Vivo Y100t: ಸದ್ದಿಲ್ಲದೆ ಮಾರುಕಟ್ಟೆಗೆ ಬಂತು ವಿವೋದ ಹೊಸ ಸ್ಮಾರ್ಟ್​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?

Vivo Y100t Launched: ವಿವೋ ಕಂಪನಿ ತನ್ನ Y ಸರಣಿಯ ಅಡಿಯಲ್ಲಿ ಹೊಸ ವಿವೋ Y100t ಸ್ಮಾರ್ಟ್​ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಮೀಡಿಯಾಟೆಕ್​ನ ಡೈಮೆನ್ಸಿಟಿ 8200 ಚಿಪ್‌ಸೆಟ್‌ ನೀಡಲಾಗಿದೆ. ಸದ್ಯಕ್ಕೆ ಚೀನಾದಲ್ಲಿ ಮಾತ್ರ ಈ ಫೋನ್ ಅನಾವರಣಗೊಂಡಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೂ ಬರುವ ಸಾಧ್ಯತೆ ಇದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

Vivo Y100t: ಸದ್ದಿಲ್ಲದೆ ಮಾರುಕಟ್ಟೆಗೆ ಬಂತು ವಿವೋದ ಹೊಸ ಸ್ಮಾರ್ಟ್​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?
Vivo Y100t
Follow us
Vinay Bhat
|

Updated on: Feb 24, 2024 | 2:17 PM

ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ಹೊಸ ಸ್ಮಾರ್ಟ್​ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಹೆಸರು ವಿವೋ Y100t (Vivo Y100t). ಇದೊಂದು ಮಧ್ಯಮ ಬೆಲೆಯ ಫೋನಾಗಿದೆ. ಈ Y ಸರಣಿಯ ಸ್ಮಾರ್ಟ್‌ಫೋನ್ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯ OriginOS 3 ಸ್ಕಿನ್‌ನೊಂದಿಗೆ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೀಡಿಯಾಟೆಕ್​ನ ಡೈಮೆನ್ಸಿಟಿ 8200 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಸದ್ಯಕ್ಕೆ ಚೀನಾದಲ್ಲಿ ಮಾತ್ರ ಈ ಫೋನ್ ಅನಾವರಣಗೊಂಡಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೂ ಬರುವ ಸಾಧ್ಯತೆ ಇದೆ. ವಿವೋ Y100t ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ವಿವೋ Y100t ಬೆಲೆ, ಲಭ್ಯತೆ:

ವಿವೋ ವೈ100ಟಿ ಸ್ಮಾರ್ಟ್​ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 8GB RAM + 256GB ಸ್ಟೋರೇಜ್ ಕಾನ್ಫಿಗರೇಶನ್‌ಗೆ CNY 1,449 (ಸುಮಾರು ರೂ. 17,560) ಇದೆ. ಅಂತೆಯೆ ಇದರ 12GB+256GB ಮತ್ತು 12GB+512GB ರೂಪಾಂತರಕ್ಕೆ ಕ್ರಮವಾಗಿ CNY 1,649 (ಸುಮಾರು ರೂ. 19,310) ಮತ್ತು CNY 1,849 (ಸುಮಾರು ರೂ. 21,660) ಬೆಲೆ ನಿಗದಿ ಮಾಡಲಾಗಿದೆ.

ಥರ್ಡ್ ಪಾರ್ಟಿ ಆ್ಯಪ್ ಇಲ್ಲದೆ ಒಂದೇ ಫೋನ್‌ನಲ್ಲಿ 2 ವಾಟ್ಸ್​ಆ್ಯಪ್ ಅಕೌಂಟ್ ಬಳಕೆ ಹೇಗೆ?

ಕಂಪನಿಯ ಆನ್‌ಲೈನ್ ಸ್ಟೋರ್ ಮೂಲಕ ಈ ಹ್ಯಾಂಡ್‌ಸೆಟ್ ಅನ್ನು ಫೆಬ್ರವರಿ 28 ರಂದು ಚೀನಾದಲ್ಲಿ ಮಾರಾಟ ಮಾಡಲಿದೆ. ಇದು ಫಾರ್ ಮೌಂಟೇನ್ ಗ್ರೀನ್, ಮೂನ್ ಶ್ಯಾಡೋ ಬ್ಲ್ಯಾಕ್ ಮತ್ತು ಸ್ನೋಯಿ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ವಿವೋ Y100t ಫೀಚರ್ಸ್:

ಡ್ಯುಯಲ್ ಸಿಮ್ (ನ್ಯಾನೋ) ವಿವೋ Y100t ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13-ಆಧಾರಿತ OriginOS 3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ 6.64-ಇಂಚಿನ ಪೂರ್ಣ-HD+(1,080×2,388 ಪಿಕ್ಸೆಲ್‌ಗಳು) LCD ಡಿಸ್​ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್‌ನ 4nm ಡೈಮೆನ್ಸಿಟಿ 8200 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು 12GB ವರೆಗೆ LPDDR5 RAM ಅನ್ನು ಹೊಂದಿದೆ.

ಹಿಂಭಾಗದ ಪ್ಯಾನೆಲ್‌ನಲ್ಲಿ, ವಿವೋ Y100t ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು OIS ಜೊತೆಗೆ f/1.79 ದ್ಯುತಿರಂಧ್ರದೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಸಂವೇದಕವನ್ನು f/2.4 ದ್ಯುತಿರಂಧ್ರದೊಂದಿಗೆ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡಲಾಗಿದೆ.

ಒಂದಲ್ಲ, ಎರಡಲ್ಲ ನಾಲ್ಕು ಕ್ಯಾಮೆರಾ ಕೂಡ 50MP: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಶವೋಮಿ 14 ಆಲ್ಟ್ರಾ

ಈ ಸ್ಮಾರ್ಟ್‌ಫೋನ್ ಅನ್ನು 512GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಸಜ್ಜುಗೊಳಿಸಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, WiFi 6, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. 120W SuperVOOC ಚಾರ್ಜಿಂಗ್ ಮತ್ತು 65W USB-PD ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ