WhatsApp: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್: ಈಗ ಡಿಪಿ, ಲಾಸ್ಟ್​ ಸೀನ್ ಕೆಲವರಿಗೆ ಮಾತ್ರ ಕಾಣುವಂತೆ ಮಾಡಿ

WhatsApp New Feature: ವಾಟ್ಸ್​ಆ್ಯಪ್​ ಈಗ ಪ್ರೈವರಿಸಿಗೆ ಸಂಬಂಧಿಸಿದಂತೆ ವಿಶೇಷ ಅಪ್ಡೇಟ್ ತನ್ನ ಬಳಕೆದಾರರಿಗೆ ನೀಡಿದೆ. ಸದ್ಯ ನೀವು ನಿಮ್ಮ ಪ್ರೊಫೈಲ್ ಫೋಟೋವನ್ನು, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ಯಾರಿಗೆ ಬೇಕು ಅವರಿಗೆ ಮಾತ್ರ ಕಾಣುವಂತೆ ಮಾಡಬಹುದು.

WhatsApp: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್: ಈಗ ಡಿಪಿ, ಲಾಸ್ಟ್​ ಸೀನ್ ಕೆಲವರಿಗೆ ಮಾತ್ರ ಕಾಣುವಂತೆ ಮಾಡಿ
WhatsApp New Feature
Follow us
TV9 Web
| Updated By: Vinay Bhat

Updated on:Jun 18, 2022 | 10:06 AM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್​ (WhatsApp) ಇದೀಗ ಸದ್ದಿಲ್ಲದೆ ಹೊಸ ಅಪ್ಡೇಟ್ ಘೋಷಿಸಿದೆ. ಈ ವರ್ಷ ಒಂದರ ಹಿಂದೆ ಒಂದರಂತೆ ಅಚ್ಚರಿಯ ಆಯ್ಕೆಗಳನ್ನು ನೀಡುತ್ತಿರುವ ಕಂಪನಿ ಈಗ ಪ್ರೈವರಿಸಿಗೆ ಸಂಬಂಧಿಸಿದಂತೆ ವಿಶೇಷ ಅಪ್ಡೇಟ್ ತನ್ನ ಬಳಕೆದಾರರಿಗೆ ನೀಡಿದೆ. ಸದ್ಯ ನೀವು ನಿಮ್ಮ ಪ್ರೊಫೈಲ್ ಫೋಟೋವನ್ನು, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ಯಾರಿಗೆ ಬೇಕು ಅವರಿಗೆ ಮಾತ್ರ ಕಾಣುವಂತೆ ಮಾಡಬಹುದು. ಈ ಹಿಂದೆ ಇದರಲ್ಲಿ ನೋಬಡಿ (Nobody), ಮೈ ಕಾಂಟ್ಯಾಕ್ಟ್ಸ್ (My Contacts), ಎವರಿಒನ್ (Everyone) ಎಂಬ ಆಯ್ಕೆ ಮಾತ್ರ ನೀಡಲಾಗಿತ್ತು. ಇದೀಗ ಹೊಸ ಅಪ್ಡೇಟ್​ನಲ್ಲಿ ‘ಮೈ ಕಾಂಟ್ಯಾಕ್ಸ್ಟ್​​ ಎಕ್ಸೆಪ್ಟ್’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಈ ಮೂಲಕ ನಿಮಗೆ ಅಗತ್ಯವಿರುವವರಿಗೆ ಮಾತ್ರ ನಿಮ್ಮ ಡಿಪಿ, ಲಾಸ್ಟ್​​ ಸೀನ್ ಮತ್ತು ಎಬೌಟ್ ಆಯ್ಕೆಯನ್ನು ನೋಡುವಂತೆ ಮಾಡಬಹುದು. ಸೆಟ್ಟಿಂಗ್​​ಗ ಹೋಗಿ ಎಕೌಂಟ್-ಪ್ರೈವಸಿ ಮೂಲಕ ಈ ಆಯ್ಕೆಯನ್ನು ನೀವು ಗಮನಿಸಬಹುದು.

ವಾಟ್ಸ್​ಆ್ಯಪ್ ಈ ಹೊಸ ಆಯ್ಕೆಯನ್ನು ತನ್ನೆಲ್ಲ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಆಯ್ಕೆಯನ್ನು ಕಂಪನಿ ಪರಿಚಯಿಸಲಿದೆ. ಪ್ರಮುಖವಾಗಿ ಎಡಿಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದ್ದು, ನೂತನ ಆಯ್ಕೆಯನ್ನು ಪರಿಶೀಲಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ.

ಸ್ಮಾರ್ಟ್​​ಫೋನ್ ಪ್ರಿಯರ ಹುಚ್ಚು ಹಿಡಿಸಿದೆ Nothing Phone (1): ಫಸ್ಟ್​ ಲುಕ್ ರಿಲೀಸ್

ಇದನ್ನೂ ಓದಿ
Image
WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬಂತು ಅಚ್ಚರಿಯ ಆಯ್ಕೆ: ನೀವು ಗಮನಿಸಿದ್ರಾ?
Image
Galaxy S20FE 5G: ನೀವು ಸ್ಯಾಮ್​ಸಂಗ್ ಪ್ರಿಯರಾಗಿದ್ದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಮತ್ತೆ ಸಿಗಲ್ಲ
Image
Google: ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್​ನಲ್ಲಿ ಏನು ಸರ್ಚ್ ಮಾಡ್ತಾರೆ ಗೊತ್ತೇ?
Image
5G Smartphone: ಕೇವಲ 15,000 ರೂ. ಒಳಗೆ ಸಿಗುತ್ತಿರುವ 5G ಸ್ಮಾರ್ಟ್​​ಫೋನ್ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ

ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನನ್ನು ಪರೀಕ್ಷಿಸುತ್ತಿದೆ. ಪ್ರಸ್ತುತ, ವಾಟ್ಸ್​ಆ್ಯಪ್​​ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್‌ ಮಾಡಲು ಸಾಧ್ಯವಿಲ್ಲ. ಸದ್ಯ ಮುಂಬರುವ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ. ಎಲ್ಲಾ ವಾಟ್ಸ್​ಆ್ಯಪ್​​ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ.

ಇದರ ಜೊತೆಗೆ ಮಿಸ್ಡ್‌ ಕಾಲ್‌ಗಳಿಗಾಗಿ ಹೊಸ ಡು ನಾಟ್ ಡಿಸ್ಟರ್ಬ್ ಆಯ್ಕೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.  ಡು ನಾಟ್ ಡಿಸ್ಟರ್ಬ್ ಫೀಚರ್ಸ್‌ ಮೂಲಕ ನೀವು ಮಿಸ್‌ ಮಾಡಿಕೊಂಡ ವಾಟ್ಸ್​ಆ್ಯಪ್​​​ ಕಾಲ್‌ಗಳ ಬಗ್ಗೆ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ನೀವು ಕರೆ ತಪ್ಪಿಸಿಕೊಳ್ಳುವುದಕ್ಕೆ ನಿಖರವಾದ ಕಾರಣ ಏನು ಅನ್ನೊದನ್ನ ತಿಳಿಸಲಿದೆ. ಆದರೆ ಈ ಮಾಹಿತಿಯು ಕರೆ ಸ್ವೀಕರಿಸುವವರ ಡಿವೈಸ್‌ಗೆ ಮಾತ್ರ ಸೀಮಿತವಾಗಿರುವುದರಿಂದ ಕರೆ ಮಾಡುವವರಿಗೆ ಯಾವುದೇ ಸೂಚನೆ ನೀಡಲಾಗುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಈ ಫೀಚರ್ಸ್‌ iOS 15 ನಲ್ಲಿ ಚಾಲನೆಯಲ್ಲಿರುವ ವಾಟ್ಸ್​ಆ್ಯಪ್​​​ ಬೀಟಾದಲ್ಲಿ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್‌ ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಈ ಆಯ್ಕೆ ಯಾವಾಗ ಬರಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ತಿಳಿಸಿಲ್ಲ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 am, Sat, 18 June 22