Twitter Blue Tick: ಇಂದಿನಿಂದ ಟ್ವಿಟರ್ ಬ್ಲೂಟಿಕ್ ಯಾರು ಬೇಕಾದರೂ ಪಡೆಯಬಹುದು: ಬೆಲೆ ಎಷ್ಟು ಗೊತ್ತೇ?

ಇದೀಗ ಇಂದಿನಿಂದ ಬ್ಲೂ ಟಿಕ್​ ಯೋಜನೆ ಪುನಃ ಪ್ರಾರಂಭವಾಗುತ್ತಿದೆ. ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಯಾವ ವ್ಯಕ್ತಿ ಬೇಕಾದರೂ ಖರೀದಿಸಬಹುದು. ಇದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಅಥವಾ ಕಂಪನಿಗಳು ಮತ್ತು ರಾಜಕಾರಣಿಗಳೇ ಆಗಬೇಕಂತಿಲ್ಲ.

Twitter Blue Tick: ಇಂದಿನಿಂದ ಟ್ವಿಟರ್ ಬ್ಲೂಟಿಕ್ ಯಾರು ಬೇಕಾದರೂ ಪಡೆಯಬಹುದು: ಬೆಲೆ ಎಷ್ಟು ಗೊತ್ತೇ?
ಟ್ವಿಟರ್ ಬಳಕೆದಾರರ ವೈಯಕ್ತಿಕ ವಿವರ ಸೋರಿಕೆ
Edited By:

Updated on: Dec 12, 2022 | 11:48 AM

ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು (Twitter) ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ (Elon Musk) ಇದರ ಕಾರ್ಯನಿರ್ವಹಣೆಯ ಸ್ವರೂಪದಲ್ಲಿ ಸಂಪೂರ್ಣ ಬದಲಾವಣೆ ತರುವುದರಲ್ಲಿ ನಿರತರಾಗಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಟ್ವಿಟರ್ ಇತ್ತೀಚೆಗಷ್ಟೆ ಕೆಲಸದಿಂದ ಅನೇಕರನ್ನು ವಜಾಗೊಳಿಸಿತ್ತು. ಅಲ್ಲದೆ ಇನ್ಮುಂದೆ ಟ್ವಿಟರ್​ನ ಬ್ಲೂ ಸಬ್​ಸ್ಕ್ರಿಪ್ಷನ್​ಗೆ (Twitter Verification) ಹಣ ಪಾವತಿಸಬೇಕಾದ ಆಯ್ಕೆ ಜಾರಿಗೆ ತಂದಿತ್ತು. ಆದರೆ ಬಹಳಷ್ಟು ನಕಲಿ ಖಾತೆಗಳು ಇದನ್ನು ದುರುಪಯೋಗ ಪಡಿಸಿದ್ದವು. ನಂತರ ಇದನ್ನು ಸ್ಥಗಿತ ಮಾಡಲಾಗಿತ್ತು. ಇದೀಗ ಇಂದಿನಿಂದ ಬ್ಲೂ ಟಿಕ್​ ಯೋಜನೆ ಪುನಃ ಪ್ರಾರಂಭವಾಗುತ್ತಿದೆ.

ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಯಾವ ವ್ಯಕ್ತಿ ಬೇಕಾದರೂ ಖರೀದಿಸಬಹುದು. ಇದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಅಥವಾ ಕಂಪನಿಗಳು ಮತ್ತು ರಾಜಕಾರಣಿಗಳೇ ಆಗಬೇಕಂತಿಲ್ಲ. ಓರ್ವ ಸಾಮಾನ್ಯ ವ್ಯಕ್ತಿ ಕೂಡ ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಖರೀದಿಸಲು ಎಲಾನ್ ಮಸ್ಕ್ ಅವಕಾಶ ನೀಡಿದ್ದಾರೆ. ಬ್ಲೂ ಚಂದಾದಾರಿಕೆ ವೆಬ್ ಮೂಲಕ ಬಳಕೆಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕು. ಅಂದರೆ 660 ರೂಪಾಯಿಯಷ್ಟು . ಆದರೆ ಆ್ಯಪಲ್ ಐಓಸ್ ಮೂಲಕ ತಿಂಗಳಿಗೆ 11 ಡಾಲರ್ ಪಾವತಿ ಮಾಡಬೇಕು ಎಂದು ಟ್ವಿಟರ್ ಹೇಳಿದೆ. ಅಂದರೆ 906 ರೂಪಾಯಿಯಷ್ಟು ವೆಚ್ಚವಾಗುತ್ತದೆ. ಆಪಲ್ ಬಳಕೆದಾರರಿಗೆ ಇತರರಿಗಿಂತ ಹೆಚ್ಚಿನ ಶುಲ್ಕವನ್ನು ಏಕೆ ವಿಧಿಸಲಾಗುತ್ತಿದೆ ಎಂಬುದನ್ನು ಟ್ವಿಟರ್ ವಿವರಿಸಲಿಲ್ಲ. ಆದರೆ ಆಪ್ ಸ್ಟೋರ್‌ ನಲ್ಲಿ ವಿಧಿಸಲಾದ ಶುಲ್ಕವನ್ನು ಸರಿದೂಗಿಸಲು ಕಂಪನಿಯು ಈ ಮಾರ್ಗವನ್ನು ಆಯ್ಕೆ ಮಾಡಿದೆ ಹೇಳಲಾಗಿದೆ.

Google Pixel 6a: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಬೆಲೆ ಕೇಳಿದ್ರೆ ದಂಗಾಗ್ತೀರಾ

ಇದನ್ನೂ ಓದಿ
Tech Tips: ನಿಮ್ಮ ವಾಟ್ಸ್​ಆ್ಯಪ್ ಚಾಟ್ ಬೇರೆಯವರು ಕದ್ದು ಓದುತ್ತಿರಬಹುದು: ಹೇಗೆ ತಿಳಿಯುವುದು?
Twitter down: ದೇಶಾದ್ಯಂತ ಟ್ವಿಟರ್ ಸರ್ವರ್ ಡೌನ್: ಪೇಜ್​ ಎರರ್ ಸಮಸ್ಯೆ ಎದುರಿಸಿದ ನೆಟ್ಟಿಗರು
Tech Tips: ನಿಮ್ಮ ಮೊಬೈಲ್​ನಲ್ಲಿ ಸರಿಯಾಗಿ ಸಿಗ್ನಲ್​ ಸಿಗುತ್ತಿಲ್ವಾ?: ಈ ಟ್ರಿಕ್ ಫಾಲೋ ಮಾಡಿ
Redmi Note 12 Series: ಹೊಸ ವರ್ಷದಂದು ಭಾರತಕ್ಕೆ ಅಪ್ಪಳಿಸುತ್ತಿದೆ 200MP ಕ್ಯಾಮೆರಾದ ಹೊಸ ರೆಡ್ಮಿ ಸ್ಮಾರ್ಟ್​ಫೋನ್: ಬೆಲೆ ಎಷ್ಟು?

ಟ್ವಟರ್ ಬ್ಲೂ ಚಂದಾದಾರಿಕೆ ಆಯ್ಕೆ ಪಡೆದುಕೊಂಡರೆ ಕಡಿಮೆ ಜಾಹೀರಾತುಗಳನ್ನು ಪಡೆಯಬಹುದಾಗಿದೆ. ಜೊತೆಗೆ ತುಂಬಾ ದೊಡ್ಡದಾದ ವಿಡಿಯೋಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಮತ್ತು ಅವರ ಟ್ವೀಟ್‌ಗಳನ್ನು ಹೆಚ್ಚು ಶೇರ್​ ಆಗುವಂತೆ ಮಾಡುತ್ತದೆ. ಬಳಕೆದಾರರು ಟ್ವೀಟ್​ಗಳನ್ನು ಎಡಿಟ್ ಮಾಡಲು, 1080p ವೀಡಿಯೊಗಳನ್ನು ಅಪ್‌ ಲೋಡ್ ಮಾಡಲು ಮತ್ತು ಬ್ಲೂ ಚೆಕ್‌ಮಾರ್ಕ್ ಪೋಸ್ಟ್ ಖಾತೆ ಪರಿಶೀಲನೆಯನ್ನು ಪಡೆಯಲು ಅನುಮತಿಸುವ ಈ ಸೇವೆಗೆ ಬಳಕೆದಾರರು ಚಂದಾದಾರರಾಗಬಹುದು ಎಂದು ಕಂಪನಿ ಹೇಳಿದೆ.

ಟ್ವಿಟರ್​ನಲ್ಲೂ ಲಭ್ಯವಾಗಲಿದೆ ವಿವ್ಸ್ ಕೌಂಟ್:

ಮುಂದಿನ ಕೆಲವೇ ವಾರಗಳಲ್ಲಿ ಟ್ವಿಟರ್​ನಲ್ಲಿ ವಿವ್ಸ್ ಕೌಂಟ್ ಕಾಣಿಸುವ ಹೊಸ ಫೀಚರ್ ಆರಂಭವಾಗಲಿದೆ ಎಂದು ಮೈಕ್ರೋ ಬ್ಲಾಗಿಂಗ್ ತಾಣದ ಮಾಲೀಕ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಅನೇಕ ಬಳಕೆದಾರರು ಟ್ವಿಟರ್​ ತಾಣಕ್ಕೆ ಭೇಟಿ ನೀಡಿ ಸಂದೇಶಗಳನ್ನು ಓದುತ್ತಾರೆ. ಆದರೆ ಸಂವಹನ ನಡೆಸುವುದಾಗಲೀ ಟ್ವೀಟ್ ಮಾಡುವುದಾಗಲೀ ಇಲ್ಲ. ಪ್ರತಿ ದಿನ ಟ್ವೀಟ್​ಗಳನ್ನು ಓದುವ ಅನೇಕರನ್ನು ನಾನು ಭೇಟಿಯಾಗುತ್ತೇನೆ. ಆದರೆ ಅವರೆಲ್ಲ ಟ್ವೀಟ್ ಮಾಡುವುದಿಲ್ಲ. ದಯವಿಟ್ಟು ಸಾರ್ವಜನಿಕ ಸಂವಾದಕ್ಕೆ ನೀವೂ ದನಿಗೂಡಿಸಿ ಎಂದು ಮಸ್ಕ್ ಟ್ವೀಟ್ ಮಾಡಿದ್ದರು. ಮಾಡಿರುವ ಟ್ವೀಟ್ ಅನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದು ತಿಳಿಯುವಂತಿದ್ದರೆ ಜನ ಹೆಚ್ಚೆಚ್ಚು ಟ್ವೀಟ್​ ಮಾಡಬಹುದು ಮತ್ತು ಟ್ವಿಟರ್​ನಲ್ಲಿ ಹೆಚ್ಚು ತೊಡಗಿಸಿಕೊಳ್ಳಬಹುದು ಎಂಬುದು ಮಸ್ಕ್ ಲೆಕ್ಕಾಚಾರ. ಇದಕ್ಕಾಗಿಯೇ ವಿವ್ಸ್ ಕೌಂಟ್ ತೋರಿಸುವ ಫೀಚರ್ ಆರಂಭಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:48 am, Mon, 12 December 22