AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Internet Explorer: 27 ವರ್ಷಗಳ ಬಳಿಕ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸ್ಥಗಿತ..!

Microsofts' Internet Explorer: 27 ವರ್ಷಗಳ ಬಳಿಕ ಎಕ್ಸ್‌ಪ್ಲೋರರ್ ಸೇವೆ ಅಂತ್ಯಗೊಳ್ಳುತ್ತಿದ್ದು, 90 ರ ದಶಕದಲ್ಲಿ ಕಂಪ್ಯೂಟ್ ಬಳಸಿದವರು ಎಕ್ಸ್‌ಪ್ಲೋರರ್ ಜೊತೆಗಿನ ತಮ್ಮ ನೆನಪುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Internet Explorer: 27 ವರ್ಷಗಳ ಬಳಿಕ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸ್ಥಗಿತ..!
Internet Explorer
TV9 Web
| Edited By: |

Updated on: Jun 15, 2022 | 6:07 PM

Share

GoodBye Internet Explorer: ಮೈಕ್ರೋಸಾಫ್ಟ್‌ನ ಜನಪ್ರಿಯ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್‌ಪ್ಲೋರರ್ (Internet Explorer) ಇಂದಿನಿಂದ (ಜೂನ್ 15) ಸ್ಥಗಿತಗೊಳ್ಳಲಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ಅನ್ನು 27 ವರ್ಷಗಳ ಹಿಂದೆ, ಅಂದರೆ 1995 ರಲ್ಲಿ ವಿಂಡೋಸ್ 95 ಪಿಸಿಯಲ್ಲಿ ಪ್ರಾರಂಭಿಸಲಾಗಿತ್ತು. ಆರಂಭದಲ್ಲಿ, ಬಳಕೆದಾರರು ಇದನ್ನು ಬಳಸಲು ಹಣವನ್ನು ಪಾವತಿಸಬೇಕಾಗಿತ್ತು. ಆದರೆ ಕಾಲಕ್ರಮೇಣ ಮೈಕ್ರೋಸಾಫ್ಟ್​ ಎಕ್ಸ್‌ಪ್ಲೋರರ್ ಸೇವೆಯನ್ನು ಉಚಿತಗೊಳಿಸಿತ್ತು. ಇದೀಗ 27 ವರ್ಷಗಳ ಬಳಿಕ ಎಕ್ಸ್‌ಪ್ಲೋರರ್ ಸೇವೆ ಅಂತ್ಯಗೊಳ್ಳುತ್ತಿದ್ದು, 90 ರ ದಶಕದಲ್ಲಿ ಕಂಪ್ಯೂಟ್ ಬಳಸಿದವರು ಎಕ್ಸ್‌ಪ್ಲೋರರ್ ಜೊತೆಗಿನ ತಮ್ಮ ನೆನಪುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರ ಜೊತೆ ಅನೇಕ ಮೀಮ್ಸ್ ಕೂಡ ಹರಿದಾಡುತ್ತಿರುವುದು ವಿಶೇಷ.

ನ್ಯೂ ಜನರೇಷನ್​ಗೆ ಮೈಕ್ರೋಸಾಫ್ಟ್​ ಎಡ್ಜ್‌: ಇದೀಗ ಮೈಕ್ರೋಸಾಫ್ಟ್​ ಅಪ್ಡೇಟೆಡ್ ವೆಬ್ ಬ್ರೌಸರ್ ಆಗಿ ಮೈಕ್ರೋಸಾಫ್ಟ್ ಎಡ್ಜ್​ ಅನ್ನು ಪರಿಚಯಿಸಿದೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ ಬಳಸುವ ಬಳಕೆದಾರರು ಈಗ ಮೈಕ್ರೋಸಾಫ್ಟ್ ಎಡ್ಜ್‌ನಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಅಲ್ಲದೆ ಎಡ್ಜ್​ ಈ ಹಿಂದಿಕ್ಕಿಂತ ವೇಗವಾಗಿ ಮತ್ತು ಹೆಚ್ಚು ಸುರಕ್ಷಿತವಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ.

ವಿಶೇಷವೆಂದರೆ ಮೈಕ್ರೋಸಾಫ್ಟ್ ಎಡ್ಜ್‌ನಲ್ಲಿ ಬಳಕೆದಾರರು ಇಂಟರ್ನೆಟ್ ಎಕ್ಸ್‌ಪ್ಲೋರರ್ ಮೋಡ್ ಅನ್ನು ಪಡೆಯಬಹುದು. ಇದರಲ್ಲಿ ಬಳಕೆದಾರರು ಎಕ್ಸ್‌ಪ್ಲೋರರ್‌ನಲ್ಲಿ ಅತ್ಯುತ್ತಮ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನೇರವಾಗಿ ಬಳಸಬಹುದು. ಹೀಗಾಗಿ ಇಂಟರ್ನೆಟ್ ಎಕ್ಸ್‌ಪ್ಲೋರರ್​ಗೆ ಹೊಂದಿಕೊಂಡಿರುವ ಹಿರಿಯ ಕಂಪ್ಯೂಟ್ ಬಳಕೆದಾರರು ಮೈಕ್ರೋಸಾಫ್ಟ್ ಎಡ್ಜ್​ನಲ್ಲಿ ಅದೇ ಸೇವೆಯನ್ನು ಪಡೆಯಬಹುದು ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ