Kannada News Technology Tecno has added a new smartphone to its Pova lineup – the Tecno Pova 4 Pro Check price and specs
Tecno Pova 4 Pro: ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ: ಇದು ಬಜೆಟ್ ಬೆಲೆಯ ಬಂಪರ್ ಫೋನ್
ಈ ಬಾರಿ ಟೆಕ್ನೋ ಬಜೆಟ್ ಬೆಲೆಗೆ ಟೆಕ್ನೋ ಪೋವಾ 4 ಪ್ರೊ (Tecno Pova 4 Pro) ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ತನ್ನ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಹೊಸ ವರ್ಷನ್ನಲ್ಲಿ ಕೂಡ ಬಿಡುಗಡೆ ಮಾಡುತ್ತಿದೆ. ಈ ವರ್ಷದ ಆರಂಭದಲ್ಲಿ ಟೆಕ್ನೋಪೋವಾ ನಿಯೋ (Tecno Pova Neo) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಕಂಪನಿ ಇತ್ತೀಚೆಗಷ್ಟೆ ಇದರ 5ಜಿ ಆವೃತ್ತಿಯತನ್ನು ಅನಾವರಣ ಮಾಡಿತ್ತು. ಇದೀಗ ಮತ್ತೊಂದು ಹೊಸ ಫೋನ್ನೊಂದಿಗೆ ಟೆಕ್ನೋ ಕಂಪನಿ ಮತ್ತೆ ಬಂದಿದೆ. ಈ ಬಾರಿ ಟೆಕ್ನೋ ಬಜೆಟ್ ಬೆಲೆಗೆ ಟೆಕ್ನೋ ಪೋವಾ 4 ಪ್ರೊ (Tecno Pova 4 Pro) ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಬರೋಬ್ಬರಿ 6000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.
ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್ 720×1600 ಪಿಕ್ಸೆಲ್ ರೆಸಲ್ಯೂಸನ್ ಸಾಮರ್ಥ್ಯದ 6.6 ಇಂಚಿನ ಅಮೋಲೆಡ್ ವಾಟರ್ ಡ್ರಾಪ್ ನಾಚ್ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 90Hz ರಿಫ್ರೆಶ್ ರೇಟ್ ಪಡೆದುಕೊಂಡಿದೆ.
ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ ಜಿ 99 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದರ ಜೊತೆಗೆ ಇಂಟಿಗ್ರೇಟೆಡ್ ಮಾಲಿ ಜಿ 57 ಜಿಪಿಯು ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12ರಲ್ಲಿ ರನ್ ಆಗಲಿದೆ.
ಇದನ್ನೂ ಓದಿ
WhatsApp Scam: ವಾಟ್ಸ್ಆ್ಯಪ್ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
Galaxy F13: ಆಫರ್ ಅಂದ್ರೆ ಇದು: 6000mAh ಬ್ಯಾಟರಿಯ ಗ್ಯಾಲಕ್ಸಿ F13 ಈಗ ಕೇವಲ 9499 ರೂ. ಗೆ ಲಭ್ಯ
Tech Tips: ನಿಮಗೆ ಬಂದ ವಾಟ್ಸ್ಆ್ಯಪ್ ಸಂದೇಶವನ್ನು ಕಳುಹಿಸಿದವರಿಗೆ ತಿಳಿಯದಂತೆ ಸೀಕ್ರೆಟ್ ಆಗಿ ಓದುವುದು ಹೇಗೆ?: ಇಲ್ಲಿದೆ ಟ್ರಿಕ್ಸ್
Google Pixel 6a: ಫ್ಲಿಪ್ಕಾರ್ಟ್ನಿಂದ ಧಮಾಕ ಆಫರ್: ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಬೆಲೆ ಕೇಳಿದ್ರೆ ದಂಗಾಗ್ತೀರಾ
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಇದರಲ್ಲಿ ಎಲ್‌ಇಡಿ ಫ್ಲ್ಯಾಶ್ ಜೊತೆಗೆ 50 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾ ಇದೆ.
2 ಮೆಗಾಪಿಕ್ಸೆಲ್‌ನ ಸೆಕೆಂಡರಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಹಾಗೆಯೆ 8 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾ ಜೊತೆಗೆ ಎಲ್ಇಡಿ ಫ್ಲ್ಯಾಶ್ ಅಳವಡಿಸಲಾಗಿದೆ.
ಇದರಲ್ಲಿರುವ 6000mAh ಸಾಮರ್ಥ್ಯದ ಬ್ಯಾಟರಿ ಪ್ರಮುಖ ಹೈಲೇಟ್. ಹಾಗೆಯೇ ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಅಷ್ಟೇ ಅಲ್ಲದೆ 10W ನ ರಿವರ್ಸ್ ಚಾರ್ಜಿಂಗ್ ಆಯ್ಕೆ ಕೂಡ ಪಡೆದುಕೊಂಡಿದೆ.
ಟೆಕ್ನೋ ಪೋವಾ 4 ಪ್ರೊ ಸ್ಮಾರ್ಟ್‌ಫೋನ್ ಪ್ರಸ್ತುತ ವಿದೇಶದಲ್ಲಿ ಅನಾವರಣಗಿಂಡಿದ್ದು, ಸದ್ಯದಲ್ಲೇ ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ. ಈ ಫೋನ್ ಡ್ಯುಯಲ್ ಸಿಮ್, 4G, ವೈ-ಫೈ, ಬ್ಲೂಟೂತ್, ರಿಯರ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಪೋರ್ಟ್ ಮಾಡುತ್ತದೆ.