Tech Tips: ವಾಟ್ಸ್ಆ್ಯಪ್​ನಲ್ಲಿ ಬಂದ ವಾಯ್ಸ್ ಮೆಸೇಜ್ ಅನ್ನು ಟೆಕ್ಟ್ಸ್ ರೂಪದಲ್ಲಿ ನೋಡೋದು ಹೇಗೆ?

| Updated By: Vinay Bhat

Updated on: Jan 20, 2025 | 11:30 AM

WhatsApp Voice Note transcription feature: ವಾಟ್ಸ್ಆ್ಯಪ್ ಸಾಮಾನ್ಯವಾಗಿ ಪಠ್ಯ ಸಂದೇಶಗಳ ಜೊತೆಗೆ ಧ್ವನಿ ಸಂದೇಶಗಳನ್ನು ಕಳುಹಿಸಬಹುದು ಎಂದು ಎಲ್ಲರಿಗೂ ತಿಳಿದಿದೆ. ಅನೇಕ ಜನರು ಯಾವುದಾದರು ಅಗತ್ಯ ಕೆಲಸದಲ್ಲಿದ್ದಾಗ ಅಥವಾ ಡ್ರೈವಿಂಗ್ ಮಾಡುತ್ತಿರುವಾಗ ಬರೆಯಲು ಕಷ್ಟವಾಗುವುದಕ್ಕೆ ಈ ಧ್ವನಿ ಸಂದೇಶಗಳನ್ನು ಬಳಸುತ್ತಾರೆ. ಆದರೆ ಆ ಧ್ವನಿ ಸಂದೇಶಗಳನ್ನು ಕೇಳಲು ಕೆಲವರು ಕೆಲವು ಸಂದರ್ಭ ತೊಂದರೆ ಅನುಭವಿಸುತ್ತಾರೆ.

Tech Tips: ವಾಟ್ಸ್ಆ್ಯಪ್​ನಲ್ಲಿ ಬಂದ ವಾಯ್ಸ್ ಮೆಸೇಜ್ ಅನ್ನು ಟೆಕ್ಟ್ಸ್ ರೂಪದಲ್ಲಿ ನೋಡೋದು ಹೇಗೆ?
Whatsapp Voice Message To Text
Follow us on

ಪ್ರಪಂಚದಾದ್ಯಂತ ಲಕ್ಷಾಂತರ ಜನರು ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಇಂದು ವಾಟ್ಸ್​ಆ್ಯಪ್ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ.. ಪ್ರತಿದಿನ ಮೆಟಾ ಒಡೆತನದ ಅಪ್ಲಿಕೇಷನ್ ಬಳಕೆದಾರರನ್ನು ಆಕರ್ಷಿಸಲು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತಲೇ ಇರುತ್ತದೆ. ಕಳೆದ ವರ್ಷ ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಆಯ್ಕೆಯನ್ನು ನೀಡುತ್ತಲೇ ಬಂದ ವಾಟ್ಸ್​ಆ್ಯಪ್ ಈ ವರ್ಷ ಕೂಡ ಅದನ್ನೇ ಮುಂದುವರೆಸುವ ಯೋಜನೆಯಲ್ಲಿದೆ. ಅದರಂತೆ ಇದೀಗ ವಾಟ್ಸ್​ಆ್ಯಪ್ ಅನೇಕ ಜನರು ಎದುರಿಸುತ್ತಿರುವ ಸಮಸ್ಯೆಗೆ ಫುಲ್ ಸ್ಟಾಪ್ ಹಾಕಲು ಮುಂದಾಗಿದೆ.

ವಾಟ್ಸ್​ಆ್ಯಪ್ ಸಾಮಾನ್ಯವಾಗಿ ಪಠ್ಯ ಸಂದೇಶಗಳ ಜೊತೆಗೆ ಧ್ವನಿ ಸಂದೇಶಗಳನ್ನು ಕಳುಹಿಸಬಹುದು ಎಂದು ಎಲ್ಲರಿಗೂ ತಿಳಿದಿದೆ. ಅನೇಕ ಜನರು ಯಾವುದಾದರು ಅಗತ್ಯ ಕೆಲಸದಲ್ಲಿದ್ದಾಗ ಅಥವಾ ಡ್ರೈವಿಂಗ್ ಮಾಡುತ್ತಿರುವಾಗ ಬರೆಯಲು ಕಷ್ಟವಾಗುವುದಕ್ಕೆ ಈ ಧ್ವನಿ ಸಂದೇಶಗಳನ್ನು ಬಳಸುತ್ತಾರೆ. ಇದು ತುಂಬಾ ಉಪಯುಕ್ತವಾದ ಫೀಚರ್ ಆಗಿದೆ.

ಬಹಳ ದೀರ್ಘವಾದ ಪಠ್ಯ ಸಂದೇಶಗಳನ್ನು ಕಳುಹಿಸುವ ಬದಲು, ಅವರು ಹೇಳಲು ಬಯಸುವ ವಿಷಯಗಳನ್ನು ಸಣ್ಣ ಧ್ವನಿ ಸಂದೇಶಗಳ ಮೂಲಕ ಕೂಡ ಹೇಳುತ್ತಿದ್ದಾರೆ. ಆದರೆ ಇದರಲ್ಲಿ ಒಂದು ಸಮಸ್ಯೆ ಇದೆ.. ಆ ಧ್ವನಿ ಸಂದೇಶಗಳನ್ನು ಕೇಳಲು ಕೆಲವರು ಕೆಲವು ಸಂದರ್ಭ ತೊಂದರೆ ಅನುಭವಿಸುತ್ತಾರೆ. ನೀವು ಯಾವುದಾದರು ಸಭೆಯಲ್ಲಿರುವಾಗ, ಚಿತ್ರಮಂದಿರದಲ್ಲಿ ಅಥವಾ ವೈಯಕ್ತಿಕವಾಗಿ ಧ್ವನಿ ಸಂದೇಶಗಳನ್ನು ಕೇಳಲು ಬಯಸಿದಾಗ ಇದು ಸಾಧ್ಯವಾಗುವುದಿಲ್ಲ.

iPhone SE 4: ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು ಅಗ್ಗದ ಐಫೋನ್ ವಿನ್ಯಾಸ: ಹೇಗಿರುತ್ತೆ ಗೊತ್ತಾ..?

ಬಂದಂತಹ ವಾಯ್ಸ್ ಮೆಸೇಜ್ ತುರ್ತು ವಿಷಯವಾದರೆ ಕೇಳಲೂ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾರ್ವಜನಿಕವಾಗಿದ್ದಾಗಲೂ ಕೆಲವೊಮ್ಮೆ ಕೇಳಲಾಗುವುದಿಲ್ಲ. ಇದಕ್ಕೆ ಪರಿಹಾರವೆಂಬಂತೆ ವಾಟ್ಸ್​ಆ್ಯಪ್ ಧ್ವನಿ ಸಂದೇಶಗಳನ್ನು ಪಠ್ಯವಾಗಿ ಪರಿವರ್ತಿಸುವ ಟ್ರಾನ್ಸ್‌ಕ್ರಿಪ್ಟ್ ಆಯ್ಕೆಯನ್ನು ತಂದಿದೆ.

ಪ್ರತಿಲಿಪಿ ಆಯ್ಕೆಯು ನಿಮ್ಮ ಧ್ವನಿ ಸಂದೇಶಗಳನ್ನು ಪಠ್ಯಕ್ಕೆ ಲಿಪ್ಯಂತರ ಮಾಡುತ್ತದೆ. ಅದೂ ಕೂಡ ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ.. ಸದ್ಯ ನಾಲ್ಕು ಭಾಷೆಗಳಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಪ್ರತಿಲಿಪಿಯು ಇಂಗ್ಲಿಷ್, ಫ್ರೆಂಚ್, ರಷ್ಯನ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಲಭ್ಯವಿದೆ. ಇದಕ್ಕಾಗಿ ನೀವು ವಾಟ್ಸ್​ಆ್ಯಪ್ ಸೆಟ್ಟಿಂಗ್ಸ್‌ಗೆ ಹೋಗಿ ಚಾಟ್ಸ್ ಎಂಬ ಆಯ್ಕೆಯಲ್ಲಿ ಟ್ರಾನ್ಸ್‌ಕ್ರಿಪ್ಟ್ ಆಫ್ ಮೆಸೇಜಸ್ ಎಂಬ ಆಯ್ಕೆಯನ್ನು ಆನ್ ಮಾಡಬೇಕು.

ಅದರ ನಂತರ, ನೀವು ಪಡೆಯುವ ಧ್ವನಿ ಸಂದೇಶಗಳನ್ನು ಕ್ಲಿಕ್ ಮಾಡಿ ಮತ್ತು ಹಿಡಿದಿಟ್ಟುಕೊಂಡರೆ, ನೀವು ಆಯ್ಕೆಗಳಲ್ಲಿ ಸಂದೇಶದ ಪ್ರತಿಲೇಖನವನ್ನು ಪಡೆಯುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಸಂಪೂರ್ಣ ಧ್ವನಿ ಸಂದೇಶವನ್ನು ಅದರ ಕೆಳಗಿನ ಪಠ್ಯ ರೂಪದಲ್ಲಿ ನೀವು ನೋಡುತ್ತೀರಿ. ಈ ವೈಶಿಷ್ಟ್ಯವು ಇದೀಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ. ಶೀಘ್ರದಲ್ಲೇ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುವುದಾಗಿ ವಾಟ್ಸ್​ಆ್ಯಪ್ ಪ್ರತಿನಿಧಿಗಳು ಹೇಳಿಕೊಂಡಿದ್ದಾರೆ.

ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಹಾಡು:

ವಾಟ್ಸ್​ಆ್ಯಪ್ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿರುವಂತೆ ಸ್ಟೇಟಸ್​ಗೆ ಹಾಡುಗಳನ್ನು ಸೇರಿಸಬಹುದು. ಪ್ರಸ್ತುತ, ಈ ವೈಶಿಷ್ಟ್ಯವನ್ನು ಆಂಡ್ರಾಯ್ಡ್ 2.25.2.5 ಗಾಗಿ ವಾಟ್ಸ್​ಆ್ಯಪ್ ಬೀಟಾದಲ್ಲಿ ಪರೀಕ್ಷಿಸಲಾಗುತ್ತಿದೆ. ಈ ವೈಶಿಷ್ಟ್ಯವು ಕೆಲವು ಆಯ್ದ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. WABetainfo ಪ್ರಕಾರ, ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದೆ. ಸ್ಟೇಟಸ್ ಆಯ್ಕೆಗೆ ಹೋಗುವ ಮೂಲಕ ಡ್ರಾಯಿಂಗ್ ಎಡಿಟರ್‌ನಲ್ಲಿ ನೀವು ಈ ಹೊಸ ಆಯ್ಕೆಯನ್ನು ಕಾಣಬಹುದು. ನೀವು ಮೆಟಾದ ಮ್ಯೂಸಿಕ್ ಕ್ಯಾಟಲಾಗ್‌ನಿಂದ ಹಾಡುಗಳನ್ನು ಬ್ರೌಸ್ ಮಾಡಲು ಸಾಧ್ಯವಾಗುತ್ತದೆ. ಇನ್​ಸ್ಟಾಘ್ರಾಮ್ ವೈಶಿಷ್ಟ್ಯವು ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ಇದು ಕೆಲಸ ಮಾಡುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ