ಸ್ವಲ್ಪ ದಿನ ಕಾಯಿರಿ: ಮಾರ್ಚ್​ನಲ್ಲಿ ಬರುತ್ತಿದೆ ಅದ್ಭುತ ಸ್ಮಾರ್ಟ್​ಫೋನ್​ಗಳು: ಯಾವುವು ನೋಡಿ

Smartphones March 2024: ಫೆಬ್ರವರಿ ತಿಂಗಳಲ್ಲಿ ಕೆಲವು ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಬಂದಿವೆ. ಆದರೆ, ಅವುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಆದರೀಗ ಮಾರ್ಚ್​ನಲ್ಲಿ ರಿಲೀಸ್ ಆಗಲಿರುವ ಸ್ಮಾರ್ಟ್​ಫೋನ್​ಗಳು ಕುತೂಹಲ ಹೆಚ್ಚಿಸಿವೆ. ಹಾಗಾದರೆ, ಮುಂದಿನ ತಿಂಗಳು ಯಾವೆಲ್ಲ ಫೋನುಗಳು ಬಿಡುಗಡೆ ಆಗಲಿವೆ ಎಂಬುದನ್ನು ನೋಡೋಣ.

ಸ್ವಲ್ಪ ದಿನ ಕಾಯಿರಿ: ಮಾರ್ಚ್​ನಲ್ಲಿ ಬರುತ್ತಿದೆ ಅದ್ಭುತ ಸ್ಮಾರ್ಟ್​ಫೋನ್​ಗಳು: ಯಾವುವು ನೋಡಿ
Smartphones
Follow us
Vinay Bhat
|

Updated on: Feb 25, 2024 | 12:34 PM

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಮೊದಲು ಎರಡು ತಿಂಗಳಲ್ಲಿ ಬಿಡುಗಡೆಯಾದ ಸ್ಮಾರ್ಟ್​ಫೋನ್​ಗಳ (Smartphones) ಸಂಖ್ಯೆ ಕಡಿಮೆ ಎಂದು ಹೇಳಬಹುದು. ಹೆಚ್ಚು ಬಜೆಟ್ ಫೋನುಗಳೇ ಜನವರಿ-ಫೆಬ್ರವರಿಯಲ್ಲಿ ಬಿಡುಗಡೆಗೊಂಡಿವೆ. ಆದರೆ, ಮಾರ್ಚ್ ತಿಂಗಳಲ್ಲಿ ಕೆಲವು ಅದ್ಭುತ ಫೋನುಗಳು ಮಾರುಕಟ್ಟೆಗೆ ಅಪ್ಪಳಿಸಲಿವೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಉತ್ಸಾಹಿಗಳು ಒಂದೊಳ್ಳೆ ಸ್ಮಾರ್ಟ್​ಫೋನ್ ಬಿಡುಗಡೆಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದರೆ, ಸ್ವಲ್ಪ ದಿನ ಕಾಯಿರಿ. ಮಾರ್ಚ್ 2024 ರಲ್ಲಿ ಪದಾರ್ಪಣೆ ಮಾಡಲಿರುವ ಸ್ಮಾರ್ಟ್​ಫೋನ್​ಗಳ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ. ಇದರಲ್ಲಿ ಶವೋಮಿ, ಸ್ಯಾಮ್​ಸಂಗ್, ನಥಿಂಗ್ ಕಂಪನಿಯ ಫೋನುಗಳಿವೆ.

ಶವೋಮಿ 14

ಮಾರ್ಚ್ 7, 2024 ರಂದು ಬಿಡುಗಡೆ ಆಗಲಿರುವ ಶವೋಮಿ 14 ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಈ ಸ್ಮಾರ್ಟ್‌ಫೋನ್ 6.36-ಇಂಚಿನ OLED 120Hz ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಕ್ಯಾಮೆರಾ ಪ್ರಿಯರಿಗಾಗಿ ಇದರಲ್ಲಿ 50 ಮೆಗಾ ಫಿಕ್ಸೆಲ್​ನ ಪ್ರಾಥಮಿಕ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇದು ಸೋನಿ ಲೆನ್ಸ್​ನಿಂದ ಕೂಡಿರುವ ಕಾರಣ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದೆ.

ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳು: ಇದು ಜಿಯೋದ ಮತ್ತೊಂದು ಅಗ್ಗದ ಯೋಜನೆ

ನಥಿಂಗ್ ಫೋನ್ 2a

ಪ್ರಸಿದ್ಧ ನಥಿಂಗ್ ಕಂಪನಿಯ ಮೂರನೇ ಫೋನ್ ನಥಿಂಗ್ ಫೋನ್ 2a ಮಾರ್ಚ್ 5 ರಂದು ಅನಾವರಣಗೊಳ್ಳುವ ನಿರೀಕ್ಷೆ ಇದೆ. ನಥಿಂಗ್ ಫೋನ್ 2ಗಿಂತ ಈ ಫೋನಿನ ಬೆಲೆ ಕಡಿಮೆ ಇರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ 6.7-ಇಂಚಿನ OLED ಡಿಸ್​ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್‌ನ ಡೈಮೆನ್ಸಿಟಿ 7200 ಪ್ರೊಸೆಸರ್ ಅಳವಡಿಸಲಾಗಿದೆ. ಕ್ಯಾಮೆರಾ ಹಾಗೂ ಬ್ಯಾಟರಿ ಕುರಿತ ಮಾಹಿತಿ ಹೊರಬಿದ್ದಿಲ್ಲ.

ಸ್ಯಾಮ್​ಸಂಗ್ ಗ್ಯಾಲಕ್ಸಿ A55

ಮಾರ್ಚ್ ಅಂತ್ಯದ ವೇಳೆಗೆ ಅಥವಾ ಏಪ್ರಿಲ್ ಆರಂಭದಲ್ಲಿ, ಸ್ಯಾಮ್‌ಸಂಗ್ ತನ್ನ ಎ-ಸರಣಿ ಶ್ರೇಣಿಗೆ ಹೊಸ ಗ್ಯಾಲಕ್ಸಿ A55 ಫೋನನ್ನು ಸೇರ್ಪಡೆ ಮಾಡಲಿದೆ. ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಪೂರ್ಣ HD+ OLED ಡಿಸ್​ಪ್ಲೇಯನ್ನು ಹೊಂದಿದೆ. ಎಕ್ಸಿನೊಸ್ 1480 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಬಗ್ಗೆ ವದಂತಿಗಳಿದ್ದು, ಖಚಿತ ಮಾಹಿತಿ ತಿಳಿದಿಲ್ಲ.

ಥರ್ಡ್ ಪಾರ್ಟಿ ಆ್ಯಪ್ ಇಲ್ಲದೆ ಒಂದೇ ಫೋನ್‌ನಲ್ಲಿ 2 ವಾಟ್ಸ್​ಆ್ಯಪ್ ಅಕೌಂಟ್ ಬಳಕೆ ಹೇಗೆ?

ವಿವೋ V30 ಪ್ರೊ

ವಿವೋ ಕಂಪನಿಯ ವಿವೋ V30 ಪ್ರೊ ಫೆಬ್ರವರಿ 28, 2024 ಅಥವಾ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫೋನ್​ನಲ್ಲಿ ಮೀಡಿಯಾ ಟೆಕ್​ನ ಡೈಮೆನ್ಸಿಟಿ 9200+ ಪ್ರೊಸೆಸರ್ ಅನ್ನು 12GB RAM ನೊಂದಿಗೆ ಜೋಡಿಸಲಾಗಿದೆ. ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಇದು ಬಿಡುಗಡೆ ಆಗಲಿದೆ.

ರಿಯಲ್ ಮಿ 12 ಪ್ಲಸ್

ರಿಯಲ್ ಮಿ 12 ಪ್ಲಸ್ ಮಾರ್ಚ್​ನಲ್ಲಿ ರಿಲೀಸ್ ಆಗಲಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿನ ಟೀಸರ್‌ಗಳು ತಿಳಿಸಿರುವಂತೆ ಈ ಫೋನ್​ನಲ್ಲಿ ಸೋನಿ ಒಐಎಸ್ ಕ್ಯಾಮೆರಾ ಸಂವೇದಕ ಇರಲಿದೆಯಂತೆ. ಕಂಪನಿಯು ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸದಿದ್ದರೂ, ರಿಯಲ್ ಮಿ 12 ಸರಣಿಯು ಎರಡು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಬಹುದು ಎಂದು ಊಹಾಪೋಹಗಳಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ