AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Maps: ಗೂಗಲ್ ಮ್ಯಾಪ್​ನಲ್ಲಿ ಬಂತು ಊಹಿಸಲಾಗದ ಫೀಚರ್: ಈಗಲೇ ಚೆಕ್ ಮಾಡಿ

Air Quality: ಇದೀಗ ಗೂಗಲ್ ಮ್ಯಾಪ್ ಖಾತೆಗೆ ಮತ್ತೊಂದು ಹೊಸ ಅಪ್ಡೇಟ್ ಸೇರ್ಪಡೆಯಾಗಿದೆ. ಅದುವೆ ವಾಯು ಗುಣಮಟ್ಟ ಸೂಚ್ಯಂಕ (AQI). ಈ ಹೊಸ ಆಯ್ಕೆಯ ಮೂಲಕ ನಿಮ್ಮ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವನ್ನು ನೀವು ತಿಳಿಯಬಹುದು.

Google Maps: ಗೂಗಲ್ ಮ್ಯಾಪ್​ನಲ್ಲಿ ಬಂತು ಊಹಿಸಲಾಗದ ಫೀಚರ್: ಈಗಲೇ ಚೆಕ್ ಮಾಡಿ
AQI on Google Maps
TV9 Web
| Updated By: Vinay Bhat|

Updated on:Jun 11, 2022 | 1:48 PM

Share

ಗೂಗಲ್ (Google) ನೀಡಿರುವ ಬಹುಮುಖ್ಯ ಸೇವೆಗಳಲ್ಲಿ ಮ್ಯಾಪ್ ಕೂಡ ಒಂದು. ನಮಗೆ ಪರಿಚಯ ಇರದ ಯಾವುದೇ ಸ್ಥಳಗಳಿಗೆ ಗೂಗಲ್ ಮ್ಯಾಪ್ ಅಡೆತಡೆ ಇಲ್ಲದೆ ಕರೆದೊಯ್ಯುತ್ತದೆ. ಹೊಸದಾಗಿ ದೊಡ್ಡ ದೊಡ್ಡ ಪಟ್ಟಣಗಳಿಗೆ ಭೇಟಿ ನೀಡಲಿ ಅಥವಾ ಗುರುತು ಪರಿಚಯವಿಲ್ಲದ ಊರಾಗಲಿ, ಗೂಗಲ್ ಮ್ಯಾಪ್ (Google Maps) ಇದ್ದರೆ ಯಾವ ಜಾಗಕ್ಕೆ ಬೇಕಾದರೂ ತಲುಪಬಹುದು. ಇದು ಕಾಲಕ್ಕೆ ತಕ್ಕಂತೆ ಆಕರ್ಷಕ ಫೀಚರ್​ಗಳನ್ನು ಕೂಡ ಬಿಡುಗಡೆ ಮಾಡುತ್ತಿದೆ. ಇದೀಗ ಗೂಗಲ್ ಮ್ಯಾಪ್ ಖಾತೆಗೆ ಮತ್ತೊಂದು ಹೊಸ ಅಪ್ಡೇಟ್ ಸೇರ್ಪಡೆಯಾಗಿದೆ. ಅದುವೆ ವಾಯು ಗುಣಮಟ್ಟ ಸೂಚ್ಯಂಕ (AQI).

ಈ ಹೊಸ ಆಯ್ಕೆಯ ಮೂಲಕ ನಿಮ್ಮ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವನ್ನು ನೀವು ತಿಳಿಯಬಹುದು. ಗಾಳಿಯು ಎಷ್ಟು ಕಲುಷಿತವಾಗಿದೆ ಅಥವಾ ಭವಿಷ್ಯದಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಸರ್ಕಾರಿ ಏಜೆನ್ಸಿಗಳು ವಾಯು ಗುಣಮಟ್ಟ ಸೂಚ್ಯಂಕವನ್ನು (Air quality index – AQI) ಸಹಾಯ ಮಾಡುತ್ತದೆ. ಇದು ನೆಸ್ಟ್ ಹಬ್ ಗಳು ಮತ್ತು ಪಿಕ್ಸೆಲ್ ಫೋನ್ ಗಳಂತೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.

Tech Tips: ಬ್ಯಾಟರಿ ತೆಗೆಯಲು ಸಾಧ್ಯವಿಲ್ಲದ ಮೊಬೈಲ್ ಹ್ಯಾಂಗ್ ಆದರೆ ಏನು ಮಾಡಬೇಕು?: ಇಲ್ಲಿದೆ ಟಿಪ್ಸ್

ಇದನ್ನೂ ಓದಿ
Image
ಇದೀಗ ಸೇಲ್ ಕಾಣುತ್ತಿದೆ ರಿಯಲ್‌ ಮಿ ನಾರ್ಜೊ 50 ಪ್ರೊ 5G: ಈ ಹೊಸ ಫೋನ್ ಹೇಗಿದೆ?, ಖರೀದಿಸಬಹುದೆ?
Image
Moto G42: ಭರ್ಜರಿ ಕ್ಯಾಮೆರಾದಲ್ಲಿ ಬಂಪರ್ ಫೀಚರ್: ಹೊಸ ಮೋಟೋ G42 ಸ್ಮಾರ್ಟ್‌ಫೋನ್‌ ರಿಲೀಸ್
Image
Android: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಸರ್ಕಾರದಿಂದ ಎಚ್ಚರಿಕೆ ಸಂದೇಶ
Image
ಗುಡ್​ ನ್ಯೂಸ್! ಟ್ವಿಟರ್ ಪರಿಚಯಿಸಲಿದೆ ಹೊಸ ಶಾಪಿಂಗ್ ಆಪ್ಶನ್!

ಭಾರತದ ಅನೇಕ ಭಾಗಗಳಲ್ಲಿ ವಿಶೇಷವಾಗಿ ಮಹಾ ನಗರಗಳಲ್ಲಿ ಗಾಳಿಯ ಗುಣಮಟ್ಟವು ಗಂಭೀರ ಸಮಸ್ಯೆಯಾಗಿದೆ, ಇಲ್ಲಿ ವರ್ಷವಿಡೀ ಹಾಗೆಯೇ ಇರುತ್ತದೆ. ಸದ್ಯ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ CPCB ಒದಗಿಸಿದ ರಾಷ್ಟ್ರೀಯ AQI ರೀಡರ್‌ನಿಂದ ಡೇಟಾವನ್ನು ಪಡೆದು ಗೂಗಲ್ ಮ್ಯಾಪ್ ಈ ಆಯ್ಕೆಯನ್ನು ಹೊರತಂದಿದೆ.

ಈ ವಿವರಗಳು ಗಾಳಿಯ ಗುಣಮಟ್ಟ ಸೂಚ್ಯಂಕ ಅಥವಾ AQI ಗಾಳಿಯು ಎಷ್ಟು ಆರೋಗ್ಯಕರ ಅಥವಾ ಅನಾರೋಗ್ಯಕರ ಎಂಬುದನ್ನು ಒಳಗೊಂಡಿರುತ್ತದೆ. ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ತೋರಿಸುವುದರ ಜೊತೆಗೆ ಗೂಗಲ್​ ತನ್ನ ಮ್ಯಾಪ್​ನಲ್ಲಿ ಕಾಡ್ಗಿಚ್ಚುಗಳ ಮಾಹಿತಿ ಕೂಡ ತೋರಿಸುತ್ತದೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಈಒಎಸ್ ಬಳಕೆದಾರರಿಗೆ ಲಭ್ಯವುದೆ. ಸದ್ಯಕ್ಕೆ ಯುಎಸ್​ನಲ್ಲಿ ಈ ಆಯ್ಕೆಯನ್ನು ನೀಡಲಾಗಿದ್ದು ಸದ್ಯದಲ್ಲೇ ವಿಶ್ವದ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ.

ವಾಯು ಗುಣಮಟ್ಟ ಸೂಚ್ಯಂಕ ನೋಡುವುದು ಹೇಗೆ?:

  • ಗೂಗಲ್ ಮ್ಯಾಪ್ ತೆರೆಯಿರಿ.
  • ಮಧ್ಯದ ಬಲಭಾಗದಲ್ಲಿರುವ ಬಾಕ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಏರ್ ಕ್ವಾಲಿಟಿ ಆಯ್ಕೆಯನ್ನು ಒತ್ತಿರಿ ಆಗ ಮ್ಯಾಪ್​​ನಲ್ಲಿರುವ ಫೀಚರ್ ಬದಲಾಗುತ್ತದೆ.
  • ಈಗ AQI ಬಬಲ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ಥಳದ ಗಾಳಿಯ ಗುಣಮಟ್ಟದ ಡೇಟಾವನ್ನು ಪಡೆಯಿರಿ.

ಗೂಗಲ್ ಮ್ಯಾಪ್​​​​ನಲ್ಲಿ ಟೋಲ್ ದರದ ಮಾಹಿತಿ:

ಗೂಗಲ್ ಮ್ಯಾಪ್ ಇತ್ತೀಚೆಗಷ್ಟೆ ಟೋಲ್ ಬೆಲೆಗಳನ್ನು ತೋರಿಸುವುದು ಸೇರಿದಂತೆ  ಹಲವು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿತ್ತು. ಈ ವೈಶಿಷ್ಟ್ಯವು ಪ್ರವಾಸವನ್ನು ಪ್ರಾರಂಭಿಸುವ ಮೊದಲು ಟೋಲ್ ಮೊತ್ತವನ್ನು ಲೆಕ್ಕಾಚಾರ ಮಾಡಲು ಬಳಕೆದಾರರಿಗೆ ಸಹಾಯ ಮಾಡಲಿದೆ. ಟೋಲ್ ಸಂಬಂಧಿತ ಮಾಹಿತಿಯನ್ನು ಸ್ಥಳೀಯ ಟೋಲಿಂಗ್ ಅಧಿಕಾರಿಗಳ ಸಹಾಯದಿಂದ ಪ್ರದರ್ಶಿಸಲಾಗುತ್ತದೆ ಎಂದು ಗೂಗಲ್‌ ತಿಳಿಸಿದೆ. ಗೂಗಲ್ ಮ್ಯಾಪ್ ಅನ್ನು ಅಪ್ಡೇಟ್ ಮಾಡುವ ಮೂಲಕ ಬಳಕೆದಾರರು ಈ ಸವಲತ್ತನ್ನು ತಮ್ಮ ಮೊಬೈಲಿನಲ್ಲೇ ಪಡೆಯಬಹುದು.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:48 pm, Sat, 11 June 22

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ