AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tecno Pova 3: ಭಾರತಕ್ಕೆ ಬರುತ್ತಿದೆ ಬರೋಬ್ಬರಿ 7,000mAh ಬ್ಯಾಟರಿಯ ಸ್ಮಾರ್ಟ್​​ಫೋನ್: ಬೆಲೆ ಕೇವಲ …

7000mAh Battery Smartphone: ಇದೀಗ ಭಾರತದಲ್ಲಿ ತನ್ನ ವಿಶೇಷವಾದ ಫೋನೊಂದನ್ನು ಅನಾವರಣ ಮಾಡಲು ಸಜ್ಜಾಗಿದೆ. ಅದುವೆ ಟೆಕ್ನೋ ಪೊವಾ 3 (Tecno Pova 3) ಸ್ಮಾರ್ಟ್‌ಫೋನ್‌. ಈ ಸ್ಮಾರ್ಟ್‌ಫೋನ್ ವಿಶೇಷತೆ ಕುರಿತು ಅಮೆಜಾನ್​​ನಲ್ಲಿ ಟೀಸರ್‌ ಬಿಡುಗಡೆ ಆಗಿದ್ದು ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿದೆ.

Tecno Pova 3: ಭಾರತಕ್ಕೆ ಬರುತ್ತಿದೆ ಬರೋಬ್ಬರಿ 7,000mAh ಬ್ಯಾಟರಿಯ ಸ್ಮಾರ್ಟ್​​ಫೋನ್: ಬೆಲೆ ಕೇವಲ …
Tecno Pova 3
Follow us
TV9 Web
| Updated By: Vinay Bhat

Updated on:Jun 11, 2022 | 2:45 PM

ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳಿಗೆ (Budget Smartphone) ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದಲ್ಲಿ ತನ್ನ ವಿಶೇಷವಾದ ಫೋನೊಂದನ್ನು ಅನಾವರಣ ಮಾಡಲು ಸಜ್ಜಾಗಿದೆ. ಅದುವೆ ಟೆಕ್ನೋ ಪೊವಾ 3 (Tecno Pova 3) ಸ್ಮಾರ್ಟ್‌ಫೋನ್‌. ಈ ಸ್ಮಾರ್ಟ್‌ಫೋನ್ ವಿಶೇಷತೆ ಕುರಿತು ಅಮೆಜಾನ್​​ನಲ್ಲಿ ಟೀಸರ್‌ ಬಿಡುಗಡೆ ಆಗಿದ್ದು ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿದೆ. ಯಾಕೆಂದರೆ ಇದರಲ್ಲಿ ಬರೋಬ್ಬರಿ 7,000mAh ಸಾಮರ್ಥ್ಯದ ಅತ್ಯಂತ ದೊಡ್ಡದಾದ ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದೆ. ಇದಿಷ್ಟೇ ಅಲ್ಲದೆ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿರುವ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ. ಹಾಗಾದ್ರೆ ಈ ಫೋನಿನ ಇತರೆ ಫೀಚರ್ಸ್​​ ಏನು ಎಂಬುದನ್ನು ನೋಡೋಣ.

  • ಟೆಕ್ನೋ ಪೊವಾ 3 ಸ್ಮಾರ್ಟ್‌ಫೋನ್‌ ಆರಂಭದಲ್ಲಿ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಅದು 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದಿಂದ ಕೂಡಿರಲಿದೆ. ಆದರೆ, ಈ ಫೋನಿನ ಬೆಲೆ ಎಷ್ಟು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 13,000 ರೂ. ಯಿಂದ 15,000 ರೂ. ಒಳಗೆ ಇರಬಹುದು ಎನ್ನಲಾಗಿದೆ.
  • ಈ ಸ್ಮಾರ್ಟ್‌ಫೋನ್‌ 1080 × 2460 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.9 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರೀಫ್ರೇಶ್ ರೇಟ್​ನಿಂದ ಕೂಡಿದ್ದು, 480ನಿಟ್ಸ್‌ ಬ್ರೈಟ್‌ನೆಶ್‌ ಅನ್ನು ನೀಡುತ್ತದೆ.
  • ಇದನ್ನೂ ಓದಿ
    Image
    Google Maps: ಗೂಗಲ್ ಮ್ಯಾಪ್​ನಲ್ಲಿ ಬಂತು ಊಹಿಸಲಾಗದ ಫೀಚರ್: ಈಗಲೇ ಚೆಕ್ ಮಾಡಿ
    Image
    Tech Tips: ಬ್ಯಾಟರಿ ತೆಗೆಯಲು ಸಾಧ್ಯವಿಲ್ಲದ ಮೊಬೈಲ್ ಹ್ಯಾಂಗ್ ಆದರೆ ಏನು ಮಾಡಬೇಕು?: ಇಲ್ಲಿದೆ ಟಿಪ್ಸ್
    Image
    ಇದೀಗ ಸೇಲ್ ಕಾಣುತ್ತಿದೆ ರಿಯಲ್‌ ಮಿ ನಾರ್ಜೊ 50 ಪ್ರೊ 5G: ಈ ಹೊಸ ಫೋನ್ ಹೇಗಿದೆ?, ಖರೀದಿಸಬಹುದೆ?
    Image
    Moto G42: ಭರ್ಜರಿ ಕ್ಯಾಮೆರಾದಲ್ಲಿ ಬಂಪರ್ ಫೀಚರ್: ಹೊಸ ಮೋಟೋ G42 ಸ್ಮಾರ್ಟ್‌ಫೋನ್‌ ರಿಲೀಸ್
  • ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ G88 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಲಾಗಿದೆ.
  • ಟೆಕ್ನೋ ಪೊವಾ 3 ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ನಾಲ್ಕನೇ ಕ್ಯಾಮೆರಾ ಎಐ ಹೆಚ್‌ಡಿ ಲೆನ್ಸ್ ಅನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರುವ ಸಾಧ್ಯತೆಯಿದೆ.
  • ದೀರ್ಘ ಸಮಯ ಬಾಳಿಕ ಬರುವ 7,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರಲಿದೆ. ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ ಎನ್ನಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಎಲ್‌ಟಿಇ, ಜಿಪಿಎಸ್, ಬ್ಲೂಟೂತ್ ಅನ್ನು ನೀಡಲಾಗುತ್ತದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Sat, 11 June 22

ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ