AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಲ್ಲ, ಎರಡಲ್ಲ ನಾಲ್ಕು ಕ್ಯಾಮೆರಾ ಕೂಡ 50MP: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಶವೋಮಿ 14 ಆಲ್ಟ್ರಾ

Xiaomi 14 Ultra Launched: ಶವೋಮಿ 14 ಸರಣಿಯಲ್ಲಿನ ಇತರ ಫೋನ್‌ಗಳಂತೆ ಶವೋಮಿ 14 ಆಲ್ಟ್ರಾ ಸಾಕಷ್ಟು ಬಲಿಷ್ಠವಾಗಿದ್ದು, ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 3 SoC ಯಿಂದ ಕೂಡಿದೆ. ಕ್ಯಾಮೆರಾ ಕೂಡ ಅದ್ಭುತವಾಗಿದ್ದು, ನಾಲ್ಕು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಈ ಫೋನ್ ರಿಲೀಸ್ ಆಗಿದೆ.

ಒಂದಲ್ಲ, ಎರಡಲ್ಲ ನಾಲ್ಕು ಕ್ಯಾಮೆರಾ ಕೂಡ 50MP: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಶವೋಮಿ 14 ಆಲ್ಟ್ರಾ
xiaomi 14 ultra
Vinay Bhat
|

Updated on: Feb 24, 2024 | 12:21 PM

Share

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ಬಹುನಿರೀಕ್ಷಿತ ಶವೋಮಿ 14 ಆಲ್ಟ್ರಾ (Xiaomi 14 Ultra) ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್ ಶವೋಮಿ 14 ಮತ್ತು ಶವೋಮಿ 14 ಪ್ರೊಗೆ ಸಾಲಿಗೆ ಸೇರುತ್ತದೆ. ಇದು ಅಕ್ಟೋಬರ್ 2023 ರಲ್ಲಿ ಬಿಡುಗಡೆಗೊಂಡಿತ್ತು. ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) ಗಿಂತ ಮುಂಚಿತವಾಗಿ ಫೆಬ್ರವರಿ 25 ರಂದು ಈ ಶ್ರೇಣಿಯನ್ನು ಜಾಗತಿಕವಾಗಿ ಮಾರಾಟ ಮಾಡಲು ಕಂಪನಿ ಮುಂದಾಗಿದೆ. ಶವೋಮಿ 14 ಸರಣಿಯಲ್ಲಿನ ಇತರ ಫೋನ್‌ಗಳಂತೆ ಶವೋಮಿ 14 ಆಲ್ಟ್ರಾ ಸಾಕಷ್ಟು ಬಲಿಷ್ಠವಾಗಿದ್ದು, ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 3 SoC ಯಿಂದ ಕೂಡಿದೆ. ಕ್ಯಾಮೆರಾ ಕೂಡ ಅದ್ಭುತವಾಗಿದ್ದು, ನಾಲ್ಕು 50 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. ಸದ್ಯಕ್ಕೆ ಚೀನಾ ಮಾರುಕಟ್ಟೆಯಲ್ಲಿ ಈ ಫೋನ್ ರಿಲೀಸ್ ಆಗಿದೆ.

ಶವೋಮಿ 14 ಆಲ್ಟ್ರಾ ಬೆಲೆ:

ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ನೀಡಲಾದ ಶವೋಮಿ 14 ಆಲ್ಟ್ರಾ ಫೋನಿನ 12GB + 256GB ಆಯ್ಕೆಗೆ CNY 6,499 (ಸುಮಾರು ರೂ. 74,800) ಇದೆ. ಅಂತೆಯೆ ಇದರ 16GB + 512GB ಮತ್ತು 16GB + 1TB ರೂಪಾಂತರಕ್ಕೆ ಕ್ರಮವಾಗಿ CNY 6,999 (ಸುಮಾರು ರೂ. 80,600) ಮತ್ತು CNY 7,799 (ಸುಮಾರು ರೂ. 89,800) ನಿಗದಿ ಮಾಡಲಾಗಿದೆ. 16GB + 1TB ಕಾನ್ಫಿಗರೇಶನ್‌ಗಾಗಿ CNY 8,799 (ಸುಮಾರು ರೂ. 1,01,300) ನಲ್ಲಿ ಪಟ್ಟಿ ಮಾಡಲಾದ ಶವೋಮಿ 14 ಆಲ್ಟ್ರಾ ಟೈಟಾನಿಯಂ ವಿಶೇಷ ಆವೃತ್ತಿಯಲ್ಲೂ ಲಭ್ಯವಿದೆ.

ಫಾರಿನ್​ಗೆ ಹೋದಾಗ ಫೋನ್ ಪೇ, ಗೂಗಲ್ ಪೇ ಉಪಯೋಗಿಸುವುದು ಹೇಗೆ?: ಇಲ್ಲಿದೆ ಮಾಹಿತಿ

ಶವೋಮಿ 14 ಆಲ್ಟ್ರಾ ಫೀಚರ್ಸ್:

ಶವೋಮಿ 14 ಆಲ್ಟ್ರಾ ಫೋನ್ 3,200 x 1,440 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.73-ಇಂಚಿನ LTPO AMOLED ಮೈಕ್ರೋ-ಕರ್ವ್ಡ್ ಡಿಸ್‌ಪ್ಲೇ, 120Hz ವರೆಗಿನ ರಿಫ್ರೆಶ್ ದರ ಮತ್ತು 3,000 nits ನ ಗರಿಷ್ಠ ಬ್ರೈಟ್​ನೆಸ್ ಮಟ್ಟವನ್ನು ಹೊಂದಿದೆ. ಡಿಸ್‌ಪ್ಲೇ ಎಲ್ಲಾ ಭಾಗ ಶೀಲ್ಡ್ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 3 SoC ಯಿಂದ 16GB ವರೆಗಿನ LPDDR5x RAM ಮತ್ತು 1TB ವರೆಗಿನ UFS 4.0 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಈ ಫೋನ್ ಆಂಡ್ರಾಯ್ಡ್ 14-ಆಧಾರಿತ HyperOS ನೊಂದಿಗೆ ರನ್ ಆಗುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಶವೋಮಿ 14 ಆಲ್ಟ್ರಾ ಕ್ವಾಡ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 1-ಇಂಚಿನ 50-ಮೆಗಾಪಿಕ್ಸೆಲ್ Sony LYT900 ಪ್ರಾಥಮಿಕ ಸಂವೇದಕ, ಜೊತೆಗೆ ಎರಡು 50-ಮೆಗಾಪಿಕ್ಸೆಲ್ Sony IMX858 ಸಂವೇದಕಗಳು, ಒಂದು 3.2x ಆಪ್ಟಿಕಲ್ ಮತ್ತು ಇನ್ನೊಂದು 5x ಆಪ್ಟಿಕಲ್ ಜೂಮ್ ಜೊತೆಗೆ 75mm ಮತ್ತು 120mm ಫೋಕಲ್ ಲೆಂತ್ ನಿಂದ ಕೂಡಿದೆ. ನಾಲ್ಕನೇ 50-ಮೆಗಾಪಿಕ್ಸೆಲ್ ಸಂವೇದಕವನ್ನು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಜೋಡಿಸಲಾಗಿದೆ. ಮುಂಭಾಗದ ಕ್ಯಾಮೆರಾವು 32-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

108MP ಕ್ಯಾಮೆರಾದ ಈ ಹೊಚ್ಚ ಹೊಸ ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್

90W, 80W ವೈರ್‌ಲೆಸ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,300mAh ಬ್ಯಾಟರಿ ಶವೋಮಿ 14 ಆಲ್ಟ್ರಾವನ್ನು ಬೆಂಬಲಿಸುತ್ತದೆ. ಈ ಫೋನ್ 5G, ವೈಫೈ, ಬ್ಲೂಟೂತ್ 5.4, NFC ಮತ್ತು USB ಟೈಪ್-ಸಿ ಅನ್ನು ಸಹ ಬೆಂಬಲಿಸುತ್ತದೆ. ಭದ್ರತೆಗಾಗಿ, ಅಲ್ಟ್ರಾಸಾನಿಕ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಈ ಫೋನಿನ ಟೈಟಾನಿಯಂ ಆವೃತ್ತಿಯು ವಿಶೇಷವಾದ ದ್ವಿಮುಖ ಉಪಗ್ರಹ ಸಂವಹನ ಬೆಂಬಲದೊಂದಿಗೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ರವಿ ಕರ್ಕಾಟಕ ರಾಶಿಯಲ್ಲಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
2 ಅಂಕ ಕಡಿಮೆ ಬಂದಿದ್ದಕ್ಕೆ ಶಿಕ್ಷಕಿಯನ್ನು ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿ
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ನಿಮಗಿಂತ ಹೆಚ್ಚೇ ವಿದ್ಯಾವಂತ; ಬಿಜೆಪಿ ಎಂಎಲ್‌ಸಿ ಮಗನಿಗೆ ಪೊಲೀಸ್ ಕ್ಲಾಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ವಿಷ್ಣುವರ್ಧನ್ ಸಮಾಧಿ ನೆಲಸಮ: ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ಏನು?
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ಸೋರುತಿಹುದು ಸಾರಿಗೆ ಬಸ್ ಮೇಲ್ಚಾವಣಿ, ಛತ್ರಿ ಹಿಡಿದು ಕುಳಿತ ಪ್ರಯಾಣಿಕ
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ವಿಷ್ಣುವರ್ಧನ್ ಸಮಾಧಿ ಬಗ್ಗೆ ಅಂಬಿ ಮನೆಯಲ್ಲಿ ಸಭೆ ನಡೆದಾಗ ಏನೆಲ್ಲ ಆಯ್ತು?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕುಟುಂಬ ಒಪ್ಪಿದ್ದೇಕೆ?
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ
ಕಾಂಗ್ರೆಸ್ ನಾಯಕರಿಗೆ ಸುಧಾಕರ್ ಏಳ್ಗೆ ಸಹಿಸಲಾಗುತ್ತಿಲ್ಲ: ವಿಜಯೇಂದ್ರ