Tech Tips: ಗೂಗಲ್ನಲ್ಲಿ ನಿಮ್ಮ ಹೆಸರು ಹಾಕಿ ಸರ್ಚ್ ಮಾಡಿದ್ರೆ ಫೋಟೋ ಬರಬೇಕಾ: ಹಾಗಿದ್ರೆ ಹೀಗೆ ಮಾಡಿ
Google Search: ಗೂಗಲ್ನಲ್ಲಿ ನಮ್ಮ ಹೆಸರು ಹಾಕಿ ಸರ್ಚ್ ಮಾಡಿದರೆ ನಮ್ಮ ಫೋಟೋ ಕಾಣುವಂತೆ ಮಾಡುವುದು ಹೇಗೆ?, ಇದಕ್ಕೊಂದು ಟ್ರಿಕ್ಸ್ ಇದೆ. ಇದಕ್ಕಾಗಿ ಮೊದಲು ನೀವು ಫೋಟೋಥಿಂಗ್ (Photothing) ಎಂಬ ವೆಬ್‌ಸೈಟ್‌ಗೆ ಹೋಗಬೇಕು.
ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್. ನಮಗೆ ಏನೇ ಬೇಕಿದ್ದರೂ, ಯಾವುದೇ ವಿಷಯದ ಬಗ್ಗೆ ಗೊಂದಲವಿದ್ದರೂ ಥಟ್ ಅಂತ ಸರ್ಚ್ ಮಾಡೋದು ಗೂಗಲ್ನಲ್ಲಿ. ಕ್ರಿಕೆಟರ್ಸ್, ಹೀರೋ, ಹೀರೋಯಿನ್ಗಳ ಹೆಸರು ಹಾಕಿ ಗೂಗಲ್ನಲ್ಲಿ ಸರ್ಚ್ ಮಾಡಿದರೆ ಕ್ಷಣಾರ್ಧದಲ್ಲಿ ಅವರ ಫೋಟೋ ಲೆಕ್ಕವಿಲ್ಲದಷ್ಟು ಬಂದು ಬೀಳುತ್ತದೆ. ಆದರೆ, ನಮ್ಮ ಹೆಸರು ಹಾಕಿದರೆ ಒಂದು ಫೋಟೋ ಕೂಡ ಇದರಲ್ಲಿ ಕಾಣಿಸುವುದಿಲ್ಲ. ಹಾಗಾದ್ರೆ ಗೂಗಲ್ನಲ್ಲಿ ನಮ್ಮ ಹೆಸರು ಹಾಕಿ ಸರ್ಚ್ ಮಾಡಿದರೆ ನಮ್ಮ ಫೋಟೋ ಕಾಣುವಂತೆ ಮಾಡುವುದು ಹೇಗೆ?, ಇದಕ್ಕೊಂದು ಟ್ರಿಕ್ಸ್ ಇದೆ. ಅನೇಕರಿಗೆ ನನ್ನ ಹೆಸರು ಸರ್ಚ್ ಮಾಡಿದರೆ ಫೋಟೋ ಗೂಗಲ್ನಲ್ಲಿ ಕಾಣಿಸಬೇಕು ಎಂಬ ಆಸೆ ಇರುತ್ತದೆ. ಅಂತವರಿಗೆ ಇದು ಸಹಕಾರಿ ಆಗಲಿದೆ. ನಿಮ್ಮ ಚಿತ್ರ ಗೂಗಲ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದಾದರೆ ನೀವು ಏನು ಮಾಡಬೇಕು?. ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ನೋಡಿ.
ಗೂಗಲ್‌ನಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಿದರೆ ನಿಮ್ಮ ಫೋಟೋ ಕಾಣಿಸಿಕೊಳ್ಳಬೇಕು ಎಂದರೆ ನೀವು ಮೊದಲು ಫೋಟೋಥಿಂಗ್ (Photothing) ಎಂಬ ವೆಬ್‌ಸೈಟ್‌ಗೆ ಹೋಗಬೇಕು. ಈ ವೆಬ್‌ಸೈಟ್ ತೆರೆದು ನಿಮ್ಮ ಭಾವಚಿತ್ರವನ್ನು ಇದರಲ್ಲಿ ಗೂಗಲ್‌ಗೆ ‘ಆಡ್’ ಮಾಡಿದರೆ, ಗೂಗಲ್‌ನಲ್ಲಿ ನೀವು ಅಪ್‌ಲೋಡ್ ಮಾಡಿದ ಫೊಟೋ ಕಾಣಿಸಿಕೊಳ್ಳುತ್ತದೆ. ಆದರೆ, ಇದಕ್ಕೂ ಮುನ್ನ ನೀವು ಕೆಲ ಕೆಲಸಗಳನ್ನು ಮಾಡಬೇಕು. ಮೊದಲಿಗೆ ಈ ವೆಬ್‌ಸೈಟ್‌ಗೆ ನೀವು ರಿಜಿಸ್ಟರ್ ಆಗಬೇಕು. ನಿಮ್ಮ ಇ ಮೇಲ್ ಅಡ್ರೆಸ್ ಅನ್ನು ನೀಡಿ ವೆಬ್‌ಸೈಟ್ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿದ ನಂತರ ಕೆಳಗೆ “JOIN” ಎಂಬ ಆಯ್ಕೆ ಕಾಣಿಸುತ್ತದೆ, ಅದನ್ನು ಒತ್ತಿ ಅಕೌಂಟ್ ಕ್ರಿಯೇಟ್ ಮಾಡಿ.
WhatsApp: ವಾಟ್ಸ್ಆ್ಯಪ್ನಲ್ಲಿ ಬಂದಿದೆ ಹೊಸ ಫೀಚರ್: ಈಗ ಡಿಪಿ, ಲಾಸ್ಟ್ ಸೀನ್ ಕೆಲವರಿಗೆ ಮಾತ್ರ ಕಾಣುವಂತೆ ಮಾಡಿ
ಲಾಗಿನ್ ಆದ ನಂತರ ವೆಬ್‌ಸೈಟ್ ಹೋಮ್ ಪೇಜ್ ತೆರೆಯುತ್ತದೆ. ಅಲ್ಲಿ ಹೋಮ್ ಬಟನ್ ಪಕ್ಕದಲ್ಲಿ ಕಾಣಿಸುವ ಅಪ್‌ಲೋಡ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ “ಚೂಸ್ ಪೈಲ್” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಬಳಿ ಇರುವ ಅಂದಾವಾದ ಪೋಟೋವನ್ನು ಸೆಲೆಕ್ಟ್ ಮಾಡಿಕೊಂಡು ‘ಓಪನ್’ ಎಂದು ಕ್ಲಿಕ್ ಮಾಡಿ. ನಂತರ ನಿಮ್ಮ ಪೋಟೋ ವೆಬ್‌ಸೈಟ್ ಸೇರುತ್ತದೆ.
ಈ ಅಲ್ಲೇ ಕೆಳಗೆ ಟ್ಯಾಗ್ಸ್ ಎಂಬ ಕಾಲಮ್ ಇರುತ್ತದೆ. ಆ ಕಾಲಮ್ ಬಹಳ ಮುಖ್ಯವಾಗಿದ್ದು, ಅದರಲ್ಲಿ ನೀವು ಗೂಗಲ್‌ನಲ್ಲಿ ಹುಡುಕುವ ಹೆಸರುಗಳಲ್ಲಿ ( 3 ರಿಂದ 4 ಇರಲಿ) ಸೇರಿಸಿ. ಜೊತೆಗೆ ಅಲ್ಲಿರುವ ಡಿಸ್ಕ್ರಿಪ್ಷನ್ ಟೈಪ್ ಮಾಡಿ ಫೋಟೋ ಅಪ್‌ಲೋಡ್ ಮಾಡಿ. ನಂತರ ಟ್ಯಾಗ್ಸ್ ಕಾಲಮ್‌ನಲ್ಲಿ ನೀವು ನೀಡಿದ ಹೆಸರುಗಳನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೆ, ನಿಮ್ಮ ಪೋಟೋ ಕಾಣಿಸಿಕೊಳ್ಳುತ್ತದೆ.
ಅಂತೆಯೆ ಫೇಸ್ಬುಕ್ ಮೂಲಕವೂ ಗೂಗಲ್ನಲ್ಲಿ ನಿಮ್ಮ ಫೋಟೋ ಕಾಣಿಸುವಂತೆ ಮಾಡಬಹುದು ಎಂದರೆ ನಂಬಲೇಬೇಕು. ಹೌದು, ಇದಕ್ಕಾಗಿ ನೀವು ಎಫ್ಬಿಗೆ ಫೋಟೋ ಹಂಚಿಕೊಳ್ಳುವಾಗ ಕೆಲ ಟ್ರಿಕ್ಗಳನ್ನು ಫಾಲೋ ಮಾಡಿದರೆ ಸಾಕು. ನಾವು ಫೋಟೋ ಅಪ್ಲೋಡ್ ಮಾಡಬೇಕಾದರೆ, ಫೋಟೋಗಳಿಗೆ ಸರಿಯಾದ ಹೆಸರು ನೀಡಬೇಕು, ಉದಾಹರಣೆಗೆ ಫೋಟೋ ಹೆಸರು photo1.jpg, ಇದ್ದಾಗ ಇದರಿಂದ ಯಾವುದೇ ಉಪಯೋಗವಿಲ್ಲ. ಬದಲಾಗಿ ನಿಮ್ಮ ಹೆಸರು ರಾಜೇಶ್ ಎಂದಿದ್ದರೆ, ನಿಮ್ಮ ಫೋಟೋಗೆ Rajesh- shivamogga.jpg ಎಂದು ಹೆಸರು ನೀಡಿ ಅಪ್ಲೋಡ್ ಮಾಡಬೇಕು. ಇದು ಎರಡು ದಿನಗಳ ಒಳಗೆ ಗೂಗಲ್ನಲ್ಲಿ ಕಾಣಿಸುತ್ತದೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ