Xiaomi: ಶವೋಮಿ ಸ್ಮಾರ್ಟ್‌ಫೋನ್ ಬಳಸುತ್ತಿರುವವರು ತಪ್ಪದೇ ಈ ಸ್ಟೋರಿ ಓದಿ: ಬ್ಯಾಟರಿ ಬಗ್ಗೆ ಹೊಸ ಘೋಷಣೆ
Xiaomi Battery: ಇದೀಗ ಶವೋಮಿ ಕಂಪನಿ ಬ್ಯಾಟರಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗಷ್ಟೆ ಕಂಪನಿ 'ಬ್ಯಾಟರಿ ರಿಪ್ಲೇಸ್ಮೆಂಟ್ ಪ್ರೊಗ್ರಾಮ್' ಅಂದರೆ ಬ್ಯಾಟರಿ ಬದಲಾಯಿಸುವ ಪ್ರಕ್ರಿಯೆಯನ್ನು ಭಾರತದಲ್ಲಿ ತರುವುದಾಗಿ ಹೇಳಿತ್ತು. ಇದೀಗ ಈ ಪ್ರಕ್ರಿಯೆ ಜಾರಿಯಾಗಿದೆ.
ಚೀನಾ ಮೂಲದ ಪ್ರಸಿದ್ಧ ಟೆಕ್ ಕಂಪನಿ ಶವೋಮಿಯ (Xiaomi) ಸ್ಮಾರ್ಟ್ಫೋನ್ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಇದಕ್ಕಾಗಿಯೇ ಕಳೆದ ಕೆಲವು ವರ್ಷಗಳಿಂದ ದೇಶದ ನಂಬರ್ ಒನ್ ಸ್ಮಾರ್ಟ್‌ಫೋನ್ ಕಂಪನಿ ಆಗಿ ಗುರುತಿಸಿಕೊಂಡಿದೆ. ಬಜೆಟ್ ಪ್ರಿಯರಿಗಾಗಿ ಆಕರ್ಷಕ ಕ್ಯಾಮೆರಾ, ಬ್ಯಾಟರಿ ಮೂಲಕ ರೆಡ್ಮಿ (Redmi) ಸಬ್ಬ್ರ್ಯಾಂಡ್ ಅಡಿಯಲ್ಲಿ ಸರಾಗವಾಗಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಲೇ ಇದೆ. ಎಂಐ (Mi) ಬ್ರ್ಯಾಂಡ್ ಸ್ಥಗಿತಗೊಳಿಸಿದ ಬಳಿಕ ಈಗ ಶವೋಮಿ ಎಂಬ ಹೆಸರಿನಲ್ಲೇ ಫೋನ್ಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ ಶವೋಮಿ ಕಂಪನಿ ಬ್ಯಾಟರಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಮಾಹಿತಿ ಹಂಚಿಕೊಂಡಿದೆ. ಇತ್ತೀಚೆಗಷ್ಟೆ ಕಂಪನಿ ‘ಬ್ಯಾಟರಿ ರಿಪ್ಲೇಸ್ಮೆಂಟ್ ಪ್ರೊಗ್ರಾಮ್’ ಅಂದರೆ ಬ್ಯಾಟರಿ ಬದಲಾಯಿಸುವ ಪ್ರಕ್ರಿಯೆಯನ್ನು ಭಾರತದಲ್ಲಿ ತರುವುದಾಗಿ ಹೇಳಿತ್ತು. ಇದೀಗ ಈ ಪ್ರಕ್ರಿಯೆ ಜಾರಿಯಾಗಿದೆ.
ಶವೋಮಿ ಭಾರತದ ಸಿಒಒ ಮುರಳಿಕೃಷ್ಟನ್ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಶವೋಮಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಬದಲಾವಣೆ ಮಾಡುವ ಅಗತ್ಯವಿದ್ದಲ್ಲಿ ಈಗ ಇದು ಜಾರಿಯಲ್ಲಿದೆ ಎಂದು ಹೇಳಿದ್ದಾರೆ. ಬ್ಯಾಟರಿಯ ಆರಂಭಿಕ ಬೆಲೆ 499 ರೂ. ಆಗಿದೆ. ಇದರ ಜೊತೆಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿರುವ ಅವರು, ಬ್ಯಾಟರಿಯ ಬೆಲೆಯು ಅದು ಯಾವ ಶವೋಮಿ ಸ್ಮಾರ್ಟ್‌ಫೋನ್ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಕಂಪನಿಯ ಪ್ರಕಾರ ಬಳಕೆದಾರರ ಹ್ಯಾಂಡ್‌ಸೆಟ್‌ಗಳ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ.
Moto G82 5G: ಹೊಸ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್: ಇಂದು ಮಾರಾಟ ಶುರುವಾಗಿದೆ ಮೋಟೋ G82 5G
ಈ ಮೂಲಕ ಶವೋಮಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಚಾರ್ಜ್ ನಿಲ್ಲುತ್ತಿಲ್ಲ, ಹೆಚ್ಚು ಬಿಸಿ ಆಗುತ್ತಿರುವ ಅನುಭವ ಆಗುತ್ತಿದ್ದರೆ ಹತ್ತಿರದ ಶವೋಮಿ ಸರ್ವೀಸ್ ಸಂಟರ್ಗೆ ಬೇಟಿ ನೀಡಬಹುದು. ಶವೋಮಿ ಸರ್ವಿಸ್+ ಎಂಬ ಆ್ಯಪ್ ಮೂಲಕವೂ ಬ್ಯಾಟರಿ ಬಗ್ಗೆ ಮಾಹಿತಿ ಪಡೆಯಬಹುದು.
ಬ್ಯಾಟರಿ ಬ್ಯಾಕ್ಅಪ್ನ್ನು ಹೆಚ್ಚಿಸಲು ಹೀಗೆ ಮಾಡಿ:
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಚಾರ್ಜ್ ಹೆಚ್ಚು ಸಮಯ ಬರುತ್ತಿಲ್ಲ ಎಂದಾದರೆ ಅದು ಬ್ಯಾಟರಿ ತೊಂದರೆ ಮಾತ್ರ ಆಗಿರುವುದಿಲ್ಲ. ಫೋನ್ ಉಪಯೋಗಿಸುವ ವಿಧಾನದಲ್ಲಿ ಕೊಂಚ ಬದಲಾವಣೆ ಮಾಡಿದರೆ ದೀರ್ಘ ಸಮಯದ ವರೆಗೆ ಚಾರ್ಜ್ ಬರುವಂತೆ ಮಾಡಬಹುದು. ವೈ-ಫೈ, ಬ್ಲೂಟೂತ್ ಅಥವಾ ಎನ್‌ಎಫ್‌ಸಿ ಬಳಕೆಯಲ್ಲಿಲ್ಲದಿದ್ದಾಗ ಅವುಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ನೀವು ಬ್ಯಾಟರಿಯನ್ನು ಸಂರಕ್ಷಿಸಬಹುದಾಗಿದೆ. ಕೆಲವೊಮ್ಮೆ, ಜನರು ಫೋನ್ ವೈಬ್ರೇಟ್ ಮೋಡ್ಗೆ ಹಾಕಿ ಬಿಟ್ಟುಬಿಡುತ್ತಾರೆ. ಅದು ಹೆಚ್ಚುವರಿ ಬ್ಯಾಟರಿಯನ್ನು ಬಳಸುತ್ತದೆ.
ಅಂತೆಯೆ ನೀವು ಸಾಕಷ್ಟು ನೋಟಿಫಿಕೇಶನ್ ಸ್ವೀಕರಿಸಿದರೆ ಕೂಡ ಚಾರ್ಜ್ ಖಾಲಿ ಆಗುತ್ತದೆ. ಯಾವುದೇ ಅಪ್ಲಿಕೇಶನ್ನ್ನು ಡೌನ್‌ಲೋಡ್ ಮಾಡುವ ಮೊದಲು, ಅವು ಎಷ್ಟು ಬ್ಯಾಟರಿಯನ್ನು ಬಳಸುತ್ತವೆ ಎಂಬುದನ್ನು ಪರಿಶೀಲಿಸುವುದು ಬುದ್ಧಿವಂತಿಕೆ. ನಾವು ಅಪ್ಲಿಕೇಶನ್‌ಗಳನ್ನು ಬಳಸಿದಾಗ ಮತ್ತು ಅವುಗಳನ್ನು ಸರಿಯಾಗಿ ಆಫ್ ಮಾಡದೇ ಇರುವಾಗ, ಅವು ಆನ್ನಲ್ಲಿರುವತ್ತವೆ. ಮತ್ತು ಹಿನ್ನೆಲೆಯಲ್ಲಿ ಚಾಲನೆಯಾಗುತ್ತವೆ. ಇದರಿಂದ ಅಮೂಲ್ಯವಾದ ಚಾರ್ಜ್ ಖಾಲಿ ಆಗುತ್ತಾ ಇರುತ್ತದೆ. ಹೀಗಾಗಿ ಉಪಯೋಗಿಸಿದ ನಂತರ ಆ ಆ್ಯಪ್ ಅನ್ನು ಸಂಪೂರ್ಣವಾಗಿ ಕ್ಲೋಸ್ ಮಾಡಿ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Tue, 14 June 22