AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಬ್ಯಾಟರಿ ತೆಗೆಯಲು ಸಾಧ್ಯವಿಲ್ಲದ ಮೊಬೈಲ್ ಹ್ಯಾಂಗ್ ಆದರೆ ಏನು ಮಾಡಬೇಕು?: ಇಲ್ಲಿದೆ ಟಿಪ್ಸ್

ಈಗ ಬರುವ ಎಲ್ಲ ಸ್ಮಾರ್ಟ್​​ಫೋನ್​ಗಳಲ್ಲಿ (Smartphone) ಬ್ಯಾಟರಿ ರಿಮೂವ್ ಮಾಡಲು ಸಾಧ್ಯವಿಲ್ಲ. ಈ ಸಂದರ್ಭ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಹ್ಯಾಂಗ್ ಆಗಿ ಏನೂ ವರ್ಕ್​ ಆಗದಿದ್ದಾಗ ಹೇಗೆ ರೀಸ್ಟಾರ್ಟ್ಸ್ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್ (Tech Tips).

Tech Tips: ಬ್ಯಾಟರಿ ತೆಗೆಯಲು ಸಾಧ್ಯವಿಲ್ಲದ ಮೊಬೈಲ್ ಹ್ಯಾಂಗ್ ಆದರೆ ಏನು ಮಾಡಬೇಕು?: ಇಲ್ಲಿದೆ ಟಿಪ್ಸ್
Tech Tips
TV9 Web
| Updated By: Vinay Bhat|

Updated on: Jun 11, 2022 | 11:48 AM

Share

ಕಂಪ್ಯೂಟರ್, ಮೊಬೈಲ್‌, ಟ್ಯಾಬ್‌ ಯಾವುದೇ ಇರಲಿ ಎಲ್ಲಾ ಗ್ಯಾಜೆಟ್‌ಗಳು ಕೆಲಸ ಮಾಡುವಾಗ ಹ್ಯಾಂಗ್‌ ಆಗುವುದು ಸಹಜ. ಒಂದು ಆ್ಯಪ್ ತೆರೆದಾಗಲೋ ಅಥವಾ ಸ್ಕ್ರೀನ್ ಅನ್‌ಲಾಕ್ ಮಾಡಿದಾಗಲೋ, ಫೋನ್ ಏನೇ ಮಾಡಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಈ ರೀತಿಯ ಸಮಸ್ಯೆ ಹಲವರಿಗೆ ಎದುರಾಗಿರಬಹುದು. ಇದನ್ನು ಫೋನ್ ‘ಹ್ಯಾಂಗ್ (Phone Hang) ಆಗುವುದು’, ‘ಫ್ರೀಜ್ ಆಗುವುದು’ ಎಂದೆಲ್ಲ ಹೇಳಲಾಗುತ್ತದೆ. ಹಿಂದಿನ ಫೋನ್​ಗಳಲ್ಲಿ ಹ್ಯಾಂಗ್ ಆದರೆ ಥಟ್ ಎಂದು ಮೊಬೈಲ್ ಬ್ಯಾಟರಿ ರಿಮೂವ್ ಮಾಡಿ ನಂತರ ಪವರ್ ಆನ್ ಬಟನ್ ಒತ್ತಿ ಆನ್ ಮಾಡಿ ಉಪಯೋಗಿಸುತ್ತಿದ್ದೆವು. ಆದರೀಗ ಬರುವ ಎಲ್ಲ ಸ್ಮಾರ್ಟ್​​ಫೋನ್​ಗಳಲ್ಲಿ (Smartphone) ಬ್ಯಾಟರಿ ರಿಮೂವ್ ಮಾಡಲು ಸಾಧ್ಯವಿಲ್ಲ. ಈ ಸಂದರ್ಭ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಹ್ಯಾಂಗ್ ಆಗಿ ಏನೂ ವರ್ಕ್​ ಆಗದಿದ್ದಾಗ ಹೇಗೆ ರೀಸ್ಟಾರ್ಟ್ಸ್ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್ (Tech Tips).

ಮೊದಲನೆಯದಾಗಿ ಈ ರೀತಿ ಹ್ಯಾಂಗ್ ಅಥವಾ ಫ್ರೀಜ್ ಆಗುವ ಮೊದಲೇ ನಾವು ಕೆಲವೊಂದು ಮುನ್ನೆಚ್ಚರಿಕೆ ವಹಿಸಿದರೆ ಅದರ ಬ್ಯಾಟರಿಗೂ, ಕಾರ್ಯಾಚರಣಾ ವ್ಯವಸ್ಥೆಗೂ ಅನುಕೂಲವಾಗುತ್ತದೆ. ಇದಕ್ಕಾಗಿ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನನ್ನು ಸುಮ್ಮನೇ ರೀಸ್ಟಾರ್ಟ್ ಮಾಡುವುದು. ಇದನ್ನು ರೀಬೂಟಿಂಗ್ ಎಂದೂ ಕರೆಯುತ್ತಾರೆ. ಅಂದರೆ, ಫೋನ್ ಸ್ವಿಚ್ ಆಫ್ ಮಾಡಿ ಮರಳಿ ಆನ್ ಮಾಡುವುದು. ಫೋನ್‌ನ ಪವರ್ ಬಟನ್ ಅನ್ನು ಕೆಲವು ಕ್ಷಣ ಒತ್ತಿ ಹಿಡಿದುಕೊಂಡರೆ, ರೀಸ್ಟಾರ್ಟ್, ಪವರ್ ಆಫ್ ಹಾಗೂ ಹೊಸ ಫೋನ್‌ಗಳಲ್ಲಿ ‘ಸ್ಕ್ರೀನ್ ಶಾಟ್’ ಬಟನ್‌ಗಳು ಗೋಚರಿಸುತ್ತವೆ. ಇದರಲ್ಲಿ ‘ರೀಸ್ಟಾರ್ಟ್’ ಒತ್ತಿದರೆ, ತಾನಾಗಿ ಆಫ್ ಆಗಿ, ಮರಳಿ ಆನ್ ಆಗುತ್ತದೆ. ಇಲ್ಲವೇ, ‘ಪವರ್ ಆಫ್’ ಒತ್ತಿ, ಐದು ನಿಮಿಷದ ನಂತರ ನಾವೇ ಆನ್ ಮಾಡಬೇಕಾಗುತ್ತದೆ.

ಇದೀಗ ಸೇಲ್ ಕಾಣುತ್ತಿದೆ ರಿಯಲ್‌ ಮಿ ನಾರ್ಜೊ 50 ಪ್ರೊ 5G: ಈ ಹೊಸ ಫೋನ್ ಹೇಗಿದೆ?, ಖರೀದಿಸಬಹುದೆ?

ಇದನ್ನೂ ಓದಿ
Image
Moto G42: ಭರ್ಜರಿ ಕ್ಯಾಮೆರಾದಲ್ಲಿ ಬಂಪರ್ ಫೀಚರ್: ಹೊಸ ಮೋಟೋ G42 ಸ್ಮಾರ್ಟ್‌ಫೋನ್‌ ರಿಲೀಸ್
Image
Android: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿ: ಸರ್ಕಾರದಿಂದ ಎಚ್ಚರಿಕೆ ಸಂದೇಶ
Image
Happy Birthday Sundar Pichai: ಸುಂದರ್ ಪಿಚೈಗೆ ಹುಟ್ಟುಹಬ್ಬದ ಸಂಭ್ರಮ: ಗೂಗಲ್ ಸಿಇಓ ಬಗ್ಗೆ ಅಚ್ಚರಿ ಸಂಗತಿಗಳು ಇಲ್ಲಿವೆ
Image
ಗುಡ್​ ನ್ಯೂಸ್! ಟ್ವಿಟರ್ ಪರಿಚಯಿಸಲಿದೆ ಹೊಸ ಶಾಪಿಂಗ್ ಆಪ್ಶನ್!

ಒಂದು ವೇಳೆ ಯಾವುದೇ ಆಯ್ಕೆಗಳು ವರ್ಕ್ ಆಗುತ್ತಿಲ್ಲ ಎಂದಾದರೆ ವಾಲ್ಯುಮ್ ಡೌನ್ ಬಟನ್ ಮತ್ತು ಲಾಕ್ ಅಥವಾ ಪವರ್ ಬಟನ್ ಅನ್ನು ಕೆಲ ಸೆಕೆಂಟ್​ಗಳ ಕಾಲ ಒತ್ತಿ ಹಿಡಿಯಿರಿ. ಆಗ ನಿಮ್ಮ ಮೊಬೈಲ್ ತಕ್ಷಣ ರೀಸ್ಟಾರ್ಟ್ ಆಗುತ್ತದೆ. ಕೆಲ ಮೊಬೈಕ್​ಗಳಲ್ಲಿ ವಾಲ್ಯುಮ್ ಡೌನ್ ಬಟನ್ ಬದಲು ವಾಲ್ಯುಮ್ ಅಪ್ ಬಟನ್ ಕೂಡ ಕೆಲಸ ಮಾಡುತ್ತದೆ ಎಂಬಬುದು ನೆನಪಿರಲಿ. ರೀಸ್ಟಾರ್ಟ್ ಎಂಬುದು ಒಂದು ತಾತ್ಕಾಲಿಕ ಪರಿಹಾರವಷ್ಟೆ ಎಂಬುದನ್ನು ತಿಳಿಯಿರಿ. ಡಿವೈಸ್‌ಗಳು ಯಾವಾಗಲೂ ಹ್ಯಾಂಗ್‌ ಆಗುತ್ತಿದ್ದರೆ ಸರ್ವಿಸ್‌ ಮಾಡಿಸುವುದು ಅಗತ್ಯ.

ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಿದರೆ, ನಿಮ್ಮ ಫೋನ್ ಈಗಿರುವುದಕ್ಕಿಂತ ವೇಗವಾಗಿ ಕೆಲಸ ಮಾಡಬಹುದು. ಮೊದಲು ನಿಮ್ಮ ಸ್ಮಾರ್ಟ್ ಫೋನ್ ಸೆಟ್ಟಿಂಗ್ಸ್ ತೆರೆಯಿರಿ. ಸಾಫ್ಟ್‌ವೇರ್ ಅಪ್‌ಡೇಟ್ ಆಗಿದೆಯೇ ಎಂದು ನೋಡಿ. ಇಲ್ಲದಿದ್ದರೆ ನಿಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿ. ನಂತರ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ. ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಅಪ್ಲಿಕೇಶನ್‌ಗಳು ಮತ್ತು ಸಾಧನವನ್ನು ನಿರ್ವಹಿಸಿ. ಅಪ್‌ಡೇಟ್ ಮಾಡಬೇಕಾದ ಆ್ಯಪ್‌ಗಳಿವೆಯೇ ಎಂದು ನೋಡಿ. ಎಲ್ಲಾ ಅಪ್ಲಿಕೇಶನ್‌ಗಳನ್ನು ಅಪ್​ಡೇಟ್​ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಅನಿಮೇಷನ್‌ಗಳನ್ನು ಇದ್ದರೆ ಅದು ಸ್ಲೋ ಆಗಿ ಕಾರ್ಯನಿರ್ವಹಿಸುತ್ತದೆ. ಹಳೆಯ ಸ್ಮಾರ್ಟ್​​​ಫೋನ್​ಗಳಲ್ಲಿ ಅನಿಮೇಷನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಡೆವಲಪರ್ ಮೋಡ್ ಅನ್ನು ಸಕ್ರಿಯಗೊಳಿಸ ಬೇಕು. ನಂತರ ಸೆಟ್ಟಿಂಗ್‌ಗಳಲ್ಲಿ, ಸಿಸ್ಟಂಗಳಲ್ಲಿ, ಡೆವಲಪರ್ ಆಯ್ಕೆಗಳನ್ನು ಆಯ್ಕೆ ಮಾಡಿ. ನೀವು ಕೆಳಗೆ ಸ್ಕ್ರಾಲ್ ಮಾಡಿದಾಗ ಅನಿಮೇಷನ್‌ಗಳು ಕಾಣಿಸಿಕೊಳ್ಳುತ್ತವೆ. ಎಲ್ಲಾ ಅನಿಮೇಷನ್‌ಗಳನ್ನು ಆಫ್ ಮಾಡಿದರೆ ನಿಮ್ಮ ಮೊಬೈಲ್ ಮತ್ತಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ