ಇಂದು ಸ್ಮಾರ್ಟ್‌ಫೋನ್ (Smartphone) ನಮ್ಮ ಜೀವನದ ಮುಖ್ಯ ಸಾಧನವಾಗಿದೆ. ಈ ಜಗತ್ತಿನಲ್ಲಿ ಫೋನ್ ಬಳಸದೇ ಇರುವ ಜನರನ್ನು ಹುಡುಕುವುದು ಕಷ್ಟ. ಫೋನ್ ಸಹಾಯದಿಂದ ನಾವು ಸುಲಭವಾಗಿ ಅನೇಕ ಕೆಲಸಗಳನ್ನು ಮಾಡಬಹುದು. ಆದರೆ, ಅಗತ್ಯ ಕೆಲಸ ಇರುವಂತಹ ಪರಿಸ್ಥಿತಿಯಲ್ಲಿ ಕಾಡುವ ದೊಡ್ಡ ಸಮಸ್ಯೆ ಎಂದರೆ ಫೋನಿನ ಬ್ಯಾಟರಿ. ನೀವು ಫೋನ್ ಅನ್ನು ಎಷ್ಟು ಹೆಚ್ಚು ಬಳಸುತ್ತೀರೋ ಅಷ್ಟು ಬೇಗ ಚಾರ್ಜ್ ಖಾಲಿ ಆಗತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಆಗಾಗ್ಗೆ ಫೋನ್ ಅನ್ನು ಚಾರ್ಜ್ ಮಾಡುತ್ತೀರಿ. ಅನೇಕ ಜನರು ಎಮರ್ಜೆನ್ಸಿ ಎಂದು ತಮ್ಮ ಫೋನ್ ಅನ್ನು ಯಾವುದೋ ಚಾರ್ಜರ್ ಮೂಲಕ ಚಾರ್ಜ್ ಮಾಡುತ್ತಾರೆ. ಹೀಗೆ ಫೋನ್ ಅನ್ನು ಬೇರೊಬ್ಬರ ಚಾರ್ಜರ್‌ನಿಂದ ಚಾರ್ಜ್ ಮಾಡುವುದು ಸರಿಯೇ?.
ಅನೇಕ ಬಾರಿ ಜನರು ತಮ್ಮ ಫೋನ್ ಚಾರ್ಜರ್ ಹೊಂದಿಲ್ಲದಿದ್ದರೆ ಅಥವಾ ಅದನ್ನು ಮರೆತು ಬಿಟ್ಟಿದ್ದರೆ ಅವರು ತಮ್ಮ ಫೋನ್ ಫ್ರೆಂಡ್ ಮೊಬೈಲ್ ಚಾರ್ಜರ್‌ನಿಂದ ಅಥವಾ ಯಾವುದೊ ಕಂಪನಿಯ ಅಗ್ಗದ ಚಾರ್ಜರ್ ಅನ್ನು ಮಾರುಕಟ್ಟೆಯಿಂದ ತಂದು ಫೋನ್ ಅನ್ನು ಚಾರ್ಜ್ ಮಾಡಲು ಪ್ರಾರಂಭಿಸುತ್ತಾರೆ. ನೀವೂ ಸಹ ಆಗಾಗ ಬೇರೆಯವರ ಚಾರ್ಜರ್ ಮೂಲಕ ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುತ್ತಿದ್ದರೆ ಈ ಸುದ್ದಿ ನಿಮಗಾಗಿ. ವಾಸ್ತವವಾಗಿ, ಫೋನ್ ಅನ್ನು ಮತ್ತೊಂದು ಚಾರ್ಜರ್ನೊಂದಿಗೆ ಚಾರ್ಜ್ ಮಾಡುವುದರಿಂದ ಫೋನಿನ ಬ್ಯಾಟರಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇಂಟರ್ನೆಟ್ ಇಲ್ಲದೇ ಟ್ರೈನ್ ಲೈವ್ ಲೊಕೇಶನ್ ತಿಳಿಯುವುದು ಹೇಗೆ?: ಇಲ್ಲಿದೆ ಟ್ರಿಕ್
ನಾವು ಮನೆಯಿಂದ ಹೊರಗಿರುವಾಗ ಮತ್ತು ನಮ್ಮ ಸ್ವಂತ ಚಾರ್ಜರ್ ಇಲ್ಲದಿದ್ದಾಗ ನಮ್ಮ ಫೋನ್ ಅನ್ನು ಬೇರೆಯವರ ಚಾರ್ಜರ್ ಮೂಲಕ ಚಾರ್ಜ್ ಮಾಡುತ್ತೇವೆ. ಇಲ್ಲವಾದಲ್ಲಿ ಫೋನ್ ಚಾರ್ಜರ್‌ಗಳು ಕೆಟ್ಟುಹೋದಾಗ, ಅಗ್ಗದ ಚಾರ್ಜರ್‌ಗಳನ್ನು ಖರೀದಿಸುತ್ತೇವೆ. ಹೀಗೆ ಬೇರೊಬ್ಬರ ಚಾರ್ಜರ್ ಬಳಸಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಿದರೆ, ಬ್ಯಾಟರಿ ಘಟಕಗಳಿಗೆ ಹಾನಿಯಾಗುವ ಅಪಾಯವಿದೆ.
ಬೇರೆಯವರ ಚಾರ್ಜರ್ ಬಳಸಿ ಫೋನ್ ಚಾರ್ಜ್ ಮಾಡುವುದು ಫೋನ್ ಬ್ಯಾಟರಿ ಹಾಳಾಗಲು ಮುಖ್ಯ ಕಾರಣ. ಏಕೆಂದರೆ, ಉದಾಹರಣೆಗೆ ನಿಮ್ಮ ಫೋನ್‌ನ ಬ್ಯಾಟರಿ 10 ವ್ಯಾಟ್ ಚಾರ್ಜರ್ ಅನ್ನು ಬೆಂಬಲಿಸುವ ಸಾಮರ್ಥ್ಯ ಮಾತ್ರ ಹೊಂದಿದೆ ಎಂದು ಕೊಳ್ಳೋಣ. ಆದರೆ, ನಿಮ್ಮ ಸ್ನೇಹತನ ಚಾರ್ಜರ್ 50 ವ್ಯಾಟ್ ಚಾರ್ಜರ್ ಬೆಂಬಲಿಸುತ್ತಿದ್ದರೆ, ನೀವು ಅದನ್ನು ಹೆಚ್ಚಿನ ವ್ಯಾಟ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡುತ್ತಿದ್ದೀರಿ ಎಂದರ್ಥ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಟರಿಯು ಒತ್ತಡಕ್ಕೆ ಒಳಗಾಗುತ್ತದೆ. ಆಗ ಫೋನ್ ಸ್ಫೋಟಗೊಳ್ಳಬಹುದು ಅಥವಾ ಬ್ಯಾಟರಿ ಹಾಳಾಗಬಹುದು.
ಭಾರತದಲ್ಲಿ ಬಿಡುಗಡೆ ಆಯಿತು ಬಹುನಿರೀಕ್ಷಿತ ವಿವೋ Y200e 5G ಸ್ಮಾರ್ಟ್‌ಫೋನ್: ಬೆಲೆ ಎಷ್ಟು?
ಮೊಬೈಲ್ ಫೋನ್‌ಗಳನ್ನು ಯಾವಾಗಲೂ ಅದರೊಂದಿಗೆ ಬರುವ ಚಾರ್ಜರ್‌ನೊಂದಿಗೆ ಮಾತ್ರ ಚಾರ್ಜ್ ಮಾಡಬೇಕು. ಅನೇಕ ಬಾರಿ, ಕೆಲವು ಕಾರಣಗಳಿಂದ ಫೋನ್ ಚಾರ್ಜರ್ ಕೆಟ್ಟು ಹೋದರೆ, ಅದರ ಒರಿಜಿನಲ್ ಚಾರ್ಜರ್ ಅನ್ನು ಮಾತ್ರ ಖರೀದಿಸಿ. ಹಣದ ದುರಾಸೆಯಿಂದ ಅಗ್ಗದ ಚಾರ್ಜರ್ ಖರೀದಿಸುಚ ಕೆಲಸ ಮಾಡಬೇಡಿ, ಇದರಿಂದ ನಿಮ್ಮ ಫೋನ್ ಬ್ಯಾಟರಿ ಹಾಳಾಗಬಹುದು. ಸ್ವಲ್ಪ ಹಣವನ್ನು ಉಳಿಸಲು, ನೀವು ನಂತರ ನಿಮ್ಮ ಫೋನ್ ಅನ್ನೇ ಬದಲಾಯಿಸುವ ಪ್ರಸಂಗ ಬರಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ