Oppo K10 5G: 17,499 ರೂ.: ಈ ಅದ್ಭುತ ಕ್ಯಾಮೆರಾ ಫೋನ್ ಖರೀದಿಸಿದ್ರೆ ನೀವು ಫಿದಾ ಆಗೋದು ಗ್ಯಾರೆಂಟಿ
48 ಮೆಗಾಪಿಕ್ಸೆಲ್ ಸೆನ್ಸಾರ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿರುವ ಒಪ್ಪೋ K10 5G ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ಮೊದಲ ಸೇಲ್ ಪ್ರಾರಂಭಿಸಿದೆ. ಹಾಗಾದ್ರೆ ಇದರ ವಿಶೇಷತೆ ಏನು?, ಆಫರ್ಗಳು ಏನೇನಿದೆ ಎಂಬುದನ್ನು ನೋಡೋಣ.
ಭಾರತದಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್ಗಳ (Best Camera Phone) ಬಿಡುಗಡೆ ಹೆಚ್ಚಾಗುತ್ತಿದೆ. ಅದುಕೂಡ ಕಡಿಮೆ ಬೆಲೆಗೆ ಎಂಬುದು ವಿಶೇಷ. ಇದರಲ್ಲಿ ಚೀನಾ ಮೂಲದ ಪ್ರಸಿದ್ಧ ಒಪ್ಪೋ (Oppo) ಕಂಪನಿ ಎತ್ತಿದ ಕೈ. ತನ್ನ ರೆನೋ ಸರಣಿಯಲ್ಲಿ ಮಾತ್ರವಲ್ಲದೆ K ಸರಣಿಯಲ್ಲಿ ಕೂಡ ಅತ್ಯುತ್ತಮ ಕ್ಯಾಮೆರಾ ಫೋನ್ಗಳನ್ನು ಒಪ್ಪೋ ಪರಿಚಯಿಸುತ್ತಿದೆ. ಈ ಪೈಕಿ ಕೆಲವು ದಿನಗಳ ಹಿಂದೆಯಷ್ಟೆ ಒಪ್ಪೋ ತನ್ನ K-ಸರಣಿ ಅಡಿಯಲ್ಲಿ ಹೊಸ ಒಪ್ಪೋ ಕೆ10 5ಜಿ (Oppo K10 5G) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡಿತ್ತು. 48 ಮೆಗಾಪಿಕ್ಸೆಲ್ ಸೆನ್ಸಾರ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಜನಪ್ರಿಯ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಮೊದಲ ಸೇಲ್ ಪ್ರಾರಂಭಿಸಿದೆ. ಹಾಗಾದ್ರೆ ಇದರ ವಿಶೇಷತೆ ಏನು?, ಆಫರ್ಗಳು ಏನೇನಿದೆ ಎಂಬುದನ್ನು ನೋಡೋಣ.
- ಭಾರತದಲ್ಲಿ ಒಪ್ಪೋ K10 5G ಸದ್ಯಕ್ಕೆ ಕೇವಲ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 8GB RAM ಮತ್ತು 128GB ಸ್ಟೋರೆಜ್ ಆಯ್ಕೆಯ ಬೆಲೆ ಕೇವಲ 17,499 ರೂ. ಆಗಿದೆ.
- ಈ ಫೋನ್ ಅನ್ನು ಖರೀದಿಸುವ ಗ್ರಾಹಕರು 3 ತಿಂಗಳವರೆಗೆ ಯಾವುದೇ ವೆಚ್ಚದ EMI ಅಥವಾ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳಲ್ಲಿ 1,500 ರೂ. ಗಳ ಫ್ಲಾಟ್ ರಿಯಾಯಿತಿಯಂತಹ ಮಾರಾಟದ ಕೊಡುಗೆಗಳನ್ನು ಪಡೆಯಬಹುದು.
- ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ಸಹ ಫ್ಲಾಟ್ ರಿಯಾಯಿತಿ ಕೊಡುಗೆಯನ್ನು ಪಡೆಯಬಹುದಾಗಿದೆ. ಈ ಫೋನ್ ಮಿಡ್ನೈಟ್ ಬ್ಲ್ಯಾಕ್ ಮತ್ತು ಓಷನ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.
- ಒಪ್ಪೋ K10 5G ಸ್ಮಾರ್ಟ್‌ಫೋನ್ 1,080 x 1920 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಒಳಗೊಂಡಿದೆ.
- ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನಲ್ಲಿ ಜೊತೆಗೆ ಕಲರ್‌ಓಎಸ್ 12.1 ಕಾರ್ಯ ನಿರ್ವಹಿಸುತ್ತದೆ.
- ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 8 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ವನ್ನು ಸಹ ಒಳಗೊಂಡಿದೆ.
- ಒಪ್ಪೋ K10 5G ಸ್ಮಾರ್ಟ್‌ಫೋನ್ 33W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುವ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ನೀಡಲಾಗಿದೆ.
ಇದನ್ನೂ ಓದಿ
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:12 am, Thu, 16 June 22