Galaxy S20FE 5G: ನೀವು ಸ್ಯಾಮ್​ಸಂಗ್ ಪ್ರಿಯರಾಗಿದ್ದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಮತ್ತೆ ಸಿಗಲ್ಲ

ಇದೀಗ ಅಚ್ಚರಿ ಎಂಬಂತೆ ಸ್ಯಾಮ್​ಸಂಗ್ ತನ್ನ ಗ್ಯಾಲಕ್ಸಿ ಎಸ್​​20ಎಫ್​​ಇ (Samsung Galaxy S20 FE) ಸ್ಮಾರ್ಟ್​​ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಿದೆ.

Galaxy S20FE 5G: ನೀವು ಸ್ಯಾಮ್​ಸಂಗ್ ಪ್ರಿಯರಾಗಿದ್ದಲ್ಲಿ ಇದಕ್ಕಿಂತ ಕಡಿಮೆ ಬೆಲೆಗೆ ಈ ಫೋನ್ ಮತ್ತೆ ಸಿಗಲ್ಲ
Samsung Galaxy S20FE 5G
Follow us
| Updated By: Vinay Bhat

Updated on:Jun 17, 2022 | 2:11 PM

ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್​​ಫೋನ್​ಗಳ ಪೈಕಿ ಸ್ಯಾಮ್​ಸಂಗ್ (Samsung) ದ್ವಿತೀಯ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುತ್ತಿರುವುದು. ಮುಖ್ಯವಾಗಿ ಗ್ಯಾಲಕ್ಸಿ ಹೊಸ ಆವೃತ್ತಿಯ ಫೋನ್ ಬಿಡುಗಡೆ ಆಯಿತು ಎಂದಾದರೆ ಅಲ್ಲಿ ಹಿಂದಿನ ಆವೃತ್ತಿಯ ಫೋನಿನ ಬೆಲೆ ಕೊಂಚ ಕಡಿಮೆ ಮಾಡಿ ಮಾರಾಟ ಮಾಡುತ್ತದೆ. ಆದರೆ, ಇದೀಗ ಅಚ್ಚರಿ ಎಂಬಂತೆ ಸ್ಯಾಮ್​ಸಂಗ್ ತನ್ನ ಗ್ಯಾಲಕ್ಸಿ ಎಸ್​​20ಎಫ್​​ಇ (Samsung Galaxy S20 FE) ಸ್ಮಾರ್ಟ್​​ಫೋನ್ ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಿದೆ. ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್​ನಲ್ಲಿ (Amazon) ಈ ಸ್ಮಾರ್ಟ್​​ಫೋನ್ ಮೇಲೆ ಬರೋಬ್ಬರಿ 3,500 ರೂ. ರಿಯಾಯಿತಿ ಘೋಷಿಸಲಾಗಿದೆ. ಇದಿಷ್ಟೇ ಅಲ್ಲದೆ ಇತರೆ ಆಫರ್ ಕೂಡ ನೀಡಲಾಗಿದೆ. ಹಾಗಾದ್ರೆ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನಿನ ನೂತನ ಬೆಲೆ ಎಷ್ಟು?, ಇದರಲ್ಲಿ ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.

  1. ಸ್ಯಾಮ್​ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್​ಫೋನನ್ನು ನೀವೀಗ ಕೇವಲ 33,490 ರೂಪಾಯಿಗೆ ಖರೀದಿಸಬಹುದು. ಜೊತೆಗೆ ನೀವು ಎಸ್​ಬಿಐ ಕ್ರೆಡಿಟ್ ಕಾರ್ಡ್ ಮೂಲಕ ತೆಗೆದುಕೊಂಡರೆ ಪುನಃ 1,000 ರೂ. ಗಳ ರಿಯಾಯಿತಿ ಸಿಗಲಿದೆ. ಈ ಮೂಲಕ ಅಮೆಜಾನ್​ನಲ್ಲಿ ನೀವು ಈ ಫೋನನ್ನು ಕೇವಲ 32,490 ರೂ. ಗೆ ನಿಮ್ಮದಾಗಿಸಬಹುದು.
  2. ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5-ಇಂಚಿನ ಫುಲ್‌-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ.
  3. ಆಕ್ಟಾ-ಕೋರ್ ಎಕ್ಸಿನೋಸ್ 990 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
  4. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ವೈಡ್-ಆಂಗಲ್ ಲೆನ್ಸ್ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು ಡ್ಯುಯಲ್ ಫೇಸ್ ಡಿಟೆಕ್ಷನ್ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ.
  5. ಇದನ್ನೂ ಓದಿ
    Image
    5G Smartphone: ಕೇವಲ 15,000 ರೂ. ಒಳಗೆ ಸಿಗುತ್ತಿರುವ 5G ಸ್ಮಾರ್ಟ್​​ಫೋನ್ ಬಗ್ಗೆ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
    Image
    Jio Recharge: ಇಲ್ಲಿದೆ ನೋಡಿ ಜಿಯೋ ಟೆಲಿಕಾಂನ ಅತ್ಯಂತ ಬೇಡಿಕೆಯ ಬೆಸ್ಟ್ ಪ್ಲಾನ್
    Image
    Xiaomi 11X Pro: 108MP ಕ್ಯಾಮೆರಾದ ಈ ಸ್ಮಾರ್ಟ್​​ಫೋನ್ ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್: ಮಿಸ್ ಮಾಡ್ಬೇಡಿ
    Image
    Google Chrome: ಗೂಗಲ್​ನಿಂದ ವಾರ್ನಿಂಗ್: ಕ್ರೋಮ್ ಉಪಯೋಗಿಸುವವರು ತಕ್ಷಣವೇ ಹೀಗೆ ಮಾಡಿ
  6. ಎರಡನೇ ಕ್ಯಾಮೆರಾ 123 ಡಿಗ್ರಿ ಫೀಲ್ಡ್ ವ್ಯೂ ಜೊತೆಗೆ 12 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ.
  7. ಇನ್ನೂ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 15W ಫಾಸ್ಟ್ ಚಾರ್ಜಿಂಗ್ ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
  8. ವಾಯರ್‌ಲೆಸ್‌ ಚಾರ್ಜಿಂಗ್-ಬೆಂಬಲಿತ ಡಿವೈಸ್‌ಗಳೊಂದಿಗೆ ಪವರ್‌ ಹಂಚಿಕೊಳ್ಳಲು ಸ್ಯಾಮ್‌ಸಂಗ್‌ನ ವಾಯರ್‌ಲೆಸ್ ಪವರ್‌ಶೇರ್ ಸಹ ಇದೆ.
  9. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE ವೈ-ಫೈ, ಬ್ಲೂಟೂತ್ V5.0, ಜಿಪಿಎಸ್‌, NFC, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಸಹ ಹೊಂದಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Fri, 17 June 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ