AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

What India Thinks Today: ಎಐ ಉಪಯೋಗ ಇಂಟರ್ನೆಟ್​ಗೆ ಮಾತ್ರ ಸೀಮಿತವಲ್ಲ, ಕೃಷಿ ಸೇರಿದಂತೆ ಇತರ ಕ್ಷೇತ್ರಗಳಿಗೂ ಸಹಕಾರಿ

What India Thinks Today Global Summit 2024: ಕೃತಕ ಬುದ್ಧಿಮತ್ತೆಯಿಂದ ಸಮಸ್ಯೆ ಆಗಬಹುದು ಎಂದು ಹೇಳಲಾದರೂ ಅದರಿಂದ ಆಗುವ ಉಪಯೋಗ ಹಲವಾರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ಲಾಲಜಿಯು ಕೃಷಿ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಸಾಧ್ಯತೆಗಳ ಹೊಸ ಬಾಗಿಲುಗಳನ್ನು ತೆರೆದಿದೆ. ಅದಕ್ಕಾಗಿಯೇ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಎರಡನೇ ಆವೃತ್ತಿಯಲ್ಲಿ, AI ಯ ಹೆಚ್ಚುತ್ತಿರುವ ಪಾತ್ರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅದರ ಬಳಕೆಯ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುತ್ತಾರೆ.

What India Thinks Today: ಎಐ ಉಪಯೋಗ ಇಂಟರ್ನೆಟ್​ಗೆ ಮಾತ್ರ ಸೀಮಿತವಲ್ಲ, ಕೃಷಿ ಸೇರಿದಂತೆ ಇತರ ಕ್ಷೇತ್ರಗಳಿಗೂ ಸಹಕಾರಿ
ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮಿಟ್
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on: Feb 25, 2024 | 1:17 PM

Share

What India Thinks Today Global Summit: ಟಿವಿ9 ನೆಟ್‌ವರ್ಕ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗ್ಲೋಬಲ್ ಸಮಿಟ್​ನ ಎರಡನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಇಂದು ಫೆಬ್ರವರಿ 25 ರಿಂದ ಫೆಬ್ರವರಿ 27 ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವ್ಯಾಪಾರ, ತಂತ್ರಜ್ಞಾನ, ಕ್ರೀಡೆ, ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಜಾಗತಿಕ ಶೃಂಗಸಭೆಯಲ್ಲಿ ತಜ್ಞರು ಕೃತಕ ಬುದ್ಧಿಮತ್ತೆ (AI) ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಪ್ರಸ್ತುತ, AI ಅತ್ಯಂತ ಪ್ರಮುಖ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಇದರ ಬಳಕೆ ಅಂತರ್ಜಾಲಕ್ಕೆ ಮಾತ್ರ ಸೀಮಿತವಾಗಿಲ್ಲ. AI ಅನ್ನು ಕೃಷಿ ಮತ್ತು ಜೀವ ವಿಜ್ಞಾನದಂತಹ ಕ್ಷೇತ್ರಗಳಲ್ಲಿಯೂ ಬಳಸಲಾಗುತ್ತಿದೆ.

ಪ್ರಪಂಚದಾದ್ಯಂತ AI ಅನ್ನು ಆತಂಕದಿಂದ ನೋಡಲಾಗುತ್ತಿದೆ. ಆದರೆ AI ತಂತ್ರಜ್ಞಾನದಿಂದ ನಾನಾ ಪ್ರಯೋಜನಗಳುಂಟು. ಎಐ ಟೆಕ್ನಾಲಜಿಯನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಟೆಕ್ ದೈತ್ಯರು AI ಯ ಈ ಅಂಶದ ಕುರಿತು ತಮ್ಮ ಅಭಿಪ್ರಾಯಗಳನ್ನು ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾರೆ. AI ಯ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ. ಇದರಿಂದ ಸಾಮಾನ್ಯ ಜನರು ಸಹ ಅದರ ಪ್ರತಿಯೊಂದು ಅಂಶವನ್ನು ಅರ್ಥಮಾಡಿಕೊಳ್ಳಬಹುದು.

ಈ ತಜ್ಞರಿಂದ AI ಕುರಿತು ಚರ್ಚೆ

ಫೆಬ್ರವರಿ 26 ರಂದು ಬೆಳಗ್ಗೆ 10:35 ಕ್ಕೆ ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ಜಾಗತಿಕ ಶೃಂಗಸಭೆಯಲ್ಲಿ AI ಬಗ್ಗೆ ಚರ್ಚಿಸಲಾಗುವುದು. ಇದರಲ್ಲಿ ಸಿನಿಮಾ ನಿರ್ಮಾಪಕ ಮತ್ತು MARZ ಸಿಇಒ ಜೊನಾಥನ್ ಬ್ರೋನ್‌ಫ್‌ಮನ್, ಮೈಕ್ರೋಸಾಫ್ಟ್‌ನ ಸಾಮಿಕ್ ರಾಯ್, ರಿಲಯನ್ಸ್ ಜಿಯೊದ ಮುಖ್ಯ ಡೇಟಾ ವಿಜ್ಞಾನಿ ಡಾ. ಶೈಲೇಶ್ ಕುಮಾರ್, ಸ್ಯಾಮ್‌ಸಂಗ್ ರಿಸರ್ಚ್‌ನ ಎಐ ವಿಷನ್ ನಿರ್ದೇಶಕ ಅಲೋಕ್ ಶುಕ್ಲಾ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅನುರಾಗ್ ಮರಾಲ್ ಅವರು ಕೃತಕ ಬುದ್ಧಿಮತ್ತೆ ಮತ್ತದರ ತಂತ್ರಜ್ಞಾನದ ಬಗ್ಗೆ ಸವಿವರವಾಗಿ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಎಫ್​ಎಂಸಿಜಿ ಬೆಳವಣಿಗೆ ಹೇಗೆ?; ಉದ್ಯಮ ಪರಿಣಿತರ ಅಭಿಪ್ರಾಯ ಕೇಳಿ

ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ

ಕೃಷಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಪಾತ್ರ ಬಹಳ ಮಹತ್ವದ್ದಿದೆ. ಬೆಳೆ ಇಳುವರಿ ಹೆಚ್ಚಿಸಲು ಎಐ ನೆರವು ಪಡೆದುಕೊಳ್ಳಬಹುದು. ಬೆಳೆಗಳನ್ನು ಬಾಧಿಸುವ ರೋಗ, ಕೀಟಬಾಧೆ ಇತ್ಯಾದಿ ಸಮಸ್ಯೆಗಳನ್ನು ಪೂರ್ವದಲ್ಲೇ ಪತ್ತೆಹಚ್ಚಿ ನಿರ್ವಹಣೆ ಮಾಡಬಹುದು, ಅಥವಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬಹುದು. ಬೆಳೆಯ ಇಳುವರಿ ಮತ್ತು ಗುಣಮಟ್ಟ ಸುಧಾರಿಸಲು ಎಐ ಸಹಾಯ ಮಾಡಬಲ್ಲುದು. ರೈತರು ತಮ್ಮ ಬೆಳೆಗಳಿಗೆ ಸೂಕ್ತವಾದ ತಳಿ ಮತ್ತು ಬೀಜಗಳನ್ನು ಆಯ್ಕೆ ಮಾಡಬಹುದು.

ಜೀವವಿಜ್ಞಾನದಲ್ಲಿ AI ನ ಪಾತ್ರ

ಜೀವ ವಿಜ್ಞಾನ ಅಥವಾ ಜೈವಿಕ ತಂತ್ರಜ್ಞಾನದಲ್ಲಿ AI ಮೂಲಕ ಉತ್ತಮ ಫಲಿತಾಂಶಗ ಸಾಧಿಸಬಹುದು-

  • AI ಅನ್ನು ಬಳಸಿಕೊಂಡು, ವಿಜ್ಞಾನಿಗಳು ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ರಕ್ಷಿಸಬಹುದು.
  • AI ಮೂಲಕ, ವಿಜ್ಞಾನಿಗಳು ಹವಾಮಾನ ಬದಲಾವಣೆ ಮತ್ತು ಇತರ ಪರಿಸರ ಅಪಾಯಗಳ ಪರಿಣಾಮಗಳನ್ನು ಅಧ್ಯಯನ ಮಾಡಬಹುದು.
  • AI ಯೊಂದಿಗೆ, ವಿಜ್ಞಾನಿಗಳು ಹೊಸ ಜೈವಿಕ ಇಂಧನ ಮತ್ತು ಇತರ ಜೈವಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬಹುದು.

ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ