AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ನಿಮ್ಮನ್ನ ವಾಟ್ಸ್​ಆ್ಯಪ್​ನಲ್ಲಿ ಯಾರೆಲ್ಲ ಬ್ಲಾಕ್ ಮಾಡಿದ್ದಾರೆ ತಿಳಿಯಬೇಕೆ?: ಇಲ್ಲಿದೆ ಸಿಂಪಲ್ ಟಿಪ್ಸ್

Tech Tips: ಕೆಲವೊಮ್ಮೆ ನಾವು ಇನ್ನೊಬ್ಬರನ್ನು ಅಥವಾ ನಮ್ಮನ್ನು ಮತ್ತೊಬ್ಬರು ವಾಟ್ಸ್​ಆ್ಯಪ್​​ನಲ್ಲಿ ಬ್ಲಾಕ್ (WhatsApp Block) ಮಾಡುವ ಸಂದರ್ಭಗಳು ಬರುತ್ತವೆ. ಹೀಗೆ ನಿಮ್ಮನ್ನು ಬೇರೆಯವರು ಬ್ಲಾಕ್ ಮಾಡಿದ್ದರೆ?, ಅದನ್ನು ಹೇಗೆ ತಿಳಿಯುವುದು ಎಂಬುದು ಅನೇಕರಿಗೆ ತಿಳಿದಿಲ್ಲ.

WhatsApp: ನಿಮ್ಮನ್ನ ವಾಟ್ಸ್​ಆ್ಯಪ್​ನಲ್ಲಿ ಯಾರೆಲ್ಲ ಬ್ಲಾಕ್ ಮಾಡಿದ್ದಾರೆ ತಿಳಿಯಬೇಕೆ?: ಇಲ್ಲಿದೆ ಸಿಂಪಲ್ ಟಿಪ್ಸ್
WhatsApp Block
TV9 Web
| Edited By: |

Updated on: Jun 13, 2022 | 3:50 PM

Share

ಇಂದು ವಾಟ್ಸ್​ಆ್ಯಪ್ (WhatsApp) ಮೆಸೆಂಜರ್ ಬಳಕೆ ಮಾಡುವವರ ಸಂಖ್ಯೆ ಗಗನಕ್ಕೇರಿದೆ. ಇದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಕಾಲ ಕಾಲಕ್ಕೆ ತಕ್ಕಂತೆ ಹೊಸತನಗಳನ್ನು ಅಳವಡಿಸಿಕೊಳ್ಳುತ್ತಾ ಜಾಗತಿಕ ಸಮುದಾಯವನ್ನು ತನ್ನ ತೆಕ್ಕೆಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡಿರುವ ವಾಟ್ಸ್​ಆ್ಯಪ್ ಆಧುನಿಕ ಸೌಲಭ್ಯಗಳನ್ನು ಪರಿಚಯಿಸುವ ಜತೆಗೆ ತನ್ನ ಬಳಕೆದಾರರ ಗೌಪತ್ಯೆ ಕಾಪಾಡಿಕೊಳ್ಳುವುದಕ್ಕೂ ಹೆಚ್ಚಿನ ಮಹತ್ವ ನೀಡುವುದಾಗಿ ಮೊದಲಿನಿಂದಲೂ ಹೇಳಿಕೊಂಡು ಬಂದಿದೆ.  ಆದರೂ ಕೆಲವೊಮ್ಮೆ ನಾವು ಇನ್ನೊಬ್ಬರನ್ನು ಅಥವಾ ನಮ್ಮನ್ನು ಮತ್ತೊಬ್ಬರು ವಾಟ್ಸ್​ಆ್ಯಪ್​​ನಲ್ಲಿ ಬ್ಲಾಕ್ (WhatsApp Block) ಮಾಡುವ ಸಂದರ್ಭಗಳು ಬರುತ್ತವೆ. ಹೀಗೆ ನಿಮ್ಮನ್ನು ಬೇರೆಯವರು ಬ್ಲಾಕ್ ಮಾಡಿದ್ದರೆ?, ಅದನ್ನು ಹೇಗೆ ತಿಳಿಯುವುದು ಎಂಬುದು ಅನೇಕರಿಗೆ ತಿಳಿದಿಲ್ಲ. (Who Blocked Me on Whatsapp) ಈ ಗೊಂದಲಕ್ಕೆ ಇಲ್ಲಿದೆ ಉತ್ತರ.

ಸಾಧಾರಣವಾಗಿ ಯಾರಾದರೂ ನಿಮ್ಮನ್ನು ಬ್ಲಾಕ್​ ಮಾಡಿದ್ದರೆ ನಿಮಗೆ ಅವರ ಫೋಟೋ, ಸ್ಟೇಟಸ್ ಏನೂ ಕಾಣುವುದಿಲ್ಲ. ಹಾಗಂತ ಫೋಟೋ ಕಂಡಿಲ್ಲವೆಂದ ಮಾತ್ರಕ್ಕೆ, ಸ್ಟೇಟಸ್​ ತೋರಿಲ್ಲವೆಂದ ಮಾತ್ರಕ್ಕೆ ಬ್ಲಾಕ್ ಆಗಿದ್ದೀರೆಂದು ಭಾವಿಸಲಾಗುವುದಿಲ್ಲ, ಏಕೆಂದರೆ, ಎಷ್ಟೋ ಜನ ವಾಟ್ಸ್​ಆ್ಯಪ್​ನಲ್ಲಿ ತಮ್ಮ ಫೋಟೋ ಡಿಲೀಟ್ ಮಾಡಿರುತ್ತಾರೆ, ಸ್ಟೇಟಸ್ ಹಾಕುವ ಆಯ್ಕೆಯನ್ನು ಬಳಸುವುದೇ ಇಲ್ಲ.

Bharti Airtel: ಏರ್ಟೆಲ್ ಪರಿಚಯಿಸಿರುವ ಹೊಸ ಫೀಚರ್ ಕಂಡು ಬಳಕೆದಾರರು ಫುಲ್ ಖುಷ್

ಇದನ್ನೂ ಓದಿ
Image
ಸತ್ತ ನಂತರ ನಿಮ್ಮ ಸೋಷಿಯಲ್ ಮೀಡಿಯಾ ಏನಾಗುತ್ತದೆ ಗೊತ್ತೇ?: ಇಲ್ಲಿದೆ ನೋಡಿ ಮಾಹಿತಿ
Image
Redmi TV Carnival: ಇದಕ್ಕಿಂತ ಉತ್ತಮ ಆಫರ್ ಬರಲ್ಲ: ರೆಡ್ಮಿ ಸ್ಮಾರ್ಟ್ ಟಿವಿಗಳಿಗೆ ಬಂಪರ್ ಡಿಸ್ಕೌಂಟ್
Image
Tecno Pova 3: ಭಾರತಕ್ಕೆ ಬರುತ್ತಿದೆ ಬರೋಬ್ಬರಿ 7,000mAh ಬ್ಯಾಟರಿಯ ಸ್ಮಾರ್ಟ್​​ಫೋನ್: ಬೆಲೆ ಕೇವಲ …
Image
Google Maps: ಗೂಗಲ್ ಮ್ಯಾಪ್​ನಲ್ಲಿ ಬಂತು ಊಹಿಸಲಾಗದ ಫೀಚರ್: ಈಗಲೇ ಚೆಕ್ ಮಾಡಿ

ವಾಟ್ಸ್​ಆ್ಯಪ್​​ ಚಾಟ್ ವಿಂಡೋದಲ್ಲಿ ನಮಗೆ ಬೇಕಾದವರ ಲಾಸ್ಟ್ ಸೀನ್ ಅಥವಾ ಆನ್​ಲೈನ್ ಸ್ಟೇಟಸ್ ಪರಿಶೀಲಿಸುವುದರ ಮೂಲಕ ಅವರು ನಮ್ಮನ್ನು ಬ್ಲಾಕ್ ಮಾಡಿದ್ದನ್ನು ತಿಳಿಯಬಹುದು. ಆದರೆ, ಅವರು ತಮ್ಮ ಲಾಸ್ಟ್ ಸೀನ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಈ ವಿಧಾನ ಕೆಲಸಕ್ಕೆ ಬರಲಾರದು. ಅಥವಾ ಒಂದೊಮ್ಮೆ ನಿಮ್ಮ ಗೆಳೆಯರೊಬ್ಬರು ನಿಮ್ಮನ್ನು ವಾಟ್ಸ್​ಆ್ಯಪ್​ನಲ್ಲಿ ಬ್ಲಾಕ್ ಮಾಡಿದ್ದರೆ ಅವರ ಪ್ರೊಫೈಲ್ ಫೋಟೋ ನಿಮಗೆ ಕಾಣಿಸುವುದು ನಿಂತು ಹೋಗುತ್ತದೆ. ಆದರೂ ಆ ಕಡೆಯವರು ನಿಮ್ಮನ್ನು ಬ್ಲಾಕ್ ಮಾಡಿದ ಕೆಲ ಸಂದರ್ಭಗಳಲ್ಲಿ ಅವರ ಪ್ರೊಫೈಲ್ ಫೋಟೋ ನಿಮಗೆ ಕಾಣಿಸುತ್ತಿರಬಹುದು. ಆದರೆ ಅವರು ತಮ್ಮ ಪ್ರೊಫೈಲ್ ಫೋಟೋ ಅಪ್ಡೇಟ್ ಮಾಡಿದಾಗ ಅದು ನಿಮಗೆ ಕಾಣಿಸಲಾರದು.

ಸುಲಭ ವಿಧಾನ ಎಂದರೆ ವಾಟ್ಸ್​ಆ್ಯಪ್​​ ಗ್ರೂಪ್ ಮಾಡಿ ಚೆಕ್ ಮಾಡುವುದು. ಇದಕ್ಕಾಗಿ ನೀವು ವಾಟ್ಸ್​ಆ್ಯಪ್​​ನಲ್ಲಿ ಹೊಸ ಗ್ರೂಪ್ ವೊಂದನ್ನು ತೆರೆಯಬೇಕು. ನಂತರ ಹೊಸ ಹೆಸರು ನಮೂದಿಸಿದ ಮೇಲೆ ನೆಕ್ಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ಹೊಸ ಸದಸ್ಯರನ್ನು ಸೇರಿಸುವ ಅವಕಾಶ ಇರುತ್ತದೆ. ಇಲ್ಲಿ ನಿಮ್ಮನ್ನು ಬ್ಲಾಕ್ ಮಾಡದವರ ಹೆಸರನ್ನು ಕಂಡುಹಿಡಿದುಕೊಳ್ಳಬಹುದು. ಪ್ಲಸ್ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಅವರ ನಂಬರನ್ನು ಸಹ ಸೇರಿಸಿಕೊಳ್ಖಬಹುದು. ಹಾಗೆ ನೀವು ಆಯ್ಕೆ ಮಾಡಿದ ವ್ಯಕ್ತಿ ಗ್ರೂಪ್ ಸದಸ್ಯನಾಗುತ್ತಾನೆ.  ನೀವು ತೆಗೆದುಕೊಂಡ ನಂಬರ್ ಮೇಲೆ ಮಾಡಿ ಕ್ರೀಯೆಟ್ ಅಂತ ಹೇಳಿದರೆ ಹೊಸ ಗ್ರೂಪ್ ಆರಂಭವಾಗುತ್ತದೆ. ಕ್ರೀಯೆಟ್ ಮಾಡಿದ ಗ್ರೂಪ್​ಗೆ ನೀವು ತೆಗೆದುಕೊಂಡ ಸೇರದಿದ್ದರೆ ಅವರು ನಿಮ್ಮನ್ನು ಬ್ಲಾಕ್ ಲಿಸ್ಟ್ ನಲ್ಲಿ ಇಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.

ನಿಮ್ಮನ್ನು ಬ್ಲಾಕ್ ಮಾಡಿದವರಿಗೆ ನೀವು ವಾಟ್ಸ್​ಆ್ಯಪ್​​ ಕಾಲ್ ಮಾಡಲು ಪ್ರಯತ್ನಿಸಿದಾಗ ಕಾಲ್ ಕನೆಕ್ಟ್ ಆಗುವುದಿಲ್ಲ. ಕಾಲ್ ಕನೆಕ್ಟ್ ಆಗುತ್ತಿದೆ ಎಂದು ವಾಟ್ಸ್​ಆ್ಯಪ್​​ ತೋರಿಸಿದರೂ ನಿಜವಾಗಿ ಹಾಗೆ ಆಗುತ್ತಿರುವುದಿಲ್ಲ. ಆದರೆ, ಆ ಕಡೆಯವರು ತಮ್ಮ ಇಂಟರ್ನೆಟ್ ಸಂಪರ್ಕ ಬಂದ್ ಮಾಡಿದ್ದರೂ ಹೀಗೇ ಆಗುತ್ತದೆ. ವಾಟ್ಸ್​ಆ್ಯಪ್​​ನಲ್ಲಿ ನಾವು ಕಳುಹಿಸಿದ ಮೆಸೇಜ್ ಆ ಕಡೆಯವರಿಗೆ ತಲುಪಿದಾಗ ಎರಡು ಟಿಕ್ ಮಾರ್ಕ್ ಕಾಣಿಸುತ್ತವೆ. ಆದರೆ ಒಂದೊಮ್ಮೆ ಆ ಕಡೆಯವರು ನಿಮ್ಮನ್ನು ಬ್ಲಾಕ್ ಮಾಡಿದ್ದಲ್ಲಿ ಒಂದು ಟಿಕ್ ಮಾರ್ಕ್ ಮಾತ್ರ ಕಾಣಿಸುತ್ತದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ನಾಪತ್ತೆಯಾದ ಬಾಲಕಿಯ ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ ಜಿ. ಪರಮೇಶ್ವರ್!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ದೇವರಿಗೆ ಕೈ ಮುಗಿದು, ಕುಂಕುಮ ಹಚ್ಚಿಕೊಂಡು ಹುಂಡಿ ಹಣ ಕದ್ದ ಕಳ್ಳ!
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆ