AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tecno POVA 6 Pro: 108MP ಕ್ಯಾಮೆರಾ, 6,000mAh ಬ್ಯಾಟರಿ: ಭಾರತಕ್ಕೆ ಬಂತು ಟೆಕ್ನೋ ಕಂಪನಿಯ ಆಕರ್ಷಕ ಫೋನ್

Tecno POVA 6 Pro Launched in India: ಇಂದು ದೇಶದಲ್ಲಿ ಹೊಸ ಟೆಕ್ನೋ ಪೋವಾ 6 ಪ್ರೊ ಸ್ಮಾರ್ಟ್​ಫೋನ್ ಅನಾವರಣಗೊಂಡಿದೆ. ಹೊಸ ಟೆಕ್ನೋ ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ 108MP ಪ್ರಾಥಮಿಕ ಕ್ಯಾಮೆರಾ ಹೊಂದಿದೆ. 70W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.

Tecno POVA 6 Pro: 108MP ಕ್ಯಾಮೆರಾ, 6,000mAh ಬ್ಯಾಟರಿ: ಭಾರತಕ್ಕೆ ಬಂತು ಟೆಕ್ನೋ ಕಂಪನಿಯ ಆಕರ್ಷಕ ಫೋನ್
Tecno POVA 6 Pro
Vinay Bhat
|

Updated on: Mar 29, 2024 | 2:31 PM

Share

ಭಾರತದಲ್ಲಿ ಸದಾ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವ ಪ್ರಸಿದ್ಧ ಟೆಕ್ನೋ ಕಂಪನಿ ಇದೀಗ ಹೊಸ ಮೊಬೈಲ್​ನೊಂದಿಗೆ ಪುನಃ ಬಂದಿದೆ. ಇಂದು ದೇಶದಲ್ಲಿ ಹೊಸ ಟೆಕ್ನೋ ಪೋವಾ 6 ಪ್ರೊ (Tecno POVA 6 Pro) ಸ್ಮಾರ್ಟ್​ಫೋನ್ ಅನಾವರಣಗೊಂಡಿದೆ. ಈ ಫೋನ್ ಅನ್ನು ಮೊದಲು ಫೆಬ್ರವರಿಯಲ್ಲಿ MWC 2024 ನಲ್ಲಿ ರಿಲೀಸ್ ಮಾಡಲಾಗಿತ್ತು.ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6080 SoC, 6,000mAh ಬ್ಯಾಟರಿ ಮತ್ತು 70W ವೇಗದ ಚಾರ್ಜಿಂಗ್ ಬೆಂಬಲದಂತಹ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಮಧ್ಯಮ ಶ್ರೇಣಿಯ ಟೆಕ್ನೋ ಪೋವಾ 6 ಪ್ರೊ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಟೆಕ್ನೋ ಪೋವಾ 6 ಪ್ರೊ ಬೆಲೆ, ಮಾರಾಟ ದಿನಾಂಕ:

ಟೆಕ್ನೋ ಪೋವಾ 6 ಪ್ರೊ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿವೆ. ಇದರ 8GB RAM ಮತ್ತು 256GB ಸಂಗ್ರಹಣೆಯ ಬೇಸ್ ಮಾಡೆಲ್‌ಗೆ ರೂ. 19,999 ಇದೆ. ಅಂತೆಯೆ ಇದರ 12GB RAM ಮತ್ತು 256GB ಆನ್‌ಬೋರ್ಡ್ ಸಂಗ್ರಹಣೆಗೆ 21,999 ರೂ. ನಿಗದಿ ಮಾಡಲಾಗಿದೆ. ಸ್ಮಾರ್ಟ್‌ಫೋನ್ 12GB RAM ಅನ್ನು ಮತ್ತು ವಿಸ್ತರಿಸಬಹುದಾದ ಸಂಗ್ರಹಣೆಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಸಹ ಬೆಂಬಲಿಸುತ್ತದೆ. ಇದು ಅಮೆಜಾನ್ ಇಂಡಿಯಾದ ಮೂಲಕ ಏಪ್ರಿಲ್ 4 ರಿಂದ ಮಧ್ಯಾಹ್ನ 12 ಗಂಟೆಗೆ ಸೇಲ್ ಕಾಣಲಿದೆ.

ಹಣ ಸಂಪಾದಿಸಲು ಮತ್ತೊಂದು ದಾರಿ: ನಿಮ್ಮ ಹಳೆಯ ಬಟ್ಟೆಗಳನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡಿ

ಟೆಕ್ನೋ ಪೋವಾ 6 ಪ್ರೊ ಫೀಚರ್ಸ್:

ಟೆಕ್ನೋ ಪೋವಾ 6 ಪ್ರೊ ಫೋನ್ 6.78-ಇಂಚಿನ FHD+ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 2160Hz ಹೈ-ಫ್ರೀಕ್ವೆನ್ಸಿ ಡಿಮ್ಮಿಂಗ್ ಮತ್ತು TUV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಪ್ರಮಾಣೀಕರಣವನ್ನು ಹೊಂದಿದೆ. ಮಾಲಿ-ಜಿ 57 ಜಿಪಿಯು ಜೊತೆ ಜೋಡಿಸಲಾದ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

ಹೊಸ ಟೆಕ್ನೋ ಫೋನ್ ಎಲ್ಇಡಿ ಫ್ಲ್ಯಾಷ್ನೊಂದಿಗೆ 108MP ಪ್ರಾಥಮಿಕ ಕ್ಯಾಮೆರಾ, 2MP ಸೆಕೆಂಡರಿ ಸೆನ್ಸಾರ್ ಮತ್ತು AI ಲೆನ್ಸ್ ಅನ್ನು ಹೊಂದಿದೆ. ಸೆಲ್ಫೀಗಳಿಗಾಗಿ, ನೀವು ಟೆಕ್ನೋ ಪೋವಾ 6 ಪ್ರೊ ನಲ್ಲಿ 32MP ಮುಂಭಾಗದ ಕ್ಯಾಮೆರಾವನ್ನು ಪಡೆಯುತ್ತೀರಿ. ಸಾಫ್ಟ್‌ವೇರ್ ಮುಂಭಾಗದಲ್ಲಿ, ಇದು ಆಂಡ್ರಾಯ್ಡ್ 14-ಆಧಾರಿತ HiOS 14 ಕಸ್ಟಮ್ ಸ್ಕಿನ್ ಔಟ್-ಆಫ್-ಬಾಕ್ಸ್ ಅನ್ನು ರನ್ ಮಾಡುತ್ತದೆ. ಈ ಸ್ಮಾರ್ಟ್​ಫೋನ್ 70W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ