AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ರೀಚಾರ್ಜ್ ದರ; ಎಸ್​ಟಿವಿ ವ್ಯಾಲಿಡಿಟಿ 365 ದಿನ; ಸಿಮ್ ಡೀಆ್ಯಕ್ಟಿವೇಶನ್ ಕಾಲಮಿತಿ ವಿಸ್ತರಣೆ; ಹೊಸ ಟ್ರಾಯ್ ನಿಯಮಗಳ ತಿಳಿದಿರಿ…

Trai rules update: ಇಂಟರ್ನೆಟ್ ಅವಶ್ಯಕತೆ ಹೆಚ್ಚು ಇಲ್ಲದ ವ್ಯಕ್ತಿಗಳು ಇವತ್ತು ಮೊಬೈಲ್ ನಂಬರ್ ಇಟ್ಟುಕೊಳ್ಳಲು ಹೆಚ್ಚು ಹಣ ತೆರಬೇಕಾಗುತ್ತದೆ. ಇಂಥವರಿಗೆ ಟ್ರಾಯ್ ರಿಲೀಫ್ ಕೊಡುತ್ತಿದೆ. ಕಡಿಮೆ ದರದ ಪ್ಯಾಕೇಜ್​ಗಳನ್ನು ಗ್ರಾಹಕರ ಆಯ್ಕೆಗೆ ಕೊಡಬೇಕೆಂದು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶಿಸಿದೆ. ಇನ್ನು, 90 ದಿನ ಚಟುವಟಿಕೆ ಇಲ್ಲದ ನಂಬರ್​ಗಳನ್ನು ನಿಷ್ಕ್ರಿಯಗೊಳಿಸುವ ವಿಚಾರದಲ್ಲಿ ಟ್ರಾಯ್ ನಿಯಮ ಬದಲಾವಣೆ ಮಾಡಿದೆ, ಗಮನಿಸಿ...

ಕಡಿಮೆ ರೀಚಾರ್ಜ್ ದರ; ಎಸ್​ಟಿವಿ ವ್ಯಾಲಿಡಿಟಿ 365 ದಿನ; ಸಿಮ್ ಡೀಆ್ಯಕ್ಟಿವೇಶನ್ ಕಾಲಮಿತಿ ವಿಸ್ತರಣೆ; ಹೊಸ ಟ್ರಾಯ್ ನಿಯಮಗಳ ತಿಳಿದಿರಿ...
ಮೊಬೈಲ್ ಬಳಸುವವರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 20, 2025 | 5:37 PM

Share

ನವದೆಹಲಿ, ಜನವರಿ 20: ಭಾರತದಲ್ಲಿ ಈಗ ಒಂದಕ್ಕಿಂತ ಹೆಚ್ಚು ಸಿಮ್​ಗಳನ್ನು ಇಟ್ಟುಕೊಳ್ಳುವುದು ದುಬಾರಿ ಎನಿಸುತ್ತದೆ. ಇವತ್ತು ಜಿಯೋ ಒಳಗೊಂಡಂತೆ ಟೆಲಿಕಾಂ ಕಂಪನಿಗಳು ಮುಂದಿಟ್ಟಿರುವ ರೀಚಾರ್ಜ್ ದರಗಳು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿವೆ. ಒಂದು ತಿಂಗಳಲ್ಲಿ ಕನಿಷ್ಠವೆಂದರೂ ನೂರು ರೂ ರೀಚಾರ್ಜ್ ಮಾಡಬೇಕಾಗುತ್ತದೆ. ಈಗ ರೀಚಾರ್ಜ್ ಪ್ಯಾಕ್​ಗಳಲ್ಲಿ ಧ್ವನಿ ಕರೆ ಮತ್ತು ಮೆಸೇಜ್​ಗಳ ಜೊತೆಗೆ ಡಾಟಾವನ್ನೂ ಸೇರಿಸಲಾಗಿರುತ್ತದೆ. ಹೀಗಾಗಿ, ಬೆಲೆ ಹೆಚ್ಚಿದೆ. ಇದೇ ಕಾರಣಕ್ಕೆ ಜನರು ಈಗ ಒಂದಕ್ಕಿಂತ ಹೆಚ್ಚು ಸಿಮ್​ಗಳನ್ನು ಇಟ್ಟುಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ. ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್ ಈ ನಿಟ್ಟಿನಲ್ಲಿ ಒಂದಷ್ಟು ಹೊಸ ನಿಯಮಗಳನ್ನು ತಂದಿದೆ. ಹೆಚ್ಚುವರಿ ಸಿಮ್​ಗಳನ್ನು ಇಟ್ಟುಕೊಂಡಿರುವವರು, ಮತ್ತು ಡಾಟಾ ಅವಶ್ಯಕತೆ ಇಲ್ಲದವರು ಈಗ ನಿಟ್ಟುಸಿರು ಬಿಡಬಹುದು.

ಡಾಟಾ ಸೌಲಭ್ಯ ಇಲ್ಲದ ಪ್ಯಾಕೇಜ್​ಗಳನ್ನೂ ಆಫರ್ ಮಾಡಬೇಕು: ಟ್ರಾಯ್

ಟೆಲಿಕಾಂ ಕಂಪನಿಗಳ ಸ್ಪೆಷಲ್ ಟಾರಿಫ್ ವೋಚರ್​ಗಳ (ಎಸ್​ಟಿವಿ) ವ್ಯಾಲಿಡಿಟಿ ಅವಧಿ 90 ದಿನ ಇದೆ. ಇದನ್ನು 365 ದಿನಗಳವರೆಗೆ ವಿಸ್ತರಿಸಲು ಟ್ರಾಯ್ ನಿಯಮ ಮಾಡಿದೆ. ಹಾಗೆಯೇ, 2ಜಿ ಫೀಚರ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಅವಶ್ಯಕತೆ ಇರುವುದಿಲ್ಲ. ಇಂಥವರಿಗೆ ಧ್ವನಿ ಮತ್ತು ಎಸ್ಸೆಮ್ಮೆಸ್ ಸರ್ವಿಸ್​ನೊಳಗೊಂಡ ಪ್ಯಾಕೇಜ್​ಗಳನ್ನು ಆಫರ್ ಮಾಡಬೇಕು ಎಂದೂ ಟ್ರಾಯ್ ಆದೇಶಿಸಿದೆ. ಹೀಗಾಗಿ, ಡಾಟಾ ರಹಿತವಾದ ಪ್ಯಾಕೇಜ್​ಗಳ ಆಯ್ಕೆಗಳನ್ನು ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ನೀಡಬೇಕಾಗುತ್ತದೆ. ಈ ನಿಯಮಗಳನ್ನು ಟೆಲಿಕಾಂ ಕಂಪನಿಗಳು ಯಾವಾಗಿನಿಂದ ಪಾಲಿಸುತ್ತವೆ ಕಾದುನೋಡಬೇಕು.

ಇದನ್ನೂ ಓದಿ: ಅಗ್ಗದ ಪ್ಲ್ಯಾನ್ ತರಲು ಜಿಯೋ, ಏರ್ಟೆಲ್, ವಿಗೆ ಟ್ರಾಯ್ ಖಡಕ್ ಆದೇಶ

90 ದಿನಗಳ ಕಾಲ ಸಿಮ್ ಬಳಸದಿದ್ದರೆ?

ಈಗ ಜನರು ವಾಟ್ಸಾಪ್, ಇಂಟರ್ನೆಟ್ ಇತ್ಯಾದಿ ಬಳಕೆಗೆ ಒಂದು ಸಿಮ್ ಇಟ್ಟುಕೊಂಡಿರುತ್ತಾರೆ. ಕರೆಗಳಿಗೆ ಮಾತ್ರ ಸೀಮಿತವಾಗಿರುವ ಒಂದು ಬ್ಯಾಕಪ್ ನಂಬರ್ ಅನ್ನೂ ಇಟ್ಟುಕೊಂಡಿರುತ್ತಾರೆ. ಆದರೆ, ಈ ಬ್ಯಾಕಪ್ ನಂಬರ್​ಗೆ ಡಾಟಾ ಸೌಲಭ್ಯ ಅವಶ್ಯಕತೆ ಇರುವುದಿಲ್ಲವಾದರೂ ದುಬಾರಿ ಹಣ ಕೊಟ್ಟು ಅದನ್ನು ಉಳಿಸಿಕೊಳ್ಳಲು ಹೆಣಗಬೇಕಾಗುತ್ತದೆ.

ಈ ಎರಡನೇ ಸಿಮ್​ಗಳನ್ನು ಜನರು ಬ್ಯಾಕಪ್ ಉದ್ದೇಶದಿಂದ ಇಟ್ಟುಕೊಳ್ಳುವುದರಿಂದ ದಿನನಿತ್ಯ ಬಳಕೆ ಮಾಡದೇ ಇರಬಹುದು. ಹಳೆಯ ನಿಯಮದ ಪ್ರಕಾರ ಒಂದು ನಂಬರ್​ಗೆ ಯಾವುದೇ ಒಳ ಕರೆ ಮತ್ತು ಆ ನಂಬರ್​ನಿಂದ ಯಾವುದೇ ಹೊರ ಕರೆ 90 ದಿನಗಳಲ್ಲಿ ಒಮ್ಮೆಯೂ ಆಗದೇ ಹೋದರೆ ಅಂಥ ಸಿಮ್ ಅನ್ನು ಡೀಆ್ಯಕ್ಟಿವೇಟ್ ಮಾಡಲಾಗುತ್ತದೆ. ಈ ರೀತಿ ಫಜೀತಿಗೆ ಒಳಗಾಗವುದನ್ನು ತಪ್ಪಿಸಲು ಟ್ರಾಯ್​ನಿಂದ ಮತ್ತೊಂದು ನಿಯಮ ರೂಪಿಸಲಾಗಿದೆ.

ಒಂದು ವೇಳೆ ನಿಮ್ಮ ಸಿಮ್ 90 ದಿನ ಕಾಲ ನಿಷ್ಕ್ರಿಯವಾಗಿದ್ದು, ಅದರಲ್ಲಿ ಕನಿಷ್ಠ 20 ರೂ ಪ್ರೀಪೇಯ್ಡ್ ಬ್ಯಾಲನ್ಸ್ ಇದ್ದಲ್ಲಿ ನೀವು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಇಂಥ ಸಂದರ್ಭದಲ್ಲಿ 90 ದಿನಗಳ ಬಳಿಕ ಸಿಮ್ ಮತ್ತಷ್ಟು 30 ದಿನ ಆ್ಯಕ್ಟಿವ್ ಆಗಿರುತ್ತದೆ.

ಇದನ್ನೂ ಓದಿ: ಪಿಎಲ್​ಐ ಸ್ಕೀಮ್; 84 ಎಸಿ ಮತ್ತು ಎಲ್​ಇಡಿ ತಯಾರಕ ಕಂಪನಿಗಳಿಂದ 10,478 ಕೋಟಿ ರೂ ಹೂಡಿಕೆ ನಿರೀಕ್ಷೆ

ಪ್ರೀಪೇಯ್ಡ್ ಬ್ಯಾಲನ್ಸ್ ಇಲ್ಲದೇ ಹೋದರೆ…?

ಒಂದು ವೇಳೆ ನಿಮ್ಮ ಸಿಮ್​ಗೆ ಕನಿಷ್ಠ 20 ರೂಗಳ ಪ್ರೀಪೇಯ್ಡ್ ಬ್ಯಾಲನ್ಸ್ ಇಲ್ಲ ಎಂದಿಟ್ಟುಕೊಳ್ಳಿ. ಆಗ 90 ದಿನ ಸತತವಾಗಿ ಸಿಮ್ ನಿಷ್ಕ್ರಿಯವಾಗಿದ್ದರೆ ಅದನ್ನು ಡೀಆ್ಯಕ್ಟಿವೇಟ್ ಮಾಡುವ ಸಂಭವ ಇರುತ್ತದೆ. ಆದಾಗ್ಯೂ ನಿಮಗೆ 15 ದಿನಗಳ ಕಾಲ ಗ್ರೇಸ್ ಪೀರಿಯಡ್ ಇರುತ್ತದೆ. 90 ದಿನ ನಿಷ್ಕ್ರಿಯ ಅವಧಿ ಮುಗಿದಿರುವುದು ಗಮನಕ್ಕೆ ಬಂದ ಕೂಡಲೇ ಕಸ್ಟಮರ್ ಕೇರ್ ಸೆಂಟರ್​ಗೆ ಹೋಗಿ ರೀಆ್ಯಕ್ಟಿವೇಶನ್ ಮಾಡಿಸಲು ಅವಕಾಶ ಇದೆ.

ಸಿಮ್ ಡೀಆ್ಯಕ್ಟಿವೇಟ್ ಆದರೆ ಏನಾಗುತ್ತದೆ?

ಒಂದು ವೇಳೆ, ನಿಮ್ಮ ಸಿಮ್ ಡೀಆ್ಯಕ್ಟಿವೇಟ್ ಆದಲ್ಲಿ ಅದನ್ನು ಮರಳಿಪಡೆಯಲು ಆಗುವುದಿಲ್ಲ. ಆ ನಂಬರ್ ಅನ್ನು ಮರು ಹಂಚಿಕೆ ಮಾಡಲಾಗುತ್ತದೆ. ಬೇರೆ ಹೊಸ ಸಿಮ್ ಖರೀದಿದಾರರಿಗೆ ಆ ನಂಬರ್​ನ ಸಿಮ್ ಹೋಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!