ದೇಶದಲ್ಲಿ ಈಗ ಟ್ರಾಫಿಕ್ (Traffic) ನಿಯಮ ಸಾಕಷ್ಟು ಕಠಿಣ ಮಾಡಲಾಗಿದೆ. ಕೇಂದ್ರ ಸರ್ಕಾರ ಟ್ರಾಫಿಕ್ಗೆ ಸಂಬಂಧಿಸಿದಂತೆ ಹೊಸ ಹೊಸ ನೀತಿಯನ್ನು ಜಾರಿಗೆ ತರುತ್ತಿದೆ. ಆದರೆ, ಪ್ರತಿ ವರ್ಷ ಅಪಘಾತಗಳ ಸಂಖ್ಯೆ ಮಾತ್ರ ಅಧಿಕವಾಗುತ್ತಲೇ ಇದೆ. ಸಂಚಾರಿ ನಿಮಯಗಳನ್ನು ಉಲ್ಲಂಘನೆ ಮಾಡುವವರ ಸಂಖ್ಯೆ ಕೂಡ ಕಡಿಮೆಯಾಗಿಲ್ಲ. ಒಂದು ವೇಳೆ ನೀವು ಕೂಡ ಟ್ರಾಫಿಕ್ ನಿಯಮಗಳನ್ನು (Traffic Rules) ಉಲ್ಲಂಘಿಸಿದ್ದರೆ, ಪೊಲೀಸರು (Police) ವಾಹನಗಳನ್ನು ತಡೆದು ಪರಿಶೀಲಿಸುವ ವೇಳೆ ನಿಮ್ಮ ವಾಹನದ ಟ್ರಾಫಿಕ್ ಉಲ್ಲಂಘನೆಯು ಕಂಡುಬಂದರೆ ನಿಮಗೆ ದಂಡವನ್ನು ಪಾವತಿಸಲು ಸೂಚಿಸುತ್ತಾರೆ. ಈ ವೇಳೆ ನಿಮ್ಮ ಬಳಿ ದಂಡವನ್ನು ಪಾವತಿಸಲು ಹಣ ಇಲ್ಲದಿದ್ದರೆ ಆನ್‌ಲೈನ್ ಮೂಲಕ ಹಣವನ್ನು ಕಟ್ಟುವ ಆಯ್ಕೆ ನೀಡಲಾಗಿದೆ. ಹಾಗಾದ್ರೆ ಟ್ರಾಫಿಕ್ ಫೈನ್ ಆನ್ಲೈನ್ನಲ್ಲಿ ಕಟ್ಟುವುದು ಹೇಗೆ?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನಿಮ್ಮ ಲ್ಯಾಪ್ ಟಾಪ್ ಅಥವಾ ಮೊಬೈಲ್ ಮೂಲಕ ಸರ್ಕಾರದ ಅಧಿಕೃತ www.echallan.parivahan.gov.in ವೆಬ್ ಸೈಟ್ ಗೆ ತೆರಳಿ. ವೆಬ್‌ಸೈಟ್ ತೆರೆದ ನಂತರ ಕಾಣಿಸುವ ‘ಚೆಕ್ ಆನ್‌ಲೈನ್ ಸೇವೆಗಳು'(Check Online Services) ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಲೈಸನ್ಸ್ ನಂಬರ್ ಅಥವಾ ಚಲನ್ ನಂಬರ್ ಅಥಾವ ವೆಹಿಕಲ್ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಬಳಸಿ ನೀವು ಚಲನ್ ನ್ನು ಹುಡುಕಾಡುವುದಕ್ಕೆ ಆಯ್ಕೆಯಿರುತ್ತದೆ. ಇದರಲ್ಲಿ ಯಾವುದೇ ವಿವರವನ್ನು ನೀವು ಆಯ್ಕೆ ಮಾಡಿಕೊಂಡು ಕ್ಯಾಪ್ಚಾ ಎಂಟರ್ ಮಾಡಿ ಮುಂದುವರಿಯಬಹುದು.
Realme Narzo 50i Prime: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಹೊಸ ಸ್ಮಾರ್ಟ್ಫೋನ್: ಇದರ ಬೆಲೆ ಕೇವಲ …
ನಂತರ ಚಲನ್ ವಿವರಗಳನ್ನು ಡಿಸ್ ಪ್ಲೇ ಆಗುತ್ತದೆ. ಕೆಲವೊಮ್ಮೆ ವೆಹಿಕಲ್ ನಂಬರ್ ಮತ್ತು ಲೈಸನ್ಸ್ ನಂಬರ್ ನಲ್ಲಿ ಸಪರೇಟ್ ಆಗಿ ಎರಡು ವಿವಿಧ ಚಲನ್ ಗಳನ್ನು ಕಾಣುವುದಕ್ಕೂ ಸಾಧ್ಯತೆಗಳಿರುತ್ತದೆ. ಒಂದು ವೇಳೆ ನಿಮ್ಮ ವೆಹಿಕಲ್ ವಿರುದ್ಧ ಪ್ರಕಟವಾಗಿರುವ ಎಲ್ಲಾ ಚಲನ್ಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ನೀವು ಬಯಸಿದ್ದೇ ಆದಲ್ಲಿ ಎರಡೂ ವಿಧಾನದಲ್ಲೂ ಕೂಡ ನೀವು ಹುಡುಕಾಟವನ್ನು ನಡೆಸಬೇಕಾಗುತ್ತದೆ. ಚಲನ್ ವಿವರಗಳು ಜನರೇಟ್ ಆದ ನಂತರ “ಪೇ ನೌ” ಆಯ್ಕೆಯನ್ನು ಹಿಟ್ ಮಾಡಿ ಆನ್ ಲೈನ್ ಪಾವತಿ ಮಾಡಿ.
ಇಲ್ಲಿ ನೀವು ಹಣ ಪಾವತಿಸಲು ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್, ಗೂಗಲ್ ಪೇ, ಯುಪಿಐ, ಪೇಟಿಎಂ ಇತ್ಯಾದಿ ಯಾವುದೇ ರೀತಿಯ ಪಾವತಿ ಗೇಟ್ ವೇಯನ್ನು ಬಳಸಿ ನೀವು ಪಾವತಿಯನ್ನು ಪೂರ್ಣಗೊಳಿಸಬಹುದು.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ