Moto G Stylus 2022: ಭಯಂಕರ ಸ್ಟೈಲಿಶ್ ಆಗಿದೆ ಮೋಟೋ ಜಿ ಸ್ಟೈಲಸ್ 2022 ಸ್ಮಾರ್ಟ್‌ಫೋನ್‌: ಬೆಲೆ ಎಷ್ಟು?

| Updated By: Vinay Bhat

Updated on: Feb 04, 2022 | 2:16 PM

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಮೋಟೋ ಜಿ ಸ್ಟೈಲಸ್ 2022 ಸ್ಮಾರ್ಟ್‌ಫೋನ್‌ 90hz ರಿಫ್ರೆಶ್ ರೇಟ್‌ ಒಳಗೊಂಡ 6.8 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 5000mAh ಸಾಮರ್ಥ್ಯದ ಬ್ಯಾಟರಿ, ಮೀಡಿಯಾಟೆಕ್‌ ಹಿಲಿಯೋ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

Moto G Stylus 2022: ಭಯಂಕರ ಸ್ಟೈಲಿಶ್ ಆಗಿದೆ ಮೋಟೋ ಜಿ ಸ್ಟೈಲಸ್ 2022 ಸ್ಮಾರ್ಟ್‌ಫೋನ್‌: ಬೆಲೆ ಎಷ್ಟು?
Moto G Stylus 2022
Follow us on

2021ನೇ ವರ್ಷದಲ್ಲಿ ಮಾರುಕಟ್ಟೆಗೆ ಬಜೆಟ್ ಬೆಲೆಯ ಜೊತೆಗೆ ಹೈರೇಂಜ್ ಮಾದರಿಯ ಅತಿ ಹೆಚ್ಚು ಸ್ಮಾರ್ಟ್​ಫೋನ್​ಗಳನ್ನು (Smartphone) ಪರಿಚಯಿಸಿದ್ದ ಪ್ರಸಿದ್ಧ ಮೋಟೋರೊಲಾ (Motorola) ಕಂಪನಿ ಈ ವರ್ಷ ಕೂಡ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವತ್ತ ಚಿನ್ನ ನೆಟ್ಟಿದೆ. ಈಗಾಗಲೇ 200 ಮೆಗಾಫಿಕ್ಸೆಲ್ ಕ್ಯಾಮೆರಾ ಸ್ಮಾರ್ಟ್​ಫೋನ್ ಅನ್ನು ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಸದ್ದಿಲ್ಲದೆ ಮೋಟೋ ಜಿ ಸ್ಟೈಲಸ್ 2022 (Moto G Stylus 2022) ಸ್ಮಾರ್ಟ್‌ಫೋನ್‌ ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಮೋಟೋ ಜಿ ಸ್ಟೈಲಸ್ 2021ರ ಉತ್ತರಾಧಿಕಾರಿಯಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್‌ 90hz ರಿಫ್ರೆಶ್ ರೇಟ್‌ ಒಳಗೊಂಡ 6.8 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. 5000mAh ಸಾಮರ್ಥ್ಯದ ಬ್ಯಾಟರಿ, ಮೀಡಿಯಾಟೆಕ್‌ ಹಿಲಿಯೋ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಸದ್ಯಕ್ಕೆ ಈ ಫೋನ್ ಯುಎಸ್​​ನಲ್ಲಿ ರಿಲೀಸ್ ಆಗಿದೆ. ಭಾರತದಲ್ಲೂ ಇದು ಅನಾವರಣಗೊಳ್ಳಲಿದ್ದು ಯಾವಾಗ ಎಂಬ ಬಗ್ಗೆ ಕಂಪನಿ ಬಹಿರಂಗಪಡಿಸಿಲ್ಲ. ಮೋಟೋ ಜಿ ಸ್ಟೈಲಸ್ 2022 ಸ್ಮಾರ್ಟ್‌ಫೋನ್‌ ಯುಎಸ್‌ನಲ್ಲಿ $ 399 ಬೆಲೆಗೆ ಲಭ್ಯವಾಗಲಿದೆ. ಈ ಫೋನ್‌ ಟ್ವಿಲೈಟ್ ಬ್ಲೂ ಮತ್ತು ಮೆಟಾಲಿಕ್‌ ರೋಸ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಯುಎಸ್‌ನಲ್ಲಿ ಫೆಬ್ರವರಿ 17 ರಿಂದ ಫ್ರಿ ಆರ್ಡರ್‌ಗೆ ಲಭ್ಯವಾಗಲಿದೆ.

ಮೋಟೋ ಜಿ ಸ್ಟೈಲಸ್ 2022 ಸ್ಮಾರ್ಟ್‌ಫೋನ್‌ 1080×2460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿರುವ 6.78 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತ ಮತ್ತು 90hz ರಿಫ್ರೆಶ್ ರೇಟ್‌ ಒಳಗೊಂಡಿದೆ. ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 11 ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸ್ಯಾಮ್ಸಂಗ್ ಐಸೊಸೆಲ್ ಜೆಎನ್ 1 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸ್ಯಾಮ್ಸಂಗ್ ಐಸೊಸೆಲ್ ಅಲ್ಟ್ರಾವೈಡ್ ಸೆನ್ಸಾರ್‌ ಮತ್ತು 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮರಾ ಹೊಂದಿದೆ.

ಮೋಟೋ ಜಿ ಸ್ಟೈಲಸ್ 2022 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್‌ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, 3.5 ಮಿಮೀ ಜ್ಯಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್‌, ಸಿಂಗಲ್‌ ಬಾಟಮ್-ಫೈರಿಂಗ್ ಸ್ಪೀಕರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ 12 ಗೆ ಅಪ್ಗ್ರೇಡ್ ಆಗಿರುತ್ತದೆ. ಸದ್ಯಕ್ಕೆ ಇದು ಆಂಡ್ರಾಯ್ಡ್‌ 11 ಒಎಸ್​ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.

Power Bank: ಇಲ್ಲಿದೆ ನೋಡಿ 27,000,000mAh ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಬೆಲೆ ಎಷ್ಟು?

ಸೂಪರ್‌ ಸಾನಿಕ್ ಬಿಸಿನೆಸ್ ಜೆಟ್ ಹೇಗಿದೆ ಗೊತ್ತಾ? ಚೀನಾದ ಏರೋಸ್ಪೇಸ್ ಸಂಸ್ಥೆಯಿಂದ ಹೊಸ ಜೆಟ್ ಬಿಡುಗಡೆ