5G Spectrum: ದೇಶದ 13 ನಗರಗಳಲ್ಲಿ ಸಿಗಲಿದೆ 5G ಇಂಟರ್​​ನೆಟ್ ಸೇವೆ..!

5G Spectrum Auction: ಈ ಬಾರಿ ಹರಾಜಿಗಾಗಿ ಮುಂಗಡ ಪಾವತಿ ಮಾಡಬೇಕಾಗಿಲ್ಲ ಎಂದು ಸರ್ಕಾರ ತಿಳಿಸಿದೆ. ಟೆಲಿಕಾಂ ವಲಯದಲ್ಲಿ ಸುಧಾರಣೆಗಳ ವೇಗವನ್ನು ಮುಂದುವರೆಸಲು, ವ್ಯವಹಾರವನ್ನು ಸುಲಭಗೊಳಿಸಲು ಸ್ಪೆಕ್ಟ್ರಮ್ ಹರಾಜಿಗೆ ಕ್ಯಾಬಿನೆಟ್ ಕೆಲವು ಷರತ್ತುಗಳನ್ನು ಸಡಿಲಿಸಿದೆ.

5G Spectrum: ದೇಶದ 13 ನಗರಗಳಲ್ಲಿ ಸಿಗಲಿದೆ 5G ಇಂಟರ್​​ನೆಟ್ ಸೇವೆ..!
5G Spectrum
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 15, 2022 | 3:29 PM

ಭಾರತದಲ್ಲಿ 5ಜಿ ತರಂಗಾಂತರ (5G Spectrum) ಹರಾಜಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಪ್ರಸ್ತುತ ಮಾಹಿತಿ ಪ್ರಕಾರ 5G ಸ್ಪೆಕ್ಟ್ರಮ್​ ಹರಾಜು ಜುಲೈ 26, 2022 ರಂದು ನಡೆಯಲಿದ್ದು, ಈ ಮೂಲಕ ದೇಶದಲ್ಲಿ ವೇಗದ ಇಂಟರ್​ನೆಟ್​ ಸೇವೆಯನ್ನು ಒದಗಿಸಲು ಸರ್ಕಾರ ಮುಂದಾಗಿದೆ. 20 ವರ್ಷಗಳ ಮಾನ್ಯತಾ ಅವಧಿಯೊಂದಿಗೆ 72 GHz ಸ್ಪೆಕ್ಟ್ರಮ್​ಗಾಗಿ ಹರಾಜು ನಡೆಯಲಿದ್ದು, ಇದರ ಜೊತೆಗೆ ವಿವಿಧ ಕಡಿಮೆ ಬ್ಯಾಂಡ್​ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ ಬ್ಯಾಂಡ್​ (3300 MHz) ಮತ್ತು ಹೆಚ್ಚಿನ (26 GHz) ಬ್ಯಾಂಡ್‌ಗಳ ಸ್ಪೆಕ್ಟ್ರಮ್​ಗೂ ಕೂಡ ಹರಾಜು ನಡೆಯಲಿದೆ. ವಿಶೇಷ ಎಂದರೆ ಈ ಹರಾಜಿನ ಬಳಿಕ ಭಾರತದಲ್ಲಿ 5ಜಿ ಸೇವೆ ಸಿಗಲಿದೆ. ಅಂದರೆ ಪ್ರಸ್ತುತ 4G ವೇಗಗಿಂತ 10 ಪಟ್ಟು ಹೆಚ್ಚಿನ ವೇಗದಲ್ಲಿ 5ಜಿ ಇಂಟರ್​ನೆಟ್​ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಸರ್ಕಾರ ಹೇಳಿಕೊಂಡಿದೆ.

ದೂರಸಂಪರ್ಕ ಇಲಾಖೆ (DoT) ಈ ಹಿಂದೆ 2022 ರಲ್ಲಿ ಭಾರತದಲ್ಲಿ 5G ಇಂಟರ್ನೆಟ್ ಸೇವೆಗಳನ್ನು ಪರಿಚಯಿಸಲಾಗುವುದು ಎಂದು ಹೇಳಿತ್ತು. ಇದೀಗ 5ಜಿ ಸ್ಪೆಕ್ಟ್ರಮ್ ಹರಾಜಿನ ಅನುಮೋದನೆ ಬೆನ್ನಲ್ಲೇ, ಯಾವ ನಗರದಲ್ಲಿ ವೇಗದ ಇಂಟರ್​ನೆಟ್ ಸೇವೆ ದೊರೆಯಲಿದೆ ಎಂಬ ಕುತೂಹಲ ಮೂಡಿದೆ. ಇದಕ್ಕಾಗಿ ಈಗಾಗಲೇ 13 ನಗರಗಳನ್ನು ಆಯ್ಕೆ ಮಾಡಲಾಗಿದೆ.

ದೂರಸಂಪರ್ಕ ಇಲಾಖೆ (DoT) ಮಾಹಿತಿ ಪ್ರಕಾರ, ದೇಶದ ಪ್ರಮುಖ 13 ನಗರದಲ್ಲಿ ಆರಂಭದಲ್ಲಿ 5ಜಿ ಸೇವೆ ದೊರೆಯಲಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಬೆಂಗಳೂರು ಕೂಡ ಇರುವುದು ವಿಶೇಷ. ಅದರಂತೆ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಇದೇ ವರ್ಷ 5ಜಿ ಸೇವೆ ಲಭಿಸುವ ಸಾಧ್ಯತೆಯಿದೆ.

ಇದನ್ನೂ ಓದಿ
Image
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Image
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಭಾರತದಲ್ಲಿ ಯಾವ ಟೆಲಿಕಾಂ ಆಪರೇಟರ್ ಕಂಪೆನಿ ಮೊದಲು 5G ಸೇವೆಗಳನ್ನು ನೀಡಲಿದೆ ಎಂಬುದು ಇನ್ನೂ ಕೂಡ ಖಚಿತವಾಗಿಲ್ಲ. ಇದಾಗ್ಯೂ ಎಲ್ಲಾ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ Jio, Airtel ಮತ್ತು Vi (Vodafone Idea) ಈಗಾಗಲೇ ಈ ನಗರಗಳಲ್ಲಿ ಪ್ರಾಯೋಗಿಕ ಸೈಟ್‌ಗಳನ್ನು ಸ್ಥಾಪಿಸಿವೆ.

ಇನ್ನು ಈ ಬಾರಿ ಹರಾಜಿಗಾಗಿ ಮುಂಗಡ ಪಾವತಿ ಮಾಡಬೇಕಾಗಿಲ್ಲ ಎಂದು ಸರ್ಕಾರ ತಿಳಿಸಿದೆ. ಟೆಲಿಕಾಂ ವಲಯದಲ್ಲಿ ಸುಧಾರಣೆಗಳ ವೇಗವನ್ನು ಮುಂದುವರೆಸಲು, ವ್ಯವಹಾರವನ್ನು ಸುಲಭಗೊಳಿಸಲು ಸ್ಪೆಕ್ಟ್ರಮ್ ಹರಾಜಿಗೆ ಕ್ಯಾಬಿನೆಟ್ ಕೆಲವು ಷರತ್ತುಗಳನ್ನು ಸಡಿಲಿಸಿದೆ. ಈ ಬಾರಿ ಯಶಸ್ವಿ ಬಿಡ್​ದಾರರು ಮುಂಗಡ ಪಾವತಿ ಮಾಡುವ ಅಗತ್ಯವಿಲ್ಲ. ಇದಲ್ಲದೆ, ಅವರು ಸ್ಪೆಕ್ಟ್ರಮ್ ಮೊತ್ತವನ್ನು 20 ಸಮಾನ ಕಂತುಗಳಲ್ಲಿ ಪಾವತಿಸಬಹುದು. ಹಾಗೆಯೇ ಬಿಡ್ ಮಾಡಿದವರಿಗೆ 10 ವರ್ಷಗಳ ನಂತರ ಸ್ಪೆಕ್ಟ್ರಮ್ ಅನ್ನು ಒಪ್ಪಿಸುವ ಆಯ್ಕೆಯನ್ನು ಸಹ ನೀಡಲಾಗುತ್ತದೆ.

5G ಸೇವೆಗಳು ಹೊಸ ಯುಗದ ವ್ಯವಹಾರಗಳ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಅಲ್ಲದೆ ಉದ್ಯಮಗಳಿಗೆ ಹೆಚ್ಚುವರಿ ಆದಾಯ ತಂದುಕೊಡಲಿದೆ. 5G ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಹೊರತರಲು ಟೆಲಿಕಾಂ ಸೇವಾ ಪೂರೈಕೆದಾರರು ಮಧ್ಯಮ ಮತ್ತು ಹೆಚ್ಚಿನ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಇದು ಪ್ರಸ್ತುತ 4G ಸೇವೆಗಳಿಗಿಂತ ಸುಮಾರು 10 ಪಟ್ಟು ವೇಗವಾಗಿರುತ್ತದೆ. ದೇಶದ ಮೂರು ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರರು – ವೊಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜಿಯೋ ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ