WhatsApp: ಡು ನಾಟ್‌ ಡಿಸ್ಟರ್ಬ್‌ ಆಯ್ಕೆ ಕಂಡು ಶಾಕ್ ಆದ ಬಳಕೆದಾರ: ಏನಿದೆ ಇದರಲ್ಲಿ?

Do Not Disturb Features: ವಾಟ್ಸ್​ಆ್ಯಪ್ ಇದೀಗ ಮಿಸ್ಡ್‌ ಕಾಲ್‌ಗಳಿಗಾಗಿ ಹೊಸ ಡೋ ನಾಟ್ ಡಿಸ್ಟರ್ಬ್ (Do Not Disturb) ಆಯ್ಕೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ಆಯ್ಕೆ ಮೂಲಕ ನೀವು ಮಿಸ್‌ ಮಾಡಿಕೊಂಡ ವಾಟ್ಸ್​ಆ್ಯಪ್​​​ ಕಾಲ್‌ಗಳ ಬಗ್ಗೆ ತಿಳಿಯಬಹುದಾಗಿದೆ.

WhatsApp: ಡು ನಾಟ್‌ ಡಿಸ್ಟರ್ಬ್‌ ಆಯ್ಕೆ ಕಂಡು ಶಾಕ್ ಆದ ಬಳಕೆದಾರ: ಏನಿದೆ ಇದರಲ್ಲಿ?
WhatsApp Do Not Disturb
Follow us
TV9 Web
| Updated By: Vinay Bhat

Updated on:Jun 14, 2022 | 3:07 PM

ಇಂದು ವಾಟ್ಸ್​ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಗಗನಕ್ಕೇರಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಕಾಲ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಬರುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಈಗ ಸಾಲು ಸಾಲು ಹೊಸ ಆಯ್ಕೆಗಳು ಬರಲು ಪರೀಕ್ಷಾ ಹಂತದಲ್ಲಿದೆ. ಕೆಲವು ದಿನಗಳ ಹಿಂದೆಯಷ್ಟೆ ವಾಟ್ಸ್‌ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ (Edit) ಮಾಡುವ ಆಯ್ಕೆ ಗ್ರಾಹಕರಿಗೆ ಒದಗಿಸುವುದಾಗಿ ಹೇಳಿತ್ತು. ಅಲ್ಲದೆ ಡಿಲೀಟ್ ಆದ ಚಾಟ್ ಅನ್ನು ಮರಳಿಸುವ ಅನ್​ಡು ಆಯ್ಕೆ ನೀಡುವುದಾಗಿ ಹೇಳಿತ್ತು. ಇದೀಗ ಮಿಸ್ಡ್‌ ಕಾಲ್‌ಗಳಿಗಾಗಿ ಹೊಸ ಡು ನಾಟ್ ಡಿಸ್ಟರ್ಬ್ (Do Not Disturb) ಆಯ್ಕೆಯನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ವಾಟ್ಸ್​ಆ್ಯಪ್​​​ ಹೊಸ iOS 15ನಲ್ಲಿ ಈ API ಅನ್ನು ಬೆಂಬಲಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಡು ನಾಟ್ ಡಿಸ್ಟರ್ಬ್ ಫೀಚರ್ಸ್‌ ಮೂಲಕ ನೀವು ಮಿಸ್‌ ಮಾಡಿಕೊಂಡ ವಾಟ್ಸ್​ಆ್ಯಪ್​​​ ಕಾಲ್‌ಗಳ ಬಗ್ಗೆ ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ನೀವು ಕರೆ ತಪ್ಪಿಸಿಕೊಳ್ಳುವುದಕ್ಕೆ ನಿಖರವಾದ ಕಾರಣ ಏನು ಅನ್ನೊದನ್ನ ತಿಳಿಸಲಿದೆ. ಆದರೆ ಈ ಮಾಹಿತಿಯು ಕರೆ ಸ್ವೀಕರಿಸುವವರ ಡಿವೈಸ್‌ಗೆ ಮಾತ್ರ ಸೀಮಿತವಾಗಿರುವುದರಿಂದ ಕರೆ ಮಾಡುವವರಿಗೆ ಯಾವುದೇ ಸೂಚನೆ ನೀಡಲಾಗುವುದಿಲ್ಲ ಎಂಬುದು ಗಮನಿಸಬೇಕಾದ ವಿಚಾರವಾಗಿದೆ. ಈ ಫೀಚರ್ಸ್‌ iOS 15 ನಲ್ಲಿ ಚಾಲನೆಯಲ್ಲಿರುವ ವಾಟ್ಸ್​ಆ್ಯಪ್​​​ ಬೀಟಾದಲ್ಲಿ ಮಾತ್ರ ಲಭ್ಯವಿದೆ. ಆಂಡ್ರಾಯ್ಡ್‌ ಮತ್ತು ಡೆಸ್ಕ್‌ಟಾಪ್ ಆವೃತ್ತಿಯಲ್ಲಿ ಈ ಆಯ್ಕೆ ಯಾವಾಗ ಬರಲಿದೆ ಎಂಬ ಬಗ್ಗೆ ಕಂಪನಿ ಇನ್ನೂ ತಿಳಿಸಿಲ್ಲ.

Xiaomi: ಶವೋಮಿ ಸ್ಮಾರ್ಟ್​​ಫೋನ್ ಬಳಸುತ್ತಿರುವವರು ತಪ್ಪದೇ ಈ ಸ್ಟೋರಿ ಓದಿ: ಬ್ಯಾಟರಿ ಬಗ್ಗೆ ಹೊಸ ಘೋಷಣೆ

ಇದನ್ನೂ ಓದಿ
Image
Moto G82 5G: ಹೊಸ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್: ಇಂದು ಮಾರಾಟ ಶುರುವಾಗಿದೆ ಮೋಟೋ G82 5G
Image
Best Smartphone: 20,000 ರೂ. ಒಳಗೆ ಮಾರಾಟ ಆಗುತ್ತಿರುವ ಅತ್ಯುತ್ತಮ ಸ್ಮಾರ್ಟ್​​ಫೋನ್​ಗಳು ಇಲ್ಲಿವೆ ನೋಡಿ
Image
WhatsApp: ನಿಮ್ಮನ್ನ ವಾಟ್ಸ್​ಆ್ಯಪ್​ನಲ್ಲಿ ಯಾರೆಲ್ಲ ಬ್ಲಾಕ್ ಮಾಡಿದ್ದಾರೆ ತಿಳಿಯಬೇಕೆ?: ಇಲ್ಲಿದೆ ಸಿಂಪಲ್ ಟಿಪ್ಸ್
Image
Bharti Airtel: ಏರ್ಟೆಲ್ ಪರಿಚಯಿಸಿರುವ ಹೊಸ ಫೀಚರ್ ಕಂಡು ಬಳಕೆದಾರರು ಫುಲ್ ಖುಷ್

ಡಬಲ್ ವೆರಿಫಿಕೇಶನ್ ಕೋಡ್ ಆಯ್ಕೆ:

ವಾಟ್ಸ್​ಆ್ಯಪ್​​ ಅಕೌಂಟ್‌ಗೆ ಲಾಗ್‌ ಇನ್‌ ಮಾಡುವುದಕ್ಕೆ ಹೆಚ್ಚುವರಿ ಭದ್ರತೆಯ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಅಂದರೆ ವಾಟ್ಸ್​ಆ್ಯಪ್​​​ ಡಬಲ್ ವೆರಿಫಿಕೇಶನ್ ಕೋಡ್ ಅನ್ನು ಕೇಳಲಿದೆ. SMS ಮೂಲಕ ಕಳುಹಿಸಲಾದ ವೆರಿಫಿಕೇಶನ್‌ ಕೋಡ್‌ ಹೊರತುಪಡಿಸಿ ನಿಮಗೆ ಹೆಚ್ಚುವರಿ ಪರಿಶೀಲನೆ ಕೋಡ್ ಕೇಳಲಿದೆ. ಇದರಿಂದ ನಿಮ್ಮ ವಾಟ್ಸ್​ಆ್ಯಪ್​​​ ಅಕೌಂಟ್‌ ಫೋನ್‌ ನಂಬರ್‌ ಅನ್ನು ಈಗಾಗಲೇ ಮತ್ತೊಂದು ಫೋನ್‌ನಲ್ಲಿ ಬಳಸುತ್ತಿದ್ದರೆ, ನಿಮ್ಮ ಖಾತೆಯು ನಿಮ್ಮ ನಿಯಂತ್ರಣದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಇದು ಸಹಾಯ ಮಾಡಲಿದೆ.

ಹೆಚ್ಚುವರಿ ಭದ್ರತೆಗಾಗಿ ನೀವು ಕೋಡ್ ಕಳುಹಿಸುವ ಮೊದಲು ಟೈಮರ್ ಮುಗಿಯುವವರೆಗೆ ಕಾಯಬೇಕಾಗುತ್ತದೆ. ಆದರೆ ನೀವು ಕೋಡ್ ಅನ್ನು ಸ್ವೀಕರಿಸಿದಾಗ, ಅದನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಈ ಹೊಸ ವೆರಿಫಿಕೇಶನ್‌ ಫೀಚರ್ಸ್‌ನಿಂದಾಗಿ ವಾಟ್ಸ್​ಆ್ಯಪ್​​​ ಬಳಕೆದಾರರ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯಲು ಸಾಧ್ಯವಾಗಲಿದೆ.

ಇದರ ಜೊತೆಗೆ ವಾಟ್ಸ್​ಆ್ಯಪ್​ನಲ್ಲಿ ನೀವು ಮೆಸೇಜ್ ಒಂದನ್ನು ಡಿಲೀಟ್ ಮಾಡಿದರೆ ಅದನ್ನು ಅನ್​ಡು ಮಾಡುವ ಆಯ್ಕೆ ಸಿಗಲಿದೆ. ಹೆಚ್ಚಿನ ಬಾರಿ ಬಳಕೆದಾರರು ಮೆಸೇಜ್ ಡಿಲೀಟ್ ಮಾಡಲು ಹೊರಟಾಗ ಡಿಲೀಟ್ ಫಾರ್ ಎವರಿವರ್ ಬದಲು ಡಿಲೀಟ್ ಫಾರ್ ಮಿ ಒತ್ತಿ ಬಿಡುತ್ತಾರೆ. ವಾಟ್ಸ್​ಆ್ಯಪ್​ನ ಈ ಹೊಸ ಅನ್​ಡು ಬಟನ್ ಇದಕ್ಕೆ ಸಹಕಾರಿ ಆಗಲಿದೆ. ಸದ್ಯದಲ್ಲೇ ಈ ಎಲ್ಲ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Tue, 14 June 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ