WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬಂತು ಅಚ್ಚರಿಯ ಆಯ್ಕೆ: ನೀವು ಗಮನಿಸಿದ್ರಾ?

ಈ ಹೊಸ ಆಯ್ಕೆಯನ್ನು ಬಳಸಿ ನಿರ್ದಿಷ್ಟ ಜನರನ್ನು ನೀವು ಮ್ಯೂಟ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಇಲ್ಲವೇ ವಾಟ್ಸ್​ಆ್ಯಪ್​​ ಗ್ರೂಪ್‌ ಕಾಲ್‌ನಲ್ಲಿ ಮ್ಯೂಟ್‌ ಮಾಡಲು ಮರೆತವರಿಗೆ ಸಂದೇಶವನ್ನು ಕಳುಹಿಸುವ ಆಯ್ಕೆ ಕೂಡ ನೀಡಲಾಗಿದೆ.

WhatsApp: ವಾಟ್ಸ್​ಆ್ಯಪ್ ಗ್ರೂಪ್ ಕಾಲ್​ನಲ್ಲಿ ಬಂತು ಅಚ್ಚರಿಯ ಆಯ್ಕೆ: ನೀವು ಗಮನಿಸಿದ್ರಾ?
WhatsApp
Follow us
| Updated By: Vinay Bhat

Updated on:Jun 17, 2022 | 2:50 PM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಈಗಾಗಲೇ ಹೊಸ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಿದೆ. ಕಾಲ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಬರುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಈಗ ಸಾಲು ಸಾಲು ಹೊಸ ಆಯ್ಕೆಗಳು ಬರಲು ಪರೀಕ್ಷಾ ಹಂತದಲ್ಲಿದೆ. ಕೆಲವು ದಿನಗಳ ಹಿಂದೆಯಷ್ಟೆ ವಾಟ್ಸ್‌ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ, ಚಾಟ್ ಅನ್ನು ಮರಳಿಸುವ ಅನ್​ಡು ಆಯ್ಕೆ ಸೇರಿದಂತೆ ಮಿಸ್ಡ್‌ ಕಾಲ್‌ಗಳಿಗಾಗಿ ಹೊಸ ಡು ನಾಟ್ ಡಿಸ್ಟರ್ಬ್ (Do Not Disturb) ಆಯ್ಕೆ ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಸದ್ಯ ಇದೀಗ ವಾಟ್ಸ್​ಆ್ಯಪ್​​ ಗ್ರೂಪ್‌ ಕಾಲ್‌ ಹೋಸ್ಟ್‌ ಮಾಡುವವರಿಗಾಗಿ ಹೊಸ ಫೀಚರ್ಸ್‌ ಪರಿಚಯಿಸಿದೆ. ಇದರಿಂದ ಗ್ರೂಪ್‌ ಕಾಲ್‌ನಲ್ಲಿ ಕಿರಿಕಿರಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.

ಈ ಹೊಸ ಆಯ್ಕೆಯನ್ನು ಬಳಸಿ ನಿರ್ದಿಷ್ಟ ಜನರನ್ನು ನೀವು ಮ್ಯೂಟ್ ಮಾಡುವುದಕ್ಕೆ ಸಾಧ್ಯವಾಗಲಿದೆ. ಇಲ್ಲವೇ ಗ್ರೂಪ್‌ ಕಾಲ್‌ನಲ್ಲಿ ಮ್ಯೂಟ್‌ ಮಾಡಲು ಮರೆತವರಿಗೆ ಸಂದೇಶವನ್ನು ಕಳುಹಿಸುವ ಆಯ್ಕೆ ಕೂಡ ನೀಡಲಾಗಿದೆ. ಈ ಹಿಂದೆ ಕೇವಲ 8 ಮಂದಿಗೆ ಮಾತ್ರ ಗ್ರೂಪ್‌ಕಾಲ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ಗ್ರೂಪ್‌ ಕಾಲ್‌ನಲ್ಲಿ 32 ಸದಸ್ಯರನ್ನು ಸೇರಿಸುವ ಅವಕಾಶವನ್ನು ನೀಡಿದೆ.

Galaxy S20FE 5G: ನೀವು ಸ್ಯಾಮ್​ಸಂಗ್ ಪ್ರಿಯರಾಗಿದ್ದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಮತ್ತೆ ಸಿಗಲ್ಲ

ಇದನ್ನೂ ಓದಿ
Image
Galaxy S20FE 5G: ನೀವು ಸ್ಯಾಮ್​ಸಂಗ್ ಪ್ರಿಯರಾಗಿದ್ದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಮತ್ತೆ ಸಿಗಲ್ಲ
Image
5G Smartphone: ಕೇವಲ 15,000 ರೂ. ಒಳಗೆ ಸಿಗುತ್ತಿರುವ 5G ಸ್ಮಾರ್ಟ್​​ಫೋನ್ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
Image
Jio Recharge: ಇಲ್ಲಿದೆ ನೋಡಿ ಜಿಯೋ ಟೆಲಿಕಾಂನ ಅತ್ಯಂತ ಬೇಡಿಕೆಯ ಬೆಸ್ಟ್ ಪ್ಲಾನ್
Image
Xiaomi 11X Pro: 108MP ಕ್ಯಾಮೆರಾದ ಈ ಸ್ಮಾರ್ಟ್​​ಫೋನ್ ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್: ಮಿಸ್ ಮಾಡ್ಬೇಡಿ

ಇನ್ನು ವಾಟ್ಸ್​ಆ್ಯಪ್​​ ಗ್ರೂಪ್ ಅಡ್ಮಿನ್‌ಗಳು ಲಿಂಕ್ ಮೂಲಕ ಗ್ರೂಪ್‌ಗೆ ಸೇರುವ ಜನರ ವಿನಂತಿಗಳನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ವಾಟ್ಸ್​ಆ್ಯಪ್​​ ಅನುಮತಿಸಲು ನೀಡುತ್ತಿದೆ. ಈ ಮೂಲಕ ಗ್ರೂಪ್ ಲಿಂಕ್‌ ಅನ್ನು ಬಳಸಿ ಯಾರಾದರೂ ಆ ಗ್ರೂಪ್ ಸದಸ್ಯರಾಗಬಹುದಾದ ಸಮಸ್ಯೆಯನ್ನು ಸರಿಪಡಿಸಲು ವಾಟ್ಸ್​ಆ್ಯಪ್ ​​ಮುಂದಾಗಿದೆ. ಇತ್ತೀಚಿನ ವಾಟ್ಸ್​ಆ್ಯಪ್​​ ಬೀಟಾ ಅಪ್‌ಡೇಟ್‌ ಹೊಸದಾಗಿ ‘ಅಡ್ಮಿನ್ ಅಪ್ರೂವಲ್’ ವೈಶಿಷ್ಟ್ಯವನ್ನು ಸಹ ಒಳಗೊಂಡಿದ್ದು, ಇದನ್ನು ಸಕ್ರಿಯಗೊಳಿಸಿದಾಗ, ಗ್ರೂಪ್ ನಿರ್ವಾಹಕರು ಲಿಂಕ್ ಮೂಲಕ ಗ್ರೂಪ್ ಅನ್ನು ಸೇರಲು ಬಯಸುವ ಜನರ ವಿನಂತಿಗಳನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಅನುಮತಿಸುತ್ತದೆ ಎಂದು WABetaInfo ವರದಿ ಮಾಡಿದೆ.

ಡು ನಾಟ್ ಡಿಸ್ಟರ್ಬ್ ಆಯ್ಕೆ:

ಡು ನಾಟ್ ಡಿಸ್ಟರ್ಬ್ ಫೀಚರ್ಸ್‌ ಮೂಲಕ ನೀವು ಮಿಸ್‌ ಮಾಡಿಕೊಂಡ ವಾಟ್ಸ್​ಆ್ಯಪ್​​​ ಕಾಲ್‌ಗಳ ಬಗ್ಗೆ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ನೀವು ಕರೆ ತಪ್ಪಿಸಿಕೊಳ್ಳುವುದಕ್ಕೆ ನಿಖರವಾದ ಕಾರಣ ಏನು ಅನ್ನೊದನ್ನ ತಿಳಿಸಲಿದೆ. ಆದರೆ ಈ ಮಾಹಿತಿಯು ಕರೆ ಸ್ವೀಕರಿಸುವವರ ಡಿವೈಸ್‌ಗೆ ಮಾತ್ರ ಸೀಮಿತವಾಗಿರುವುದರಿಂದ ಕರೆ ಮಾಡುವವರಿಗೆ ಯಾವುದೇ ಸೂಚನೆ ನೀಡಲಾಗುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಈ ಫೀಚರ್ಸ್‌ iOS 15 ನಲ್ಲಿ ಚಾಲನೆಯಲ್ಲಿರುವ ವಾಟ್ಸ್​ಆ್ಯಪ್​​​ ಬೀಟಾದಲ್ಲಿ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್‌ ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಈ ಆಯ್ಕೆ ಯಾವಾಗ ಬರಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ತಿಳಿಸಿಲ್ಲ.

ಡಬಲ್ ವೆರಿಫಿಕೇಶನ್ ಕೋಡ್ ಆಯ್ಕೆ:

ವಾಟ್ಸ್​ಆ್ಯಪ್​​ ಅಕೌಂಟ್‌ಗೆ ಲಾಗ್‌ ಇನ್‌ ಮಾಡುವುದಕ್ಕೆ ಹೆಚ್ಚುವರಿ ಭದ್ರತೆಯ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಅಂದರೆ ವಾಟ್ಸ್​ಆ್ಯಪ್​​​ ಡಬಲ್ ವೆರಿಫಿಕೇಶನ್ ಕೋಡ್ ಅನ್ನು ಕೇಳಲಿದೆ. SMS ಮೂಲಕ ಕಳುಹಿಸಲಾದ ವೆರಿಫಿಕೇಶನ್‌ ಕೋಡ್‌ ಹೊರತುಪಡಿಸಿ ನಿಮಗೆ ಹೆಚ್ಚುವರಿ ಪರಿಶೀಲನೆ ಕೋಡ್ ಕೇಳಲಿದೆ. ಇದರಿಂದ ನಿಮ್ಮ ವಾಟ್ಸ್​ಆ್ಯಪ್​​​ ಅಕೌಂಟ್‌ ಫೋನ್‌ ನಂಬರ್‌ ಅನ್ನು ಈಗಾಗಲೇ ಮತ್ತೊಂದು ಫೋನ್‌ನಲ್ಲಿ ಬಳಸುತ್ತಿದ್ದರೆ, ನಿಮ್ಮ ಖಾತೆಯು ನಿಮ್ಮ ನಿಯಂತ್ರಣದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡಲಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Fri, 17 June 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ