WhatsApp Tricks: ಥರ್ಡ್ ಪಾರ್ಟಿ ಆ್ಯಪ್ ಇಲ್ಲದೆ ಒಂದೇ ಫೋನ್‌ನಲ್ಲಿ 2 ವಾಟ್ಸ್ಆ್ಯಪ್ ಅಕೌಂಟ್ ಬಳಕೆ ಹೇಗೆ?
Whatsapp Dual Clone App: ವಾಟ್ಸ್ಆ್ಯಪ್ನ ಬಹು ಖಾತೆಗಳ ವೈಶಿಷ್ಟ್ಯವು ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದವು. ಆದರೆ, ವಾಟ್ಸ್ಆ್ಯಪ್ ಬೀಟಾ ಬಳಕೆದಾರರಿಗೆ ಮಾತ್ರ ಈ ವೈಶಿಷ್ಟ್ಯವನ್ನು ಟೆಸ್ಟಿಂಗ್ ಮೋಡ್‌ನಲ್ಲಿ ಇರಿಸಿತ್ತು. ಇದೀಗ ಈ ಫೀಚರ್ ಸಾಮಾನ್ಯ ಬಳಕೆದಾರರಿಗೂ ಲಭ್ಯವಿದೆ.
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ನಲ್ಲಿ (WhatsApp) ಈ ವರ್ಷ ನಿರೀಕ್ಷೆಗೂ ಮೀರಿದ ಫೀಚರ್ಗಳು ಬರುತ್ತಿದೆ. ತಿಂಗಳಿಗೆ ಒಂದು ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುವ ಕಂಪನಿ ಇದೀಗ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದ ಫೀಚರ್ ಒಂದು ಬಳಕೆದಾರರಿಗೆ ಲಭ್ಯವಾಗಿದೆ. ಈಗ ವಾಟ್ಸ್ಆ್ಯಪ್ ಬಳಕೆದಾರರು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದೆಯೇ ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ಖಾತೆಗಳನ್ನು ಉಪಯೋಗಿಸಬಹುದಾಗಿದೆ. ಇಂಥ ಒಂದು ಅದ್ಭುತ ಫೀಚರ್ ಅನ್ನು ಮೆಟಾ ಕಂಪನಿ ವಾಟ್ಸ್ಆ್ಯಪ್ನಲ್ಲಿ ತನ್ನ ಬಳಕೆದಾರರಿಗೆ ನೀಡಿದೆ. ಈ ಫೀಚರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ವಾಟ್ಸ್ಆ್ಯಪ್ನ ಬಹು ಖಾತೆಗಳ ವೈಶಿಷ್ಟ್ಯವು ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದವು. ಆದರೆ, ವಾಟ್ಸ್ಆ್ಯಪ್ ಬೀಟಾ ಬಳಕೆದಾರರಿಗೆ ಮಾತ್ರ ಈ ವೈಶಿಷ್ಟ್ಯವನ್ನು ಟೆಸ್ಟಿಂಗ್ ಮೋಡ್‌ನಲ್ಲಿ ಇರಿಸಿತ್ತು. ಇದೀಗ ಈ ಫೀಚರ್ ಸಾಮಾನ್ಯ ಬಳಕೆದಾರರಿಗೂ ಲಭ್ಯವಿದೆ. ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ವಾಟ್ಸ್ಆ್ಯಪ್ ಖಾತೆಗಳನ್ನು ಬಳಸಬಹುದು ಎಂದು ಕಂಪನಿ ಸ್ಟೇಟಸ್ ಅಪ್‌ಡೇಟ್ ಮೂಲಕ ಜನರಿಗೆ ತಿಳಿಸುತ್ತಿದೆ. ಆದರೆ, ಈ ಫೀಚರ್ ಬಳಸುವ ಮುನ್ನ ನೀವು ವಾಟ್ಸ್ಆ್ಯಪ್ ಖಾತೆಯನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
ಒಂದಲ್ಲ, ಎರಡಲ್ಲ ನಾಲ್ಕು ಕ್ಯಾಮೆರಾ ಕೂಡ 50MP: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಶವೋಮಿ 14 ಆಲ್ಟ್ರಾ
ವಾಟ್ಸ್ಆ್ಯಪ್ ಅನ್ನು ನವೀಕರಿಸಿದ ನಂತರ ಕೆಳಗೆ ತಿಳಿಸಲಾದ ಪ್ರಕ್ರಿಯೆಯನ್ನು ಅನುಸರಿಸಿ. ನಂತರವೂ ನಿಮ್ಮ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ಗಳನ್ನು ಬಳಸುವ ಆಯ್ಕೆಯನ್ನು ನೀವು ನೋಡದಿದ್ದರೆ, ಮುಂದಿನ ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. ಕೆಲವು ದಿನಗಳ ನಂತರ ವಾಟ್ಸ್ಆ್ಯಪ್ ಈ ವೈಶಿಷ್ಟ್ಯವನ್ನು ನಿಮ್ಮ ಫೋನ್‌ಗೆ ನೀಡುವ ಸಾಧ್ಯತೆಯಿದೆ.
- ಮೊದಲು ನಿಮ್ಮ ಫೋನ್‌ನಲ್ಲಿ ನಿಮ್ಮ ವಾಟ್ಸ್ಆ್ಯಪ್ ಖಾತೆಯನ್ನು ತೆರೆಯಿರಿ.
- ಫೋನ್‌ನ ಮೇಲಿನ ಬಲಭಾಗದಲ್ಲಿರುವ 3 ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.
- ನಂತರ ಕೆಳಗೆ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ.
- ಅದರ ನಂತರ ಅಕೌಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ಕೆಳಗಿನಿಂದ ಎರಡನೇ ಆಯ್ಕೆಯಲ್ಲಿರುವ ಆ್ಯಡ್ ಅಕೌಂಟ್ ಎಂಬ ಹೊಸ ಆಯ್ಕೆಯನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ಈಗಿನ ವಾಟ್ಸ್ಆ್ಯಪ್ ಖಾತೆ ಕೂಡ ಕಾಣಿಸಿಕೊಳ್ಳುತ್ತದೆ. ಅಲ್ಲೆ ಕೆಳಗಡೆ ಎರಡನೇ ಸಂಖ್ಯೆಯಲ್ಲಿ + ಚಿಹ್ನೆಯೊಂದಿಗೆ ಖಾತೆಯನ್ನು ಸೇರಿಸಿ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿ.
- ಈಗ ಫೋನ್ ನಂಬರ್ ನಮೋದಿಸಿ ಮತ್ತು ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.
ಫಾರಿನ್ಗೆ ಹೋದಾಗ ಫೋನ್ ಪೇ, ಗೂಗಲ್ ಪೇ ಉಪಯೋಗಿಸುವುದು ಹೇಗೆ?: ಇಲ್ಲಿದೆ ಮಾಹಿತಿ
- ನಂತರ ಓಟಿಪಿ ಬರುತ್ತದೆ. ಇದನ್ನು ಹಾಖಿದ ನಂತರ ನಿಮ್ಮ ಫೋನ್‌ನಲ್ಲಿ ಇನ್ನೊಂದು ವಾಟ್ಸ್ಆ್ಯಪ್ ಅನ್ನು ಬಳಸಬಹುದು.
- ಈ ಸಂಪೂರ್ಣ ಪ್ರಕ್ರಿಯೆಯನ್ನು ಮುಗಿಸಿದ ನಂತರ, ನಿಮಗೆ ಯಾವ ವಾಟ್ಸ್ಆ್ಯಪ್ ಖಾತೆ ಬೇಕು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಎರಡು ಖಾತೆಗಳಲ್ಲಿ ಒಂದನ್ನು ಬಳಸಬಹುದು.
- ಇದು ಒಂದೇ ಫೋನ್‌ನಲ್ಲಿ ಎರಡು ಅಥವಾ ಹೆಚ್ಚಿನ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ