ಪ್ರಸಿದ್ಧ ಟೆಕ್ನೋ ಕಂಪನಿ ತನ್ನ ವರ್ಲ್ಡ್ ಆಫ್ ಟೆಕ್ನಾಲಜಿ ಈವೆಂಟ್‌ನಲ್ಲಿ ಟೆಕ್ನೋ ಪೊವಾ 5 ಸರಣಿಯನ್ನು (Tecno Pova 5 Series) ಘೋಷಿಸಿದೆ. ಇದು ಟೆಕ್ನೋ ಪೊವಾ 5 ಮತ್ತು ಟೆಕ್ನೋ ಪೊವಾ 5 ಪ್ರೊ ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ಒಂಗೊಂಡಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ. ಈ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಗಳಿಂದ ಆವೃತ್ತವಾಗಿದ್ದು, ಉತ್ತಮ ಡಿಸ್ ಪ್ಲೇ, ಕ್ಯಾಮೆರಾ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಆಂಡ್ರಾಯ್ಡ್ 13-ಆಧಾರಿತ HiOS ಸ್ಕಿನ್ ಮೂಲಕ ರನ್ ಆಗುತ್ತದೆ. ಈ ಫೋನುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಟೆಕ್ನೋ ಪೊವಾ 5 ಮತ್ತು ಟೆಕ್ನೋ ಪೊವಾ 5 ಪ್ರೊ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಆಗಸ್ಟ್ 14 ರಂದು ಇದರ ಬೆಲೆ ತಿಳಿಸುವುದಾಗಿ ಕಂಪನಿ ಹೇಳಿದೆ. ಈ ಸ್ಮಾರ್ಟ್‌ಫೋನ್‌ಗಳು ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಟೆಕ್ನೋ ಪೊವಾ 5 ಪ್ರೊ ಸ್ಮಾರ್ಟ್‌ಫೋನ್ ಸಿಲ್ವರ್ ಫ್ಯಾಂಟಸಿ ಮತ್ತು ಡಾರ್ಕ್ ಇಲ್ಯೂಷನ್ ಬಣ್ಣಗಳಲ್ಲಿ ಸೇಲ್ ಕಾಣಲಿದೆ.
50MP ಕ್ಯಾಮೆರಾ, 5000mAh ಬ್ಯಾಟರಿ: ಬೆಲೆ ಕೇವಲ 7,999 ರೂ.: ಈ ಫೋನ್ ಮೇಲಿನ ಆಫರ್ ಮಿಸ್ ಮಾಡ್ಬೇಡಿ
ಟೆಕ್ನೋ ಪೊವಾ 5 ಫೋನ್ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ಗೆ ಬೆಂಬಲದೊಂದಿಗೆ 6.78-ಇಂಚಿನ ಪೂರ್ಣ-HD+ ಡಿಸ್ ಪ್ಲೇಯನ್ನು ಹೊಂದಿದೆ. ಇದು 16GB RAM ಮತ್ತು 128GB UFS 2.2 ಆಂತರಿಕ ಸಂಗ್ರಹಣೆಯೊಂದಿಗೆ ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ G99 SoC ನಿಂದ ಚಾಲಿತವಾಗಿದೆ, ಇದನ್ನು ಮೈಕ್ರೊ SD ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬಂದರೆ, ಟೆಕ್ನೋ ಪೊವಾ 5 ಫೋನ್ ಡ್ಯುಯಲ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು AI ಲೆನ್ಸ್ ಜೊತೆಗೆ LED ಫ್ಲ್ಯಾಶ್ ಅನ್ನು ಹೊಂದಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಸಂಪರ್ಕಕ್ಕಾಗಿ, ಇದು ಡ್ಯುಯಲ್ 4G VoLTE, ವೈಫೈ, ಬ್ಲೂಟೂತ್ 5.0, GPS, USB ಟೈಪ್-C, NFC ಮತ್ತು 3.5mm ಆಡಿಯೋ ಜ್ಯಾಕ್ ಅನ್ನು ನೀಡುತ್ತದೆ. ಟೆಕ್ನೋ ಪೊವಾ 5 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಟೆಕ್ನೋ ಪೊವಾ 5 ಪ್ರೊ ಫೋನ್ ಹಿಂಭಾಗದಲ್ಲಿ ARC ಇಂಟರ್ಫೇಸ್‌ನೊಂದಿಗೆ ಬರುತ್ತದೆ, ಇದು ಕಂಪನಿಯಿಂದ ಮೊದಲ ಪ್ರಯತ್ನವಾಗಿದೆ. ನೋಟಿಫಿಕೇಶನ್ ಬಂದಾಗ ಇದು LED ಲೈಟ್ ಮೂಲಕ ತಿಳಿಸುತ್ತದೆ. G57 MC2 CPU ಜೊತೆಗೆ ಆಕ್ಟಾ-ಕೋರ್ ಡೈಮೆನ್ಸಿಟಿ 6080 SoC ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್‌ಫೋನ್‌ನ ಮುಂಭಾಗದ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ದೀರ್ಘ ಸಮಯ ಬಾಳಕೆ ಬರುವ 5,000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ. ಇದು ವೇಗವಾದ 68W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ