AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google Maps: ಗೂಗಲ್ ಮ್ಯಾಪ್​​​​ನಲ್ಲಿ ಟೋಲ್ ದರದ ಮಾಹಿತಿ: ಆಂಡ್ರಾಯ್ಡ್, ಐಒಎಸ್ ಬಳಕೆದಾರರು ಇಲ್ಲಿ ಗಮನಿಸಿ

Google Maps New Feature: ಗೂಗಲ್ ಮ್ಯಾಪ್ ಇದೀಗ ಟೋಲ್ ಬೆಲೆಗಳನ್ನು (Toll Price) ತೋರಿಸುವುದು ಸೇರಿದಂತೆ  ಹಲವು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಈ ವೈಶಿಷ್ಟ್ಯವು ಪ್ರವಾಸವನ್ನು ಪ್ರಾರಂಭಿಸುವ ಮೊದಲು ಟೋಲ್ ಮೊತ್ತವನ್ನು ಲೆಕ್ಕಾಚಾರ ಮಾಡಲು ಬಳಕೆದಾರರಿಗೆ ಸಹಾಯ ಮಾಡಲಿದೆ.

Google Maps: ಗೂಗಲ್ ಮ್ಯಾಪ್​​​​ನಲ್ಲಿ ಟೋಲ್ ದರದ ಮಾಹಿತಿ: ಆಂಡ್ರಾಯ್ಡ್, ಐಒಎಸ್ ಬಳಕೆದಾರರು ಇಲ್ಲಿ ಗಮನಿಸಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Vinay Bhat|

Updated on: Apr 07, 2022 | 2:29 PM

Share

ಬಳಕೆದಾರರ ದೈನಂದಿನ ಕೆಲಸಗಳಿಗೆ ಅಗತ್ಯ ಎನಿಸುವ ಫೀಚರ್​​ಗಳನ್ನು ಬಿಡುಗಡೆ ಮಾಡಿ ಮೆಚ್ಚುಗೆಗೆ ಪಾತ್ರವಾಗಿರುವ ಸರ್ಚ್ ಇಂಜಿನ್ ದೈತ್ಯ ಗೂಗಲ್​ನ (Google) ಗೂಗಲ್ ಮ್ಯಾಪ್ ಇದೀಗ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಗೂಗಲ್ ಮ್ಯಾಪ್ ಇದೀಗ ಟೋಲ್ ಬೆಲೆಗಳನ್ನು (Toll Price) ತೋರಿಸುವುದು ಸೇರಿದಂತೆ  ಹಲವು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಈ ವೈಶಿಷ್ಟ್ಯವು ಪ್ರವಾಸವನ್ನು ಪ್ರಾರಂಭಿಸುವ ಮೊದಲು ಟೋಲ್ ಮೊತ್ತವನ್ನು ಲೆಕ್ಕಾಚಾರ ಮಾಡಲು ಬಳಕೆದಾರರಿಗೆ ಸಹಾಯ ಮಾಡಲಿದೆ. ಟೋಲ್ ಸಂಬಂಧಿತ ಮಾಹಿತಿಯನ್ನು ಸ್ಥಳೀಯ ಟೋಲಿಂಗ್ ಅಧಿಕಾರಿಗಳ ಸಹಾಯದಿಂದ ಪ್ರದರ್ಶಿಸಲಾಗುತ್ತದೆ ಎಂದು ಗೂಗಲ್‌ ತಿಳಿಸಿದೆ. ಮುಂದಿನ ಗೂಗಲ್ ಮ್ಯಾಪ್ (Google Map) ಅಪ್​​ಡೇಟ್ ವೇಳೆಗೆ ಅಂದರೆ ಈ ತಿಂಗಳು ಈ ಹೊಸ ಸವಲತ್ತನ್ನು ಸೇರಿಸಲಾಗಿರುತ್ತದೆ. ಗೂಗಲ್ ಮ್ಯಾಪ್ ಅನ್ನು ಅಪ್ಡೇಟ್ ಮಾಡುವ ಮೂಲಕ ಬಳಕೆದಾರರು ಈ ಸವಲತ್ತನ್ನು ತಮ್ಮ ಮೊಬೈಲಿನಲ್ಲೇ ಪಡೆಯಬಹುದು.

ಭಾರತ, ಅಮೆರಿಕ, ಜಪಾನ್ ಮತ್ತು ಇಂಡೋನೇಷ್ಯಾದ ಸುಮಾರು 2,000 ಟೋಲ್ ರಸ್ತೆಗಳಿಗೆ ಈ ತಿಂಗಳು ಆಂಡ್ರಾಯ್ಡ್ ಮತ್ತು ಐಒಎಸ್​ನಲ್ಲಿ ಟೋಲ್ ದರಗಳು ಬಿಡುಗಡೆಯಾಗಲಿದ್ದು, ಹೆಚ್ಚಿನ ದೇಶಗಳು ಶೀಘ್ರದಲ್ಲೇ ಈ ಯೋಜನೆ ವ್ಯಾಪ್ತಿಗೆ ಒಳಪಡಲಿದೆ ಎಂದು ಕಂಪನಿ ತಿಳಿಸಿದೆ. ಟೋಲ್ ಪಾಸ್ ಅಥವಾ ಇತರ ಪಾವತಿ ವಿಧಾನಗಳನ್ನು ಬಳಸುವ ವೆಚ್ಚ, ವಾರದ ದಿನ ಮತ್ತು ಬಳಕೆದಾರರು ಅದನ್ನು ದಾಟುವ ನಿರ್ದಿಷ್ಟ ಸಮಯದಲ್ಲಿ ಟೋಲ್ ಎಷ್ಟು ವೆಚ್ಚವಾಗುತ್ತದೆ ಎಂಬ ಅಂಶಗಳ ಆಧಾರದ ಮೇಲೆ ಗೂಗಲ್ ಮ್ಯಾಪ್ ನಿಮ್ಮ ಗಮ್ಯಸ್ಥಾನಕ್ಕೆ ಒಟ್ಟು ಟೋಲ್ ಬೆಲೆಯನ್ನು ಅಂದಾಜು ಮಾಡುತ್ತದೆ.

ಆ್ಯಪಲ್ ಅಥವಾ ಐಫೋನ್‌ನಲ್ಲಿ ಗೂಗಲ್ ನಕ್ಷೆಯನ್ನು ಬಳಸಲು ಸುಲಭಗೊಳಿಸಲು ಗೂಗಲ್ ಐಒಎಸ್ ಬಳಕೆದಾರರಿಗೆ ಹೊಸ ನವೀಕರಣಗಳನ್ನು ಸಹ ಬಿಡುಗಡೆ ಮಾಡಿದೆ. ಅಂದರೆ ಐಒಎಸ್ ಬಳಕೆದಾರರಿಗೆ ಪಿನ್ ಮಾಡಿದ ಟ್ರಿಪ್ ವಿಜೆಟ್, ಆ್ಯಪಲ್ ವಾಚ್‌ನಿಂದ ನೇರ ನ್ಯಾವಿಗೇಷನ್ ಮತ್ತು ಸಿರಿ ಮತ್ತು ಶಾರ್ಟ್‌ಕಟ್‌ಗಳ ಅಪ್ಲಿಕೇಶನ್‌ಗೆ ಗೂಗಲ್ ನಕ್ಷೆಗಳ ಇಂಟಿಗ್ರೇಷನನ್ನು ಗೂಗಲ್ ಪರಿಚಯಿಸಿದೆ. ಹೊಸ ಪಿನ್ ಮಾಡಿದ ಟ್ರಿಪ್ ವಿಜೆಟ್‌ನ ಸಹಾಯದಿಂದ, ಬಳಕೆದಾರರು ತಮ್ಮ ಗೋ ಟ್ಯಾಬ್‌ನಲ್ಲಿ ಪಿನ್ ಮಾಡಿದ ಟ್ರಿಪ್‌ಗಳನ್ನು ಐಓಎಸ್ ಹೋಮ್ ಸ್ಕ್ರೀನ್‌ನಿಂದಲೇ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದರಿಂದ ಬಳಕೆದಾರರಿಗೆ ನಿರ್ದೇಶನಗಳನ್ನು ಪಡೆಯುವುದನ್ನು ಇನ್ನಷ್ಟು ಸರಳಗೊಳಿಸುತ್ತದೆ.

ಆ್ಯಪಲ್ ವಾಚ್ ಬಳಕೆದಾರರು ಶೀಘ್ರದಲ್ಲೇ ತಮ್ಮ ವಾಚ್‌ನಿಂದ ನೇರವಾಗಿ ಗೂಗಲ್ ನಕ್ಷೆಗಳಲ್ಲಿ ನಿರ್ದೇಶನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಆಪಲ್ ವಾಚ್‌ ಬಳಕೆದಾರರು ಇನ್ನು ಮುಂದೆ ಐಫೋನ್‌ನಿಂದ ನ್ಯಾವಿಗೇಶನ್ ಅನ್ನು ಪ್ರಾರಂಭಿಸುವ ಅಗತ್ಯವಿರುವುದಿಲ್ಲ. ಆ್ಯಪಲ್ ವಾಚ್ ಅಪ್ಲಿಕೇಶನ್‌ನಲ್ಲಿ ಗೂಗಲ್ ಮ್ಯಾಪ್ ಶಾರ್ಟ್‌ಕಟ್  ಟ್ಯಾಪ್ ಮಾಡುವುದರಿಂದ ಆ್ಯಪಲ್ ವಾಚ್‌ನಲ್ಲಿಯೇ ನ್ಯಾವಿಗೇಷನ್ ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.

ಟೋಲ್ ಬೆಲೆಗಳನ್ನು ಗೂಗಲ್ ಮ್ಯಾಪ್ಸ್ ಪ್ರಕಟಿಸುವುದು ಹೇಗೆ?

ಯಾವುದೇ ಪ್ರಯಾಣದ ನಡವೆ ಬರಲಿರುವ ಟೋಲ್ ಸಂಬಂಧಿತ ಮಾಹಿತಿಯನ್ನು ಸ್ಥಳೀಯ ಟೋಲಿಂಗ್ ಅಧಿಕಾರಿಗಳ ಸಹಾಯದಿಂದ ಪ್ರದರ್ಶಿಸಲಾಗುತ್ತದೆ ಎಂದು ಗೂಗಲ್ ಮ್ಯಾಪ್ ಅಧಿಕಾರಿಗಳು ತಿಳಿಸಿದ್ದಾರೆ. ಟೋಲ್ ಪಾಸ್ ಅಥವಾ ಇತರ ಪಾವತಿ ವಿಧಾನಗಳನ್ನು ಬಳಸುವ ವೆಚ್ಚ, ವಾರದ ದಿನ ಮತ್ತು ನಿರ್ದಿಷ್ಟ ಸಮಯದಲ್ಲಿ ಟೋಲ್‌ಗೆ ಎಷ್ಟು ವೆಚ್ಚವಾಗಬಹುದು ಎಂಬ ಅಂಶಗಳ ಆಧಾರದ ಮೇಲೆ ಗೂಗಲ್ ನಕ್ಷೆಗಳು ನಿಮ್ಮ ಗಮ್ಯ ಸ್ಥಾನಕ್ಕೆ ಟೋಲ್‌ನ ಅಂದಾಜು ಬೆಲೆಯನ್ನು ಒದಗಿಸುತ್ತದೆ. ಟೋಲ್ ಬೆಲೆಗಳ ಜೊತೆಗೆ ಅದಕ್ಕೆ ಪರ್ಯಾಯವಾಗಿರುವ ಮಾರ್ಗಗಳು ಯಾವುವು ಎಂಬುದನ್ನು ಸಹ ಗೂಗಲ್ ಮ್ಯಾಪ್​​ನಲ್ಲಿ ಪ್ರದರ್ಶಿಸಲಾಗುತ್ತದೆ.

Koo App: ಬಳಕೆದಾರರಿಗೆ ವಿಶೇಷ ಅನುಭವ ನೀಡಲು ಕೂ ಆ್ಯಪ್​ನಿಂದ ಸ್ವಯಂ-ಪರಿಶೀಲನ ಫೀಚರ್

Realme C31: ಕೇವಲ 8,999 ರೂ.: ಇಂದು ಮೊದಲ ಸೇಲ್ ಕಾಣುತ್ತಿದೆ ರಿಯಲ್ ಮಿ C31 ಸ್ಮಾರ್ಟ್​ಫೋನ್

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ