Google Chrome: ಗೂಗಲ್ನಿಂದ ವಾರ್ನಿಂಗ್: ಕ್ರೋಮ್ ಉಪಯೋಗಿಸುವವರು ತಕ್ಷಣವೇ ಹೀಗೆ ಮಾಡಿ
ಹಿಂದಿನ ಆವೃತ್ತಿಯ ಗೂಗಲ್ ಕ್ರೋಮ್ನಲ್ಲಿ ಅಪಾಯಕಾರಿಯಾದ ದೋಷಗಳು ಕಂಡುಬಂದಿರುವ ಬಗ್ಗೆ ವರಿಯಾಗಿದೆ. ಹೀಗಾಗಿ ಕ್ರೋಮ್ ಬಳಕೆ ಮಾಡುವವರು ತಕ್ಷಣವೇ ತಮ್ಮ ಬ್ರೌಸರ್ ಅನ್ನು 102.0.5005.115 ನೂತನ ಆವೃತ್ತಿಗೆ ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ.
ನೀವು ಗೂಗಲ್ ಕ್ರೋಮ್ ಬಳಕೆದಾರರಾಗಿದ್ದಲ್ಲಿ ಆದಷ್ಟು ಬೇಗ ನಿಮ್ಮ ಬ್ರೌಸರ್ ಅನ್ನು ಹೊಸ ಆವೃತ್ತಿಗೆ ಅಪ್ಡೇಟ್ ಮಾಡಿ. ಯಾಕಂದ್ರೆ ಹಿಂದಿನ ಆವೃತ್ತಿಯ ಗೂಗಲ್ ಕ್ರೋಮ್ನಲ್ಲಿ (Google Chrome) ಅಪಾಯಕಾರಿಯಾದ ದೋಷಗಳು ಕಂಡುಬಂದಿರುವ ಬಗ್ಗೆ ವರಿಯಾಗಿದೆ. ಹೀಗಾಗಿ ಕ್ರೋಮ್ ಬಳಕೆ ಮಾಡುವವರು ತಕ್ಷಣವೇ ತಮ್ಮ ಬ್ರೌಸರ್ ಅನ್ನು 102.0.5005.115 ನೂತನ ಆವೃತ್ತಿಗೆ ಅಪ್ಡೇಟ್ ಮಾಡುವಂತೆ ಸೂಚಿಸಲಾಗಿದೆ. ಈ ಹೊಸ ಆವೃತ್ತಿ ಕಳೆದ ಜೂನ್ 9 ರಂದು ಬಿಡುಗಡೆ ಮಾಡಲಾಗಿದೆ. ಸದ್ಯ ಕಂಡು ಬಂದಿರುವ ಕೊರತೆಯ ಬಗ್ಗೆ ಗೂಗಲ್ (Google) ಕೆಲಸ ಮಾಡುತ್ತಿದ್ದು ಆದಷ್ಟು ಬೇಗ ಸರಿಪಡಿಸುವುದಾಗಿ ಹೇಳಿದೆ. ವಿಂಡೋಸ್ (Windows), ಮ್ಯಾಕ್ ಮತ್ತು ಲಿನಕ್ಸ್ನಲ್ಲಿ ಮಾತ್ರ ಕ್ರೋಮ್ ಹೊಸ ಅಪ್ಡೇಟ್ ಲಭ್ಯವಿದೆ. ಮುಂದಿನ ವಾರದಲ್ಲಿ ಎಲ್ಲ ಬಳಕೆದಾರರಿಗೆ ನೂತನ ಆವೃತ್ತಿ ಸಿಗಲಿದೆಯಂತೆ.
ಗೂಗಲ್ ಕ್ರೋಮ್ ಅತ್ಯಂತ ಪ್ರಸಿದ್ಧ ವೆಬ್ ಬ್ರೌಸರ್ ಆಗಿದೆ. ವಿಶ್ವದಲ್ಲಿ 2.6 ಬಿಲಿಯನ್ಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಹೀಗಾಗಿ, ಹ್ಯಾಕರ್ಸ್‌ಗೆ ಇದು ದೊಡ್ಡ ಟಾರ್ಗೆಟ್. ಬಹಳ ಮಂದಿ ವೈಯಕ್ತಿಕವಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಲ್ಲಿ ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಬಹಳಷ್ಟು ಪಾಸ್‌ವರ್ಡ್‌ಗಳನ್ನ ಆಟೊಸೇವ್ ಮಾಡಿರುತ್ತಾರೆ. ಈ ಪಾಸ್‌ವರ್ಡ್‌ಗಳನ್ನ ದೋಚಲು ಹ್ಯಾಕರ್ಸ್ ಅಥವಾ ವಂಚಕರು ಬಹಳ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ವಿವಿಧ ರೀತಿಯಲ್ಲಿ ಬಳಕೆದಾರರ ಮಾಹಿತಿ ಕದಿಯಲು ಪ್ರಯತ್ನಿಸುತ್ತಿರುತ್ತಾರೆ. ಇದಕ್ಕಾಗಿ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಮಾಡುವುದು ಮುಖ್ಯ.
Best Smartphones: 30,000 ರೂ. ಒಳಗಿನ ಈ ಐದು ಸ್ಮಾರ್ಟ್ಫೋನ್ ಖರೀದಿಸಲು ಮುಗಿಬೀಳುತ್ತಿದ್ದಾರೆ ಜನರು
ಇತ್ತೀಚೆಗಷ್ಟೆ ಗೂಗಲ್ ಕ್ರೋಮ್ ಮತ್ತು ಮೊಜಿಲ್ಲಾದಲ್ಲಿ ಭದ್ರತಾ ಲೋಪವೊಂದು ಕಂಡುಬಂದ ಬಗ್ಗೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಎಚ್ಚರಿಕೆ ನೀಡಿತ್ತು. CVE-2021-43527, CVE-2022-1489, CVE-2022-1633, CVE-202-1636, CVE-2022-1859, CVE-2022-1867, ಮತ್ತು C20 Google ನಿಂದ ಹಲವು ದೋಷಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಎಲ್ಲಾ ದೋಷಗಳನ್ನು ಟೆಕ್ ದೈತ್ಯ ಗೂಗಲ್ ಕೂಡ ಒಪ್ಪಿಕೊಂಡಿದೆ. ಇನ್ನು ಈ ದೋಷಗಳಿಂದ ರಕ್ಷಿಸಲು ಕ್ರೋಮ್ OS ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ಗೂಗಲ್ ಕಂಪನಿ ಬಳಕೆದಾರರಿಗೆ ಹೇಳಿದೆ. ಈ ದುರ್ಬಲತೆಗಳು ಬಳಕೆದಾರರ ಡೇಟಾವನ್ನು ಹ್ಯಾಕರ್‌ಗಳಿಗೆ ಸಿಗುವಂತೆ ಮಾಡಲಿದೆ ಎಂದು ಹೇಳಿದೆ.
ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವುದು ಹೇಗೆ?:
- ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ.
- ಬಲ ತುದಿ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಆಯ್ಕೆ (Customize and control Google Chrome) ಕ್ಲಿಕ್ ಮಾಡಿ.
- ನಂತರ ಸೆಟ್ಟಿಂಗ್ಸ್ ತೆರೆಯಿರಿ.
- ಬಳಿಕ, ಅಬೌಟ್ ಕ್ರೋಮ್ ಓಪನ್ ಮಾಡಿ.
- ಅಲ್ಲಿ ಇರುವ ಗೂಗಲ್ ಕ್ರೋಮ್ ಅಪ್‌ಡೇಟ್ ನೌ ಎಂದಿರುವುದನ್ನು ಕ್ಲಿಕ್ ಮಾಡಿ.
- ಅಪ್‌ಡೇಟ್ ಆದ ಬಳಿಕ, ರೀಲಾಂಚ್ ಮಾಡಿ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ