
ಬೆಂಗಳೂರು (ಸೆ. 26): ಫ್ಲಿಪ್‌ಕಾರ್ಟ್ (Flipkart) ಮತ್ತು ಅಮೆಜಾನ್‌ಗಳಲ್ಲಿ ಹಬ್ಬದ ಮಾರಾಟ ನಡೆಯುತ್ತಿದೆ. ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಹಾಗೂ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಆಯೋಜಿಸಲಾಗಿದೆ. ಈ ಸಮಯದಲ್ಲಿ ಅನೇಕ ಜನರು ಆಫರ್‌ಗಳಿಗೆ ಮೋಹಗೊಂಡು ಹೆಚ್ಚಿನ ರಿಯಾಯಿತಿಯೊಂದಿಗೆ ಸ್ಮಾರ್ಟ್ಫೋನ್ಗಳನ್ನು ಖರೀದಿಸುತ್ತಾರೆ. ಆದರೆ, ಫೋನ್ ಖರೀದಿಸುವ ಮೊದಲು ನೀವು ನೋಡಬೇಕಾದದ್ದು ಆಫರ್‌ಗಳು ಮತ್ತು ರಿಯಾಯಿತಿಗಳಲ್ಲ. ನೀವು ಹೊಸ ಮೊಬೈಲ್ ಫೋನ್ ಖರೀದಿಸಬೇಕೆಂದಾಗ, ಬೆಲೆಯನ್ನು ಮಾತ್ರ ಪರಿಗಣಿಸದೆ, ಅದು ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆಯೇ ಎಂಬುದನ್ನು ಸಹ ಪರಿಗಣಿಸಬೇಕು.
2025 ಕ್ಕೆ ಸೂಕ್ತವಾದ ವೈಶಿಷ್ಟ್ಯಗಳನ್ನು ನೀವು ಖರೀದಿಸುವ ಹೊಸ ಸ್ಮಾರ್ಟ್ಫೋನ್ ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ಸ್ಮಾರ್ಟ್‌ಫೋನ್ ಖರೀದಿಸುವಾಗ ನೀವು ವಿಶೇಷ ಗಮನ ಹರಿಸಬೇಕಾದ ಕೆಲವು ವೈಶಿಷ್ಟ್ಯಗಳು ಮತ್ತು ಆಯ್ಕೆಗಳಿವೆ. ಅವುಗಳನ್ನು ಈಗ ನೋಡೋಣ.
ಮೊಬೈಲ್ ಖರೀದಿಸುವಾಗ ಮೊದಲು ಪರಿಶೀಲಿಸಬೇಕಾದದ್ದು ಪ್ರೊಸೆಸರ್. ಈ ಪ್ರೊಸೆಸರ್ ಫೋನ್‌ನ ಹೃದಯ ವಿದ್ದಂತೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್, ಮೀಡಿಯಾ ಟೆಕ್, ಸ್ಯಾಮ್‌ಸಂಗ್ ಎಕ್ಸಿನೋಸ್‌ನಂತಹ ಅನೇಕ ಪ್ರೊಸೆಸರ್‌ಗಳು ಲಭ್ಯವಿದೆ. ಯಾವ ಪ್ರೊಸೆಸರ್ ಯಾವ ಬೆಲೆಗೆ ಲಭ್ಯವಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಉತ್ತಮ ಪ್ರೊಸೆಸರ್ ಕಡಿಮೆ ಬೆಲೆಗೆ ಲಭ್ಯವಿದ್ದರೆ, ಅದನ್ನು ಉತ್ತಮ ಡೀಲ್ ಎಂದು ಪರಿಗಣಿಸಲಾಗುತ್ತದೆ.
ಮೊಬೈಲ್ ಖರೀದಿಸುವ ಮೊದಲು ಪರಿಗಣಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ಡಿಸ್ಪ್ಲೇ. ಇವುಗಳಲ್ಲಿ LCD, LED, AMOLED ಮುಂತಾದ ಹಲವು ವಿಧಗಳಿವೆ. ಇವುಗಳಲ್ಲಿ LED ಮತ್ತು AMOLED ಇತ್ತೀಚಿನ ತಂತ್ರಜ್ಞಾನದ ಡಿಸ್ಪ್ಲೇಗಳಾಗಿವೆ. LCD ಸ್ವಲ್ಪ ಹಳೆಯ ತಂತ್ರಜ್ಞಾನ. ಅದು ಅಷ್ಟು ಉತ್ತಮವಾಗಿಲ್ಲದಿರಬಹುದು. ಸ್ಕ್ರೀನ್ ರೆಸಲ್ಯೂಶನ್ ವಿಷಯದಲ್ಲಿ, ನೀವು ಕನಿಷ್ಠ ಪೂರ್ಣ HD ಅಥವಾ ಹೆಚ್ಚಿನದನ್ನು ಆಯ್ಕೆ ಮಾಡಬೇಕು. ಅಂದರೆ, 2K, 4K. ಸಾಮಾನ್ಯ HD ಡಿಸ್ಪ್ಲೇಯನ್ನು ಪಡೆಯುವುದರಿಂದ ಡಿಸ್ಪ್ಲೇ ಗುಣಮಟ್ಟ ಸುಧಾರಿಸುವುದಿಲ್ಲ. ಅಲ್ಲದೆ, ರಿಫ್ರೆಶ್ ದರ ಕನಿಷ್ಠ 90 Hz ಆಗಿರಬೇಕು.
Tech Utility: ಈ ವಸ್ತುಗಳನ್ನು ಫ್ರಿಡ್ಜ್ ಮೇಲೆ ಇಡಬೇಡಿ: ಇಟ್ಟಿದ್ದರೆ ತಕ್ಷಣವೇ ತೆಗೆಯಿರಿ
ಇತ್ತೀಚಿನ ದಿನಗಳಲ್ಲಿ, ಫೋನ್‌ನಲ್ಲಿ ಕ್ಯಾಮೆರಾ ಬಹಳ ಮುಖ್ಯ. ಆದರೆ, ಮೊಬೈಲ್ ಕಂಪನಿಗಳು ಕ್ಯಾಮೆರಾದ ವಿಷಯದಲ್ಲಿ ಮೋಸ ಮಾಡುತ್ತವೆ. ಹೆಚ್ಚು ಮೆಗಾಪಿಕ್ಸೆಲ್‌ಗಳು, ಕ್ಯಾಮೆರಾ ಉತ್ತಮ ಎಂದು ಅವರು ಪ್ರಚಾರ ಮಾಡುತ್ತಾರೆ. ಆದರೆ, ಅದು ನಿಜವಲ್ಲ. ಫೋಟೋ ಗುಣಮಟ್ಟವು ಸಂವೇದಕವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಸ್ಯಾಮ್‌ಸಂಗ್ ಎಸ್ ಸರಣಿಯ 16 MP ಕ್ಯಾಮೆರಾಗಳು ಮತ್ತು ಐಫೋನ್‌ಗಳು ಚೀನೀ ಬ್ರಾಂಡ್‌ಗಳ ಮೊಬೈಲ್‌ಗಳಲ್ಲಿರುವ 200 MP ಕ್ಯಾಮೆರಾಗಳಿಗಿಂತ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ. ಆದ್ದರಿಂದ ಗೂಗಲ್ನಲ್ಲಿ ಕ್ಯಾಮೆರಾ ಗುಣಮಟ್ಟವನ್ನು ಪರಿಶೀಲಿಸುವುದು ಉತ್ತಮ.
ಬ್ಯಾಟರಿ ಮೊಬೈಲ್ನ ಬಹು ಮುಖ್ಯವಾದ ಭಾಗ. ಹಾಗಾಗಿ, ಬ್ಯಾಟರಿ ಸಾಮರ್ಥ್ಯ ಕನಿಷ್ಠ 5000 mAh ಇರುವಂತೆ ನೋಡಿಕೊಳ್ಳಿ. ಅಲ್ಲದೆ, RAM ಕನಿಷ್ಠ 6 GB ಅಥವಾ ಅದಕ್ಕಿಂತ ಹೆಚ್ಚಿರಬೇಕು. ಅಲ್ಲದೆ, ಆಂತರಿಕ ಸಂಗ್ರಹಣೆ 128 GB ಅಥವಾ ಅದಕ್ಕಿಂತ ಹೆಚ್ಚಿದ್ದರೆ ಉತ್ತಮ. ಇವು ನಮ್ಮ ಇಂದಿನ ಲೈಫ್ಸ್ಟೈಲ್ಗೆ ಸೆಟ್ ಆಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ