Tech Tips: ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್​ಗೆ ಹೋದರೆ ಏನಾಗುತ್ತದೆ?

Geyser Safety Tips: ಇಂದು ಗೀಸರ್​ನ ಅವಶ್ಯತೆ ತುಂಬಾ ಇದೆ. ಹಳ್ಳಿಗಳಲ್ಲಾದರೆ ಇದರ ಉಪಯೋಗ ಕಡಿಮೆ. ಅದೇ, ಪೇಟೆಗಳಲ್ಲಿ ಗೀಸರ್ ಬೇಕೇ ಬೇಕು. ಇದನ್ನು ಬಳಸುವಾಗ ಕೂಡ ಅಷ್ಟೇ ಜಾಗರೂಕರಾಗಿರಬೇಕು. ಎಲ್ಲಾದರು ನೀವು ಗೀಸರ್ ಅನ್ನು ಆನ್ ಮಾಡಿ ಬಳಿಕ ಆಫ್ ಮಾಡಲು ಮರೆತು ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.

Tech Tips: ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್​ಗೆ ಹೋದರೆ ಏನಾಗುತ್ತದೆ?
geyser switch

Updated on: Feb 26, 2024 | 11:11 AM

ಈಗಿನ ವಿಪರೀತ ಚಳಿ ಇರುವ ಕಾರಣ ಗೀಸರ್ (Geyser) ಇಲ್ಲದೆ ಜೀವಿಸುವುದು ಕಷ್ಟ. ಬಿಸಿ ನೀರು ಇಲ್ಲದೆ ಸ್ನಾನ ಮಾಡಲು ಸಾಧ್ಯವೇ ಇಲ್ಲ. ಹೀಗಾಗಿ ನಿಮ್ಮ ಮನೆಯ ಗೀಸರ್ ಹೆಚ್ಚಿನ ಸಮಯ ಆನ್ ಆಗಿಯೇ ಇರುತ್ತದೆ. ಆದರೆ, ನೀವು ಆಫೀಸ್‌ಗೆ ಹೋಗುವಾಗ ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಹೋದರೆ ಏನು ಗತಿ?. ಆಫೀಸ್ ತಲುಪಿದ ನಂತರ ಗೀಸರ್ ಸ್ವಿಚ್ ಆನ್ ಇದೆ ಎಂದು ನೆನಪಾದರೆ ಏನೂ ಮಾಡಲು ಸಾಧ್ಯವಿಲ್ಲ. ಆಫೀಸ್ ಬ್ರೇಕ್ ಮುಗಿಸಿ ಮನೆಗೆ ಬಂದ ನಂತರ ಆಫ್ ಮಾಡಬೇಕಷ್ಟೆ. ಹೀಗೆ ಗೀಸರ್ 12 ಗಂಟೆಗಳ ಕಾಲ ಆನ್​ನಲ್ಲಿ ಇರುತ್ತದೆ. ಆದರೆ, ಈ ರೀತಿ ಗೀಸರ್ ಆನ್ ಇದ್ದರೆ ಅಪಾಯವೇ?.

ತಜ್ಞರ ಪ್ರಕಾರ, ಗೀಸರ್ ಅನ್ನು 5 ಗಂಟೆಗಳಿಗಿಂತ ಹೆಚ್ಚು ಕಾಲ ಆನ್ ಇರಿಸಬಾರದು. ಹಾಗೊಂದುವೇಳೆ ನೀವು ಗೀಸರ್ ಅನ್ನು ಹಲವು ಗಂಟೆಗಳ ಕಾಲ ಚಾಲನೆಯಲ್ಲಿಟ್ಟರೆ, ಥರ್ಮೋಸ್ಟಾಟ್ ನೀರನ್ನು ಗಣನೀಯವಾಗಿ ಬಿಸಿಮಾಡಬಹುದು. ಹೀಗೆ ಗೀಸರ್ ಹೆಚ್ಚು ಬಿಸಿಯಾಗಿ ನಂತರ ಸಿಡಿಯುವ ಸಂಭವ ಕೂಡ ಇರುತ್ತದೆ. ಅಥವಾ ಗೀಸರ್ ಹಾಳಾಗಬಹುದು.

ಬಿಸಿಲ ಬೇಗೆಗೆ ಬಾಂಬ್​ನಂತೆ ಸಿಡಿಯುತ್ತೆ ಮೊಬೈಲ್: ನಿರ್ಲಕ್ಷಿಸದಿರಿ

ಆದಾಗ್ಯೂ, ಈ ದಿನಗಳಲ್ಲಿ ಅನೇಕ ಗೀಸರ್‌ಗಳು ಸ್ವಯಂಚಾಲಿತ ಥರ್ಮೋಸ್ಟಾಟ್ ಆಫ್ ಆಯ್ಕೆಯನ್ನು ಹೊಂದಿವೆ. ಅಂದರೆ, ನೀರು ಬಿಸಿಯಾದಾಗ, ಅದು ಅಟೋಮೆಟಿಕ್ ಆಗಿ ಆಫ್ ಆಗುತ್ತದೆ. ನಿಮ್ಮ ಮನೆಯಲ್ಲಿರುವ ಗೀಸರ್ ಈ ವೈಶಿಷ್ಟ್ಯವನ್ನು ಹೊಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು.

ವಿದ್ಯುತ್ ಬಳಕೆ ಹೆಚ್ಚಳ: ಗೀಸರ್ ಹೆಚ್ಚು ವಿದ್ಯುತ್ ಬಳಕೆ ಮಾಡುವ ಸಾಧನವಾಗಿದೆ. ಹೀಗಿರುವಾಗ ಇದನ್ನು ದೀರ್ಘಕಾಲ ಆನ್ ಇಟ್ಟರೆ, ಅದು ವಿದ್ಯುತ್ ಬಳಕೆಯನ್ನು ಹೆಚ್ಚಿಸುತ್ತದೆ. ನಿಮ್ಮ ಕರೆಂಟ್ ಬಿಲ್ ಕೂಡ ಅಧಿಕ ಬರುತ್ತದೆ.

ಸ್ವಲ್ಪ ದಿನ ಕಾಯಿರಿ: ಮಾರ್ಚ್​ನಲ್ಲಿ ಬರುತ್ತಿದೆ ಅದ್ಭುತ ಸ್ಮಾರ್ಟ್​ಫೋನ್​ಗಳು: ಯಾವುವು ನೋಡಿ

ಅಧಿಕ ಬಿಸಿಯಾಗುವುದು: ಗೀಸರ್ ಅನ್ನು ಹೆಚ್ಚು ಗಂಟೆಗಳ ಕಾಲ ಇರಿಸಿದರೆ, ಅದು ಹೆಚ್ಚು ಬಿಸಿಯಾಗಬಹುದು ಮತ್ತು ಹಲವಾರು ಸಮಸ್ಯೆಗಳು ಕಾಣಿಸಬಹುದು. ಗೀಸರ್ ಅನ್ನು ಸದಾ ಕಾಲ ಆನ್ ಇಟ್ಟರೆ ಎಲ್ಲಾ ಸಮಯದಲ್ಲೂ ಬಿಸಿನೀರನ್ನು ಪಡೆಯಬಹುದು ನಿಜ. ಆದರೆ, ಇದು ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ. ಜೊತೆಗೆ ಕೆಲ ಅಪಾಯ ಆಗುವುದು ಖಚಿತ. ಆದ್ದರಿಂದ ನಿಮಗೆ ಬಿಸಿ ನೀರು ಬೇಕು ಎಂದಾಗ ಮಾತ್ರ ಗೀಸರ್ ಅನ್ನು ಆಣ್ ಮಾಡಿ, ಅದು ಬಿಸಿ ಆದ ಬಳಿಕ ಆಫ್ ಮಾಡಲು ಮರೆಯಬೇಡಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:10 am, Mon, 26 February 24