೆ ಮಾಡುವುದು ಉತ್ತಮ ನಿರ್ಧಾರ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Thu, 7 March 24