AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Bank: ಇಲ್ಲಿದೆ ನೋಡಿ 27,000,000mAh ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಬೆಲೆ ಎಷ್ಟು?

27,000,000mAh Capacity Power Bank: ಶಾಕಿಂಗ್ ವಿಚಾರ ಎಂದರೆ ಇದರಿಂದ ಏಕಕಾಲದಲ್ಲಿ ಬರೋಬ್ಬರಿ 5 ಸಾವಿರಕ್ಕಿಂತಲೂ ಅಧಿಕ ಸ್ಮಾರ್ಟ್​ಫೋನ್​ಗಳನ್ನು ಚಾರ್ಜ್​ ಮಾಡಬಹುದಾಗಿದೆ. ಚೀನಾ ಮೂಲಕ ಎಲೆಕ್ಟ್ರಾನಿಕ್ಸ್ ಹ್ಯಾಂಡಿ ಗೆಂಗ್ ಎಂಬವರು ಇದನ್ನು ತಯಾರು ಮಾಡಿದ್ದು, ಇದು 27,000,000mAh ಸಾಮರ್ಥ್ಯ ಹೊಂದಿದೆ.

Power Bank: ಇಲ್ಲಿದೆ ನೋಡಿ 27,000,000mAh ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಬೆಲೆ ಎಷ್ಟು?
27,000,000mAh Power Bank
TV9 Web
| Updated By: Vinay Bhat|

Updated on: Feb 04, 2022 | 1:04 PM

Share

ಮಾರುಕಟ್ಟೆಯಲ್ಲೀಗ ಬಿಡುಗಡೆ ಆಗುತ್ತಿರುವ ಬಹುತೇಕ ಸ್ಮಾರ್ಟ್​ಫೋನ್​ಗಳು (Smartphone) 5000mAh ಬ್ಯಾಟರಿಯೊಂದಿಗೆ ಆವೃತ್ತವಾಗಿರುತ್ತದೆ. ಹೆಚ್ಚು ಎಂದರೆ 7000mAh ಬ್ಯಾಟರಿಯ ಫೋನ್ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿದೆ. ಆದರೆ, ಬಳಕೆದಾರರಿಗೆ ಇದು ಸಾಕಾಗುವುದಿಲ್ಲ. ಅತ್ಯಂತ ವೇಗವಾಗಿ ಚಾರ್ಜ್ ಆಗುವ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿದರೂ ಅನೇಕರಿಗೆ ತೃಪ್ತಿಯಿಲ್ಲ. ಇದಕ್ಕಾಗಿ ಪವರ್ ಬ್ಯಾಂಕ್ (Power Bank) ಬಳಕೆ ಮಾಡುತ್ತಾರೆ. ಹೌದು, ಪಕ್ಕದಲ್ಲೆ ಇಟ್ಟುಕೊಂಡು ಚಾರ್ಜ್ ಮಾಡಬಹುದಾದ ಅಥವಾ ಪ್ರಯಾಣದ ವೇಳೆ ಚಾರ್ಜ್ ಮಾಡಬಹುದಾದ ಪವರ್ ಬ್ಯಾಂಕ್ ಅನ್ನು ಅನೇಕ ಜನರು ಉಪಯೋಗಿಸುತ್ತಾರೆ. ಇದೀಗ ಪವರ್ ಬ್ಯಾಂಕ್ ಸುದ್ದಿ ಯಾಕೆಂದರೆ, ಚೀನಾದಲ್ಲಿ (China) ಓರ್ವ ವ್ಯಕ್ತಿ ವಿಶ್ವದ ಅತ್ಯಂತ ದೊಡ್ಡ ಸಾಮರ್ಥ್ಯವಿರುವ ಪವರ್ ಬ್ಯಾಂಕ್ ಒಂದನ್ನು ನಿರ್ಮಿಸಿದ್ದಾರೆ.

ಶಾಕಿಂಗ್ ವಿಚಾರ ಎಂದರೆ ಇದರಿಂದ ಏಕಕಾಲದಲ್ಲಿ ಬರೋಬ್ಬರಿ 5 ಸಾವಿರಕ್ಕಿಂತಲೂ ಅಧಿಕ ಸ್ಮಾರ್ಟ್​ಫೋನ್​ಗಳನ್ನು ಚಾರ್ಜ್​ ಮಾಡಬಹುದಾಗಿದೆ. ಚೀನಾ ಮೂಲಕ ಎಲೆಕ್ಟ್ರಾನಿಕ್ಸ್ ಹ್ಯಾಂಡಿ ಗೆಂಗ್ ಎಂಬವರು ಇದನ್ನು ತಯಾರು ಮಾಡಿದ್ದು, ಇದು 27,000,000mAh ಸಾಮರ್ಥ್ಯ ಹೊಂದಿದೆ. ಹ್ಯಾಂಡಿ ಗೆಂಗ್ ಜನವರಿಯಲ್ಲಿ ಯೂಟ್ಯೂಬ್‌ನಲ್ಲಿ ತಾನು ತಯಾರಿಸಿದ್ದ ಪವರ್​ ಬ್ಯಾಂಕ್​ನ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ಪವರ್ ಬ್ಯಾಂಕ್ ಅನ್ನು ತಯಾರಿಸುವ ಪ್ರಕ್ರಿಯೆಯನ್ನು ಕೂಡ ವಿವರಿಸಿದ್ದಾರೆ.

ಪ್ರತಿಯೊಬ್ಬರು ನನಗಿಂತ ದೊಡ್ಡ ಪವರ್ ಬ್ಯಾಂಕ್ ಅನ್ನು ಹೊಂದಿದ್ದಾರೆ. ಈ ಕಾರಣಕ್ಕೆ ನಾನು ಸಂತೋಷವಾಗಿಲ್ಲ. ಹಾಗಾಗಿ ನಾನು 27,000,000mAh ಪೋರ್ಟಬಲ್ ಚಾರ್ಜರ್ ಪವರ್ ಬ್ಯಾಂಕ್ ಅನ್ನು ತಯಾರಿಸಿದ್ದೇನೆ ಎಂದು ಹ್ಯಾಂಡಿ ಗೆಂಗ್ ಹೇಳಿದ್ದಾರೆ. MySmartPrice ಮಾಡಿರುವ ವರದಿಯ ಪ್ರಕಾರ, ಗೆಂಗ್ ತನ್ನ ಪವರ್ ಬ್ಯಾಂಕ್ 3,000mAh ಬ್ಯಾಟರಿಗಳೊಂದಿಗೆ 5,000 ಫೋನ್‌ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ. ಆದರೆ, ಇದರ ಬೆಲೆ ಬಗ್ಗೆ ಅವರು ಹಂಚಿಕೊಂಡಿಲ್ಲ. ಯಾಕೆಂದರೆ ಇದು ಮಾರಾಟಕ್ಕೆ ಲಭ್ಯವಿಲ್ಲ.

ಈ ಪವರ್​ಫುಲ್ ಪವರ್ ಬ್ಯಾಂಕ್ 5.9×3.9 ಅಡಿ ಉದ್ದವಾಗಿದೆ. ಬೃಹತ್ ಸಾಧನವು ರಕ್ಷಣಾತ್ಮಕ ಚೌಕಟ್ಟನ್ನು ಹೊಂದಿದೆ ಮತ್ತು ಸುಮಾರು 60 ಪೋರ್ಟ್‌ಗಳನ್ನು ಒಳಗೊಂಡಿದೆ. ಇದು ಅದರ ಔಟ್‌ಪುಟ್ ಚಾರ್ಜಿಂಗ್ ಕನೆಕ್ಟರ್‌ಗಳ ಮೂಲಕ 220V ವಿದ್ಯುತ್ ವೋಲ್ಟೇಜ್ ಅನ್ನು ಬೆಂಬಲಿಸುತ್ತದೆ. ಅಷ್ಟು ಮಾತ್ರವಲ್ಲದೆ ಟಿವಿ, ವಾಷಿಂಗ್ ಮೆಷಿನ್‌ಗಳಂತಹ ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಲಾಯಿಸಬಹುದು ಮತ್ತು ಈ ಪವರ್ ಬ್ಯಾಂಕ್‌ನೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಾರ್ಜ್ ಮಾಡಬಹುದು.

ಈ ಪವರ್​ ಬ್ಯಾಂಕ್​ ಅನ್ನು ಒಂದು ಕಡೆಯಿಂದ ಮತ್ತೊಂದೆಡೆ ಸಾಗಿಸಲು ಚಕ್ರಗಳನ್ನು ಜೋಡಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟ್ಯಾಂಡರ್ಡ್ ಪವರ್ ಬ್ಯಾಂಕ್‌ಗಿಂತ ಇದು ಹೆಚ್ಚು ಭಿನ್ನವಾಗಿರುವುದಿಲ್ಲ, ಕೇವಲ ದೊಡ್ಡದಾಗಿದೆ. ಪ್ರಯಾಣದ ಸಮಯದಲ್ಲಿ ಸಾಗಿಸಲು ಇದು ತುಂಬಾ ದೊಡ್ಡದಾಗಿದ್ದರೂ, ಮನೆಗಳಲ್ಲಿ ವಿದ್ಯುತ್ ಕಡಿತದ ಸಮಸ್ಯೆಗೆ ಇದೊಂದು ಉತ್ತಮ ಸಾಧನವಾಗಿದೆ.

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಡಿಸ್ ಪ್ಲೇಯನ್ನು ಹೀಗೂ ಉಪಯೋಗಿಸಬಹುದು: ಒಮ್ಮೆ ಟ್ರೈ ಮಾಡಿ

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ