TRAI: ಟ್ರೂ ಕಾಲರ್​ಗೆ ಬಿಗ್ ಶಾಕ್: ಬರುತ್ತಿದೆ ಇದೇ ಮಾದರಿಯಲ್ಲಿ ಮತ್ತೊಂದು ಹೊಸ ಆ್ಯಪ್

| Updated By: Vinay Bhat

Updated on: May 23, 2022 | 3:02 PM

Truecaller: ಟೆಲಿಕಾಂ ಆಪರೇಟರ್‌ಗಳಿಗೆ ಜನರು KYC ದಾಖಲೆಯನ್ನು ನೀಡುವಾಗ ಯಾವ ಹೆಸರು ಕೊಡುತ್ತಾರೋ ಅದೇ ಹೆಸರು ಫೋನ್ ಪರದೆ ಮೇಲೆ ಕಾಣಿಸಲಿದೆ ಎಂದು ಹೇಳಿದ್ದಾರೆ. ಅಪರಿಚಿತ ಕರೆಗಳ ಕಾಲರ್‌ ಐಡಿ ತೋರಿಸುವ ವ್ಯವಸ್ಥೆ ಜಾರಿಗೆ ಸಿದ್ಧತೆಗಳು ಆರಂಭವಾಗಿವೆ ಎಂದು ಪಿ.ಡಿ.ವಘೇಲಾ ಖಚಿತಪಡಿಸಿದ್ದಾರೆ.

TRAI: ಟ್ರೂ ಕಾಲರ್​ಗೆ ಬಿಗ್ ಶಾಕ್: ಬರುತ್ತಿದೆ ಇದೇ ಮಾದರಿಯಲ್ಲಿ ಮತ್ತೊಂದು ಹೊಸ ಆ್ಯಪ್
Caller ID
Follow us on

ಈಗಂತು ಅನೇಕ ಸ್ಮಾರ್ಟ್‌ಫೋನ್ (Smartphone) ಬಳಕೆದಾರರು ಪ್ರಸಿದ್ಧ ಟ್ರೂ ಕಾಲರ್ ಆ್ಯಪ್ (Truecaller App) ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬೇಡವಾದ ಕರೆಗಳನ್ನು ನಿರ್ಭಂದಿಸಬಹುದು. ಅಲ್ಲದೆ ಗುರುತು ಪತ್ತೆ ಇಲ್ಲದ ನಂಬರ್ ಗಳನ್ನು ಹುಡುಕಲು ಸೇರಿದಂತೆ ವಿವಿಧ ಕಾರ್ಯಗಳಿಗೆ ಟ್ರೂಕಾಲರ್ ಆ್ಯಪ್ ಸಹಕಾರಿಯಾಗಿದೆ. ಪ್ರಮುಖವಾಗಿ ಅಪರಿಚಿತ ಕರೆಯನ್ನು ಪತ್ತೆ ಹಚ್ಚುವುದಕ್ಕೆಂದೇ ಟ್ರೂಕಾಲರ್ ಆ್ಯಪ್ ಹೆಚ್ಚು ಫೇಮಸ್ ಆಗಿದೆ. ಆದರೀಗ ಈ ಟ್ರೂ ಕಾಲರ್ ಆ್ಯಪ್​ಗೆ ಸಂಕಷ್ಟ ಎದುರಾಗಿದೆ. ಯಾಕೆಂದರೆ ಟ್ರೂ ಕಾಲರ್‌ ಅಪ್ಲಿಕೇಶನ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಹೊಸ ಕಾಲರ್‌ ಐಡಿ ಫೀಚರ್ಸ್‌ ಪರಿಚಯಿಸಲು ಟ್ರಾಯ್‌ (TRAI) ಸಿದ್ಧತೆ ನಡೆಸಿದೆ. ಸದ್ಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಶೀಘ್ರದಲ್ಲೇ ಈ ಫೀಚರ್ಸ್‌ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ.

ಈ ಬಗ್ಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ಅಧ್ಯಕ್ಷ ವಘೇಲಾ ಮಾಹಿತಿ ನೀಡಿದ್ದು, ಈ ವ್ಯವಸ್ಥೆಯಲ್ಲಿ ನಮಗೆ ಯಾರು ಕರೆ ಮಾಡುತ್ತಾರೋ ಅವರ KYC(ನೋ ಯುವರ್ ಕಸ್ಟಮರ್) ದಾಖಲೆ ನೀಡುವ ವೇಳೆ ಕೊಡುವ ಹೆಸರೇ ಫೋನ್ ಪರದೆ ಮೇಲೆ ಮೂಡುವಂತೆ ಮಾಡುತ್ತದೆ. ಅಂದರೆ ಟೆಲಿಕಾಂ ಆಪರೇಟರ್‌ಗಳಿಗೆ ಜನರು KYC ದಾಖಲೆಯನ್ನು ನೀಡುವಾಗ ಯಾವ ಹೆಸರು ಕೊಡುತ್ತಾರೋ ಅದೇ ಹೆಸರು ಫೋನ್ ಪರದೆ ಮೇಲೆ ಕಾಣಿಸಲಿದೆ ಎಂದು ಹೇಳಿದ್ದಾರೆ. ಅಪರಿಚಿತ ಕರೆಗಳ ಕಾಲರ್‌ ಐಡಿ ತೋರಿಸುವ ವ್ಯವಸ್ಥೆ ಜಾರಿಗೆ ಸಿದ್ಧತೆಗಳು ಆರಂಭವಾಗಿವೆ ಎಂದು ಪಿ.ಡಿ.ವಘೇಲಾ ಖಚಿತಪಡಿಸಿದ್ದಾರೆ.

KYC ದಾಖಲೆಗಳಿಗೆ ಅನುಗುಣವಾಗಿ, ಅಂದರೆ ಸಿಮ್ ಖರೀದಿಸಿದಾಗ ಗ್ರಾಹಕರು ಒದಗಿಸುವ ಪ್ರಕಾರ ಕರೆ ಮಾಡುವವರ ಹೆಸರನ್ನು ಗುರುತಿಸಲು ಮತ್ತು ಕರೆ ಸ್ವೀಕರಿಸಿದವರಿಗೆ ತೋರಿಸಲಿ ಸಹಾಯ ಮಾಡುತ್ತದೆ. ಮತ್ತು ಕ್ರೌಡ್‌ಸೋರ್ಸಿಂಗ್ ಡೇಟಾದ ಆಧಾರದ ಮೇಲೆ ಕರೆ ಮಾಡುವವರನ್ನು ಗುರುತಿಸುವ ಕೆಲವು ಅಪ್ಲಿಕೇಶನ್‌ಗಳಿಗಿಂತ ಹೆಚ್ಚಿನ ನಿಖರತೆ ಮತ್ತು ಪಾರದರ್ಶಕತೆಯನ್ನು ತರುತ್ತದೆ ಎಂದು ಈ ಕ್ರಮವು ಮಹತ್ವದ್ದಾಗಿದೆ.

ಇದನ್ನೂ ಓದಿ
WhatsApp: ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಬಂದ ಮೆಸೇಜ್ ಅನ್ನು ಯಾರೂ ನೋಡದ ಹಾಗೆ ಮಾಡಬಹುದು: ಹೇಗೆ?
iQoo Neo 6: ಭಾರತಕ್ಕೆ ಅಪ್ಪಳಿಸಲಿದೆ ವಿದೇಶದಲ್ಲಿ ಧೂಳೆಬ್ಬಿಸಿದ ಐಕ್ಯೂ ನಿಯೋ 6 5G: ಮೇ 31ಕ್ಕೆ ರಿಲೀಸ್
OnePlus Nord 2T 5G: ಒನ್‌ಪ್ಲಸ್‌ ನಾರ್ಡ್ 2T 5G ಬಿಡುಗಡೆ: ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿದೆ ಈ ಫೋನ್
Oppo Reno 8 Series: ಕ್ಯಾಮೆರಾ ಪ್ರಿಯರ ನಿದ್ದೆ ಕೆಡಿಸಿದ ಒಪ್ಪೋ ರೆನೋ 8 ಸರಣಿ: ಇದರಲ್ಲಿ ಅಂಥದ್ದೇನಿದೆ ನೋಡಿ

Vi: ವಿ ಟೆಲಿಕಾಂನಿಂದ ಹೊಸ ಪ್ರಿಪೇಯ್ಡ್ ಯೋಜನೆ ಘೋಷಣೆ: ಜಿಯೋ ಏರ್ಟೆಲ್​ನಲ್ಲಿಲ್ಲ ಈ ಪ್ಲಾನ್

ಇತ್ತ ಟ್ರೂ ಕಾಲರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೆವೈಸಿಯನ್ನು ಆಧರಿಸಿಲ್ಲ. ಬದಲಿಗೆ ಬಳಕೆದಾರರು ಸೆಟ್‌ ಮಾಡಿರುವ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ಹೆಸರನ್ನು ತಿಳಿಸಲಿದೆ. ಆದರೆ ಸರ್ಕಾರ ಪರಿಚಯಿಸಲು ಮುಂದಾಗಿರುವ ಹೊಸ ಕಾಲರ್‌ ಐಡಿ KYCಯನ್ನು ಆಧರಿಸಲಿದೆ. ಸದ್ಯ ಟೆಲಿಕಾಂ ಇಲಾಖೆ (DoT) ಕಾಲರ್ ಐಡಿ ಫೀಚರ್ಸ್‌ ಕೆಲಸವನ್ನು ಪ್ರಾರಂಭಿಸಲು TRAI ಗೆ ಒಪ್ಪಿಗೆ ನೀಡಿದೆ. ಈ ಫೀಚರ್ಸ್‌ ಮುಂದಿನ ಒಂದೆರಡು ತಿಂಗಳಲ್ಲಿ ಅದರ ಕೆಲಸವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಸ್ಪ್ಯಾಮ್‌ ಕರೆಗಳನ್ನು ಮಾಡುವ ವಂಚಕರಿಂದ ಜನರನ್ನು ರಕ್ಷಿಸುವ ಸಲುವಾಗಿ ಹಾಗೂ ಕರೆ ಮಾಡಿರುವ ನಿಖರ ವ್ಯಕ್ತಿ ಯಾರು ಎಂದು ತಿಳಿಸುವ ಸಲುವಾಗಿ ಸರ್ಕಾರವೇ ಟ್ರೂ-ಕಾಲರ್ ರೀತಿಯ ವ್ಯವಸ್ಥೆ ಜಾರಿಗೆ ತರಲು ಈ ನಿರ್ಧಾರ ಕೈಗೊಂಡಿದೆ. ಈ ವ್ಯವಸ್ಥೆಯು ಜಾರಿಗೆ ಬಂದರೆ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯ ಅಧಿಕೃತ ಹೆಸರು ಕಾಣಿಸಿಕೊಳ್ಳುತ್ತದೆ. ಇದರಿಂದ ಜನರು ವಂಚಕರ ಬಗ್ಗೆ ಎಚ್ಚರ ವಹಿಸಬಹುದು ಎಂದು ದೂರಸಂಪರ್ಕ ಇಲಾಖೆಯು ಅಭಿಪ್ರಾಯಪಟ್ಟಿದೆ. ಈವರೆಗೆ ಟ್ರಾಯ್ ಸ್ಪ್ಯಾಮ್ ಅಥವಾ ಬೇಡದ ಕರೆಗಳನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಸ್ಪ್ಯಾಮ್ ಕರೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಇಲಾಖೆಗೆ ಸಾಧ್ಯವಾಗಿರಲಿಲ್ಲ. ಇದೀಗ ಬರಲಿರುವ ಹೊಸ ವಿಧಾನದಿಂದ ಸ್ಪ್ಯಾಮ್ ಕರೆಗಳನ್ನು ಜನರೇ ತಿಳಿದು ತಪ್ಪಿಸಲು ಸಾಧ್ಯವಾಗಲಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ