Xiaomi 11X Pro: 108MP ಕ್ಯಾಮೆರಾದ ಈ ಸ್ಮಾರ್ಟ್‌ಫೋನ್ ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್: ಮಿಸ್ ಮಾಡ್ಬೇಡಿ
ಭಾರತದ ಮಾರುಕಟ್ಟೆಯಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ವರೆಗಿನ ಫೋನ್ಗಳು ಚಾಲ್ತಿಯಲ್ಲಿವೆ. ಇದರಲ್ಲಿ ಪ್ರಸಿದ್ಧ ಶವೋಮಿ (Xiaomi) ಕಂಪನಿಯ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್ ಕೂಡ ಒಂದು.
ಭಾರತದಲ್ಲಿ ಕ್ಯಾಮೆರಾ ಫೋನ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕಾಗಿಯೆ ಶವೋಮಿ, ಸ್ಯಾಮ್ಸಂಗ್, ಒನ್ಪ್ಲಸ್ ನಂತಹ ಕಂಪನಿಗಳು ಕ್ಯಾಮೆರಾಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಅದುಕೂಡ ಈಗೀಗ ಬಜೆಟ್ ಬೆಲೆಗೆ ಎಂಬುದು ವಿಶೇಷ. ಸದ್ಯ ಭಾರತದ ಮಾರುಕಟ್ಟೆಯಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ವರೆಗಿನ ಫೋನ್ಗಳು ಚಾಲ್ತಿಯಲ್ಲಿವೆ. ಇದರಲ್ಲಿ ಪ್ರಸಿದ್ಧ ಶವೋಮಿ (Xiaomi) ಕಂಪನಿಯ ಎಂಐ 11ಎಕ್ಸ್ ಪ್ರೊ (Mi 11X Pro) ಸ್ಮಾರ್ಟ್‌ಫೋನ್ ಕೂಡ ಒಂದು. ಇದೀಗ ಅಚ್ಚರಿ ಎಂಬಂತೆ ಈ ಸ್ಮಾರ್ಟ್‌ಫೋನ್ ಬಂಪರ್ ಡಿಸ್ಕೌಂಟ್ನಲ್ಲಿ ಸಿಗುತ್ತಿದೆ. 108 ಮೆಗಾಫಿಕ್ಸೆಲ್ ಕ್ಯಾಮೆರಾ, ಭರ್ಜರಿ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್ ಸೇರಿದಂತೆ ಅನೇಕ ಫೀಚರ್ಸ್ನಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ (Smartphone) ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಹಾಗಾದ್ರೆ ಏನಿದೆ ಆಫರ್?, ಇದರ ಫೀಚರ್ಸ್ನಲ್ಲಿ ಏನೇನಿದೆ ಎಂಬುದನ್ನು ನೋಡೋಣ
- ಎಂಐ 11X ಪ್ರೊ ಫೋನ್ ಮೂಲಬೆಲೆ 39,999 ರೂ. ಆಗಿದೆ. ಇದೀಗ ಅಮೆಜಾನ್‌ನಲ್ಲಿ ಈ ಫೋನ್ ಕೇವಲ 29,999 ರೂ. ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಎಸ್‌ಬಿಐ ಬ್ಯಾಂಕ್ ಕಾರ್ಡ್ ಆಫರ್ ನಲ್ಲಿ 1,000 ರೂ. ಗಳ ರಿಯಾಯಿತಿ ಸಿಗುತ್ತದೆ. ಈ ಕೊಡುಗೆ ಮೂಲಕ ಒಟ್ಟು 11,000 ರೂ. ರಿಯಾಯಿತಿ ಲಭ್ಯವಾಗುತ್ತದೆ.
- ಈ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಹೆಚ್‌ಡಿಆರ್ 10 + ಬೆಂಬಲ ನೀಡಲಾಗಿದೆ. ಸಿನಿಮಾ, ಯೂಟ್ಯೂಬ್ ವೀಡಿಯೊಗಳು ವೀಕ್ಷಣೆ ಮಾಡಲು ಪೂರಕವೆನಿಸಿದೆ.
- ಬಲಿಷ್ಠವಾಗಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
- ಇನ್ನು ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ.
- ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಪೋರ್ಟ್ರೇಟ್ ಮೋಡ್, ನೈಟ್ ಮೋಡ್, 30 ಎಫ್‌ಪಿಎಸ್‌ನಲ್ಲಿ 4 ಕೆ ವೀಡಿಯೊಗಳು, ಬ್ಯೂಟಿ ಮೋಡ್, ವ್ಲಾಗ್ ಮೋಡ್ ಆಯ್ಕೆಗಳನ್ನು ನೀಡಲಾಗಿದೆ.
- ಎಂಐ 11X ಪ್ರೊ ಸ್ಮಾರ್ಟ್‌ಫೋನ್ 4,520mAh ಸಾಮರ್ಥ್ಯದ ಅತ್ಯುತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
- ಈ ಸ್ಮಾರ್ಟ್‌ಫೋನ್ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ, ವೈ-ಫೈ 6, ಜಿಪಿಎಸ್, ಎಜಿಪಿಎಸ್, ನ್ಯಾವಿಕ್ ಬೆಂಬಲ, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲ ಪಡೆದುಕೊಂಡಿದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Thu, 16 June 22