Tech Tips: ಲ್ಯಾಪ್‌ಟಾಪ್ ಇದ್ದಕ್ಕಿದ್ದಂತೆ ನಿಧಾನವಾಗುತ್ತಿದೆಯೇ?: ಜಸ್ಟ್ ಹೀಗೆ ಮಾಡಿದ್ರೆ ಸೂಪರ್ ಸ್ಪೀಡ್ ಆಗುತ್ತೆ

|

Updated on: Mar 23, 2024 | 12:12 PM

Laptop Speed Tricks: ಮಾರುಕಟ್ಟೆಯಲ್ಲೀಗ ಅತ್ಯುತ್ತಮ ಲ್ಯಾಪ್‌ಟಾಪ್‌ಗಳು ಇದ್ದರೂ, ಬಳಕೆ ಮಾಡುವಾಗ ಕೆಲವೊಮ್ಮೆ ಅವುಗಳು ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡುತ್ತದೆ. ಹೀಗೆ ನಿಮ್ಮ ಲ್ಯಾಪ್​ಟಾಪ್ ಸ್ಲೋ ಆಗಿದ್ದರೆ ಕೆಲ ಟ್ರಿಕ್ ಮೂಲಕ ಸೂಪರ್ ಫಾಸ್ಟ್ ಮಾಡಬಹುದು.

Tech Tips: ಲ್ಯಾಪ್‌ಟಾಪ್ ಇದ್ದಕ್ಕಿದ್ದಂತೆ ನಿಧಾನವಾಗುತ್ತಿದೆಯೇ?: ಜಸ್ಟ್ ಹೀಗೆ ಮಾಡಿದ್ರೆ ಸೂಪರ್ ಸ್ಪೀಡ್ ಆಗುತ್ತೆ
laptop slow
Follow us on

ಲ್ಯಾಪ್‌ಟಾಪ್‌ನಲ್ಲಿ (Laptop) ಇಂಪಾರ್ಟೆಂಟ್ ಕೆಲಸವನ್ನು ಮಾಡುವಾಗ ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಎಲ್ಲಿಲ್ಲದ ಕೋಪ ಬರುತ್ತದೆ. ಅನೇಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಈ ಸಮಸ್ಯೆಯನ್ನು ಹೇಗೆ ಹೋಗಲಾಡಿಸಬೇಕು ಎಂದು ಅನೇಕರಿಗೆ ತಿಳಿದಿಲ್ಲ. ಬೆಳಗ್ಗಿನಿಂದ ರಾತ್ರಿಯವರೆಗೂ ಲ್ಯಾಪ್‌ಟಾಪ್, ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿರುವಾಗ ಇದನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ನೀವು ಸರ್ವಿಸ್ ಸೆಂಟರ್​ಗೆ ಭೇಟಿ ನೀಡಬೇಕಾಗಿಲ್ಲ ಅಥವಾ ಹಣವನ್ನು ಖರ್ಚು ಮಾಡಬೇಕಾಗಿಲ್ಲ. ನೀವು ಇದನ್ನು ಮನೆಯಲ್ಲಿಯೇ ಸರಿಪಡಿಸಬಹುದು. ಇಲ್ಲಿದೆ ನೋಟಿ ಟಿಪ್ಸ್.

ಲ್ಯಾಪ್‌ಟಾಪ್​ನಲ್ಲಿ ಕೆಲಸ ಮಾಡುವಾಗ ಅನೇಕರು ಜನರು ಐದು-ಆರು ಟ್ಯಾಬ್ ತೆರೆದು ಇಟ್ಟುಕೊಂಡಿರುತ್ತಾರೆ. ಆದರೆ ಹೀಗೆ ಮಾಡಿದಾಗ ಲ್ಯಾಪ್‌ಟಾಪ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನೆನಪಿಡಬೇಕಾದ ಒಂದು ವಿಷಯವೆಂದರೆ, ನಿಮ್ಮ ಬ್ರೌಸರ್‌ನಲ್ಲಿ ನೀವು ಹೆಚ್ಚು ಟ್ಯಾಬ್‌ಗಳನ್ನು ತೆರೆದರೆ RAM ಅಥವಾ ಪ್ರೊಸೆಸರ್ ಹೆಚ್ಚು ಒತ್ತಡವನ್ನು ಪಡೆಯುತ್ತದೆ. ಪರಿಣಾಮ, ಅದು ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಆದ್ದರಿಂದ ಕಡಿಮೆ ಟ್ಯಾಬ್‌ಗಳನ್ನು ತೆರೆದಿರುವಂತೆ ಕೆಲಸ ಮಾಡಿ. ಅಗತ್ಯವಿರುವ ಟ್ಯಾಬ್ ಅನ್ನು ಮಾತ್ರ ತೆರೆದಿಡಿ.

ಇದು ಏರ್‌ಟೆಲ್‌ನ ಬಂಪರ್ ಪ್ಲಾನ್: ಕೇವಲ 49 ರೂ. ಗೆ ಅನಿಯಮಿತ ಡೇಟಾ

ಅಂತೆಯೆ ಕೆಲವೊಮ್ಮೆ ನಿಮಗೆ ತಿಳಿಯದೆಯೇ ಲ್ಯಾಪ್‌ಟಾಪ್‌ನ ಬ್ಯಾಕ್​ಗ್ರೌಂಡ್​ನಲ್ಲಿ ಕೆಲ ಪ್ರೋಗ್ರಾಂಗಳು ಚಾಲನೆಯಲ್ಲಿರುತ್ತವೆ. ಇದರಿಂದ ಕೂಡ ಲ್ಯಾಪ್‌ಟಾಪ್ ನಿಧಾನವಾಗುತ್ತದೆ. ಇದಕ್ಕಾಗಿ ಣಿವು Ctrl+Shift+Esc ಅನ್ನು ಒಟ್ಟಿಗೆ ಒತ್ತುವ ಮೂಲಕ ಟಾಸ್ಕ್ ಮ್ಯಾನೇಜರ್​ಗೆ ಹೋಗಿ. ಅಲ್ಲಿ ಲಿಸ್ಟ್ ನೋಡುವ ಮೂಲಕ ಪರಿಶೀಲಿಸಬಹುದು. ಬ್ಯಾಕ್​ಗ್ರೌಂಡ್​ನಲ್ಲಿ ಯಾವ ಪ್ರೋಗ್ರಾಂಗಳು ಅನಗತ್ಯವಾಗಿ ಚಾಲನೆಯಲ್ಲಿವೆ ಎಂದು ನಿಮಗೆ ತಿಳಿಯುತ್ತದೆ. ಬೇಡವಾದ ಪ್ರೋಗ್ರಾಂ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ನಂತರ ‘ಎಂಡ್ ಟಾಸ್ಕ್’ ಮೇಲೆ ಕ್ಲಿಕ್ ಮಾಡಿದರೆ ಕ್ಲೋಸ್ ಆಗುತ್ತದೆ.

ಇನ್ನು ಆಪರೇಟಿಂಗ್ ಸಿಸ್ಟಂ ಅನ್ನು ರಿ ಇನ್‌ಸ್ಟಾಲ್ ಮಾಡಿಕೊಂಡರೆ ಲ್ಯಾಪ್​ಟಾಪ್ ವೇಗವಾಗಿ ಕೆಲಸ ಮಾಡುತ್ತದೆ. ಇದು ಸ್ವಲ್ಪ ಸಂಕೀರ್ಣವಾಗಿರುವುದರಿಂದ ನುರಿತವರ ಸಲಹೆ ಪಡೆದುಕೊಳ್ಳಿ. ಫಾರ್ಮ್ಯಾಟ್ ಮಾಡಿ ನೂತನವಾಗಿ ಆಪರೇಟಿಂಗ್ ಸಿಸ್ಟಂ ಹಾಕಿಕೊಂಡರೆ, ಕಂಪ್ಯೂಟರ್‌ನ ತಂತ್ರಾಂಶವು ಹೊಚ್ಚ ಹೊಸದರಂತೆ ಆಗುತ್ತದೆ.

ಮಾರುಕಟ್ಟೆಗೆ ದಿಢೀರ್ ಎಂಟ್ರಿಕೊಟ್ಟ ಹೊಸ ರಿಯಲ್ ಮಿ 12X ಸ್ಮಾರ್ಟ್​ಫೋನ್: ಬೆಲೆ ಎಷ್ಟು?

ಅಂತೆಯೆ ಯಾವುದೇ ಪ್ರೋಗ್ರಾಂ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗಲೇ, ಅದರ ಅಗತ್ಯ ಇದೆಯೇ ಎಂದು ಎರಡೆರಡು ಬಾರಿ ಯೋಚಿಸಿ. ನಿಮಗೆ ಎಲ್ಲ ಪ್ರೋಗ್ರಾಂಗಳೂ ಉಪಯೋಗಕ್ಕೆ ಬರಲಾರವು. ಹಾಗಾಗಿ, ಉಪಯೋಗಕ್ಕೆ ಬರದಂತಹ ಪ್ರೋಗ್ರಾಂಗಳನ್ನು ಹುಡುಕಿ ಅವುಗಳನ್ನು ಮಾತ್ರ ಅನ್‌ಇನ್‌ಸ್ಟಾಲ್ ಮಾಡಿಬಿಡಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ