Kannada News Technology Tech Tips How to download Aadhaar Card, PAN Card through WhatsApp Follow These steps
WhatsApp: ವಾಟ್ಸ್ಆ್ಯಪ್ ಮೂಲಕ ಆಧಾರ್ ಕಾರ್ಡ್, ಪಾನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
Aadhaar and PAN Card: MyGov ಹೆಲ್ಪ್‌ಡೆಸ್ಕ್ ವಾಟ್ಸ್ಆ್ಯಪ್ಗೆಂದು ಸಹಾಯವಾಣಿ ನಂಬರ್ ಒಂದನ್ನು ನೀಡಿದ್ದು ಇದರ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ದಾಖಲೆಗಳನ್ನು ನೀವು ವಾಟ್ಸ್ಆ್ಯಪ್ನಲ್ಲೇ ಪಡೆಯಬಹುದು.
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇಂದು ಕೇವಲ ಚಾಟ್ ಮಾಡಲು, ಫೋಟೋ, ವಿಡಿಯೋ ಕಳುಹಿಸಲು ಮಾತ್ರ ಸೀಮಿತವಾಗಿಲ್ಲ. ಇದುಬಿಟ್ಟು ಅನೇಕ ಪ್ರಯೋಜನಗಳಿವೆ. ಭಾರತದಲ್ಲಿ ವಾಟ್ಸ್ಆ್ಯಪ್ ಬಳಕೆದಾರರು ಪ್ಯಾನ್ ಕಾರ್ಡ್ (Pan Card), ಆಧಾರ್ ಕಾರ್ಡ್ (Aadhaar Card), ಡ್ರೈವಿಂಗ್ ಲೈಸೆನ್ಸ್ ವಿಮಾ ಪಾಲಿಸಿ ಸೇರಿದಂತೆ ಅನೇಕ ದಾಖಲೆಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದಕ್ಕಾಗಿ MyGov ತನ್ನ ವಾಟ್ಸ್ಆ್ಯಪ್ ಚಾಟ್‌ಬಾಟ್‌ನಲ್ಲಿ ಸೇವೆಯನ್ನು ನೀಡಿದ್ದು, ಇದರ ಸಹಾಯದಿಂದ ‘ಡಿಜಿಲಾಕರ್‘ ಖಾತೆಯನ್ನು ರಚಿಸುವುದು ಮತ್ತು ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಆಧಾರ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರದಂತಹ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
MyGov ಹೆಲ್ಪ್‌ಡೆಸ್ಕ್ ವಾಟ್ಸ್ಆ್ಯಪ್ಗೆಂದು ಸಹಾಯವಾಣಿ ನಂಬರ್ ಒಂದನ್ನು ನೀಡಿದ್ದು ಇದರ ಸಹಾಯದಿಂದ ಡಿಜಿಲಾಕರ್ ಖಾತೆಗೆ ಸೈನ್ ಅಪ್ ಆಗುವ ಮೂಲಕ ದಾಖಲೆಗಳನ್ನು ನೀವು ವಾಟ್ಸ್ಆ್ಯಪ್ನಲ್ಲೇ ಪಡೆಯಬಹುದು. ನೀವು ಈಗಾಗಲೇ ಡಿಜಿಲಾಕರ್ ಅಕೌಂಟ್ ಅನ್ನು ಹೊಂದಿದ್ದರೆ, ದಾಖಲೆಗಳನ್ನು ಪಡೆಯುವುದು ಮತ್ತಷ್ಟು ಸುಲಭವಾಗುತ್ತದೆ.
ವಾಟ್ಸ್ಆ್ಯಪ್ ಮೂಲಕ ಆಧಾರ್–ಪಾನ್ ಡೌನ್‌ಲೋಡ್ ಹೇಗೆ?:
ಇದನ್ನೂ ಓದಿ
Google: ನಾಸಾ ಡಾರ್ಟ್ ಮಿಷನ್ ಯಶಸ್ವಿ: ಗೂಗಲ್ನಿಂದ ವಿಶೇಷ ಸಂಭ್ರಮಾಚರಣೆ
NASA: ಭೂಮಿ ಸೇಫ್: ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದು ದೊಡ್ಡ ಅಪಾಯ ತಪ್ಪಿಸಿದ ನಾಸಾದ ಡಾರ್ಟ್ ನೌಕೆ
PDF File: ಪಿಡಿಫ್ ಫೈಲ್ಗಳ ಪಾಸ್‌ವರ್ಡ್ ರಿಮೂವ್ ಮಾಡಲು ಇಲ್ಲಿದೆ ನೋಡಿ ಟ್ರಿಕ್ಸ್
WhatsApp Uber service: ಇದೀಗ ವಾಟ್ಸ್ಆ್ಯಪ್ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಇಲ್ಲಿದೆ ಸಂಪೂರ್ಣ ಮಾಹಿತಿ
ಮೊದಲು +91-9013151515 ಈ ನಂಬರ್ ಅನ್ನು MyGov HelpDesk ಎಂದು ನಿಮ್ಮ ಫೋನ್ನಲ್ಲಿ ಸೇವ್ ಮಾಡಿ.
ನಂತರ ವಾಟ್ಸ್ಆ್ಯಪ್ ತೆರೆದು MyGov HelpDesk ಚಾಟ್‌ಬಾಟ್‌ನಲ್ಲಿ ‘ನಮಸ್ತೆ‘, ‘ಹಾಯ್‘ ಎಂದು ಟೈಪ್ ಮಾಡಿ ಕಳುಹಿಸಿ.
ಆಗ ಡಿಜಿಲಾಕರ್ ಅಥವಾ ಕೋವಿನ್ ಸೇವೆ ಎಂಬ ಎರಡು ಆಯ್ಕೆ ಕಾಣಿಸುತ್ತದೆ. ಇಲ್ಲಿ ‘ಡಿಜಿಲಾಕರ್ ಸೇವೆಗಳು‘ ಆಯ್ಕೆಮಾಡಿ.
ಈಗ ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಚಾಟ್‌ಬಾಟ್ ಕೇಳಿದಾಗ ‘ಹೌದು‘ ಟ್ಯಾಪ್ ಮಾಡಿ.
ನೀವು ಖಾತೆ ಹೊಂದಿಲ್ಲದಿದ್ದರೆ ಅಧಿಕೃತ ವೆಬ್‌ಸೈಟ್ ಅಥವಾ ಡಿಜಿಲಾಕರ್ ಅಪ್ಲಿಕೇಶನ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಖಾತೆಯನ್ನು ರಚಿಸಿ.
ಚಾಟ್‌ಬಾಟ್ ಈಗ ನಿಮ್ಮ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಳುಹಿಸಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಸ್ವೀಕರಿಸುತ್ತೀರಿ. ಅದನ್ನು ಚಾಟ್‌ಬಾಟ್ ನಲ್ಲಿ ನಮೂದಿಸಿ.
ಈಗ ಚಾಟ್‌ಬಾಟ್ ಪಟ್ಟಿಗಳು ನಿಮ್ಮ ಡಿಜಿಲಾಕರ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಎಲ್ಲಾ ದಾಖಲೆಗಳನ್ನು ನಿಮಗೆ ತೋರಿಸುತ್ತದೆ.
ಡೌನ್‌ಲೋಡ್ ಮಾಡಲು, ಕಳುಹಿಸಲಾದ ಡಾಕ್ಯುಮೆಂಟ್ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು ಕಳುಹಿಸಿ.
ಆಗ ನಿಮ್ಮ ಡಾಕ್ಯುಮೆಂಟ್ PDF ರೂಪದಲ್ಲಿ ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.