What India Thinks Today Global Summit: ಟಿವಿ9 ನೆಟ್‌ವರ್ಕ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗ್ಲೋಬಲ್ ಸಮಿಟ್ನ ಎರಡನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಇಂದು ಫೆಬ್ರವರಿ 25 ರಿಂದ ಫೆಬ್ರವರಿ 27 ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವ್ಯಾಪಾರ, ತಂತ್ರಜ್ಞಾನ, ಕ್ರೀಡೆ, ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಜಾಗತಿಕ ಶೃಂಗಸಭೆಯಲ್ಲಿ ತಜ್ಞರು ಕೃತಕ ಬುದ್ಧಿಮತ್ತೆ (AI) ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಪ್ರಸ್ತುತ, AI ಅತ್ಯಂತ ಪ್ರಮುಖ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಇದರ ಬಳಕೆ ಅಂತರ್ಜಾಲಕ್ಕೆ ಮಾತ್ರ ಸೀಮಿತವಾಗಿಲ್ಲ. AI ಅನ್ನು ಕೃಷಿ ಮತ್ತು ಜೀವ ವಿಜ್ಞಾನದಂತಹ ಕ್ಷೇತ್ರಗಳಲ್ಲಿಯೂ ಬಳಸಲಾಗುತ್ತಿದೆ.
ಪ್ರಪಂಚದಾದ್ಯಂತ AI ಅನ್ನು ಆತಂಕದಿಂದ ನೋಡಲಾಗುತ್ತಿದೆ. ಆದರೆ AI ತಂತ್ರಜ್ಞಾನದಿಂದ ನಾನಾ ಪ್ರಯೋಜನಗಳುಂಟು. ಎಐ ಟೆಕ್ನಾಲಜಿಯನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. ಟೆಕ್ ದೈತ್ಯರು AI ಯ ಈ ಅಂಶದ ಕುರಿತು ತಮ್ಮ ಅಭಿಪ್ರಾಯಗಳನ್ನು ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಾರೆ. AI ಯ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ. ಇದರಿಂದ ಸಾಮಾನ್ಯ ಜನರು ಸಹ ಅದರ ಪ್ರತಿಯೊಂದು ಅಂಶವನ್ನು ಅರ್ಥಮಾಡಿಕೊಳ್ಳಬಹುದು.
ಫೆಬ್ರವರಿ 26 ರಂದು ಬೆಳಗ್ಗೆ 10:35 ಕ್ಕೆ ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ಜಾಗತಿಕ ಶೃಂಗಸಭೆಯಲ್ಲಿ AI ಬಗ್ಗೆ ಚರ್ಚಿಸಲಾಗುವುದು. ಇದರಲ್ಲಿ ಸಿನಿಮಾ ನಿರ್ಮಾಪಕ ಮತ್ತು MARZ ಸಿಇಒ ಜೊನಾಥನ್ ಬ್ರೋನ್‌ಫ್‌ಮನ್, ಮೈಕ್ರೋಸಾಫ್ಟ್‌ನ ಸಾಮಿಕ್ ರಾಯ್, ರಿಲಯನ್ಸ್ ಜಿಯೊದ ಮುಖ್ಯ ಡೇಟಾ ವಿಜ್ಞಾನಿ ಡಾ. ಶೈಲೇಶ್ ಕುಮಾರ್, ಸ್ಯಾಮ್‌ಸಂಗ್ ರಿಸರ್ಚ್‌ನ ಎಐ ವಿಷನ್ ನಿರ್ದೇಶಕ ಅಲೋಕ್ ಶುಕ್ಲಾ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅನುರಾಗ್ ಮರಾಲ್ ಅವರು ಕೃತಕ ಬುದ್ಧಿಮತ್ತೆ ಮತ್ತದರ ತಂತ್ರಜ್ಞಾನದ ಬಗ್ಗೆ ಸವಿವರವಾಗಿ ಚರ್ಚಿಸಲಿದ್ದಾರೆ.
ಇದನ್ನೂ ಓದಿ: ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಎಫ್ಎಂಸಿಜಿ ಬೆಳವಣಿಗೆ ಹೇಗೆ?; ಉದ್ಯಮ ಪರಿಣಿತರ ಅಭಿಪ್ರಾಯ ಕೇಳಿ
ಕೃಷಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಪಾತ್ರ ಬಹಳ ಮಹತ್ವದ್ದಿದೆ. ಬೆಳೆ ಇಳುವರಿ ಹೆಚ್ಚಿಸಲು ಎಐ ನೆರವು ಪಡೆದುಕೊಳ್ಳಬಹುದು. ಬೆಳೆಗಳನ್ನು ಬಾಧಿಸುವ ರೋಗ, ಕೀಟಬಾಧೆ ಇತ್ಯಾದಿ ಸಮಸ್ಯೆಗಳನ್ನು ಪೂರ್ವದಲ್ಲೇ ಪತ್ತೆಹಚ್ಚಿ ನಿರ್ವಹಣೆ ಮಾಡಬಹುದು, ಅಥವಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬಹುದು. ಬೆಳೆಯ ಇಳುವರಿ ಮತ್ತು ಗುಣಮಟ್ಟ ಸುಧಾರಿಸಲು ಎಐ ಸಹಾಯ ಮಾಡಬಲ್ಲುದು. ರೈತರು ತಮ್ಮ ಬೆಳೆಗಳಿಗೆ ಸೂಕ್ತವಾದ ತಳಿ ಮತ್ತು ಬೀಜಗಳನ್ನು ಆಯ್ಕೆ ಮಾಡಬಹುದು.
ಜೀವ ವಿಜ್ಞಾನ ಅಥವಾ ಜೈವಿಕ ತಂತ್ರಜ್ಞಾನದಲ್ಲಿ AI ಮೂಲಕ ಉತ್ತಮ ಫಲಿತಾಂಶಗ ಸಾಧಿಸಬಹುದು-
ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ