smartphone service center
ಇಂದಿನ ದಿನಗಳಲ್ಲಿ ಸ್ಮಾರ್ಟ್ಫೋನ್ (Smartphone) ಬಳಕೆ ಅನಿವಾರ್ಯವಾಗಿದೆ. ಇದು ನಮ್ಮ ಅಗತ್ಯ ವಸ್ತುವಾಗಿ ಮಾರ್ಪಟ್ಟಿದೆ. ಸ್ಮಾರ್ಟ್ಫೋನ್ ಕೇವಲ ಕರೆಗಳನ್ನು ಮಾಡಲು ಬಳಸಲಾಗುವ ಗ್ಯಾಜೆಟ್ ಮಾತ್ರವಲ್ಲದೆ, ಬ್ಯಾಂಕಿಂಗ್‌ನಿಂದ ಪ್ರಾರಂಭಿಸಿ ಅನೇಕ ಕಾರ್ಯಗಳಿಗೆ ಬಳಸಲಾಗುತ್ತದೆ. ವೈಯಕ್ತಿಕ ಫೋಟೋಗಳು, ಬ್ಯಾಂಕಿಂಗ್ ವಿವರಗಳು ಮತ್ತು ಇತರ ಹಲವು ವೈಯಕ್ತಿಕ ಡೇಟಾವು ಸ್ಮಾರ್ಟ್ಫೋನ್ನಲ್ಲಿ ಇರುತ್ತದೆ. ಆದರೆ, ಈ ಫೋನ್ ಒಂದಲ್ಲ ಒಂದು ದಿನ ಹಾಳಾಗುವುದು ಖಂಡಿತ. ಆಗ ಫೋನ್ ಅನ್ನು ಸರ್ವಿಸ್ ಸೆಂಟರ್ನಲ್ಲಿ ನೀಡಬೇಕಾಗುತ್ತದೆ. ಹೀಗೆ ಫೋನ್ ರಿಪೇರಿಗೆ ನೀಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
- ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ, ನೀವು ಮೊದಲು ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು. ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವ ಮೊದಲು ಪಾಸ್‌ವರ್ಡ್ ಮತ್ತು ಯೂಸರ್ ನೇಮ್ ಅನ್ನು ಬರೆದಿಟ್ಟುಕೊಳ್ಳುವುದು ಉತ್ತಮ.
- ಸ್ಮಾರ್ಟ್‌ಫೋನ್‌ನ ನೋಟ್ ಪ್ಯಾಡ್‌ನಲ್ಲಿ ಪಾಸ್‌ವರ್ಡ್ ಮತ್ತು ವೈಯಕ್ತಿಕ ವಿವರಗಳನ್ನು ಬರೆಯುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಫೋನ್ ಅನ್ನು ಯಾರಿಗಾದರೂ ನೀಡುವಾಗ ನೋಟ್ ಪ್ಯಾಡ್‌ನಲ್ಲಿ ಇರುವುದನ್ನು ಅಳಿಸಲು ಮರೆಯಬೇಡಿ.
- ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಸದವರೇ ಇಲ್ಲ. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳದಿರಲು, ಎಲ್ಲಾ ಖಾತೆಗಳಿಂದ ಲಾಗ್ ಔಟ್ ಮಾಡಿದ ನಂತರವೇ ನೀವು ಫೋನ್ ಅನ್ನು ಸರ್ವಿಸ್ಗೆ ನೀಡಬೇಕು.
- ಜಿಮೇಲ್ ಖಾತೆಯೂ ಲಾಗ್ ಔಟ್ ಆದ ನಂತರವೇ ಫೋನ್ ಸರ್ವಿಸ್ ಕೇಂದ್ರಕ್ಕೆ ನೀಡಬೇಕು. ಜಿಮೇಲ್ ಖಾತೆಗೆ ಸಂಬಂಧಿಸಿದ ಎಲ್ಲಾ ವಿವರಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
- ಫೋನ್ ಗ್ಯಾಲರಿಯಲ್ಲಿ ಯಾವುದೇ ವೈಯಕ್ತಿಕ ಫೋಟೋಗಳಿದ್ದರೆ, ಅವುಗಳನ್ನು ಡಿಲೀಟ್ ಮಾಡಿ. ಫೋಟೋಗಳು ಬೇಕು ಎಂದಿದ್ದರೆ, ಅವುಗಳನ್ನು ಮೆಮೊರಿ ಕಾರ್ಡ್ ಅಥವಾ ಪೆನ್ ಡ್ರೈವ್‌ಗೆ ವರ್ಗಾಯಿಸಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ