Twitter down: ದೇಶಾದ್ಯಂತ ಟ್ವಿಟರ್ ಸರ್ವರ್ ಡೌನ್: ಪೇಜ್ ಎರರ್ ಸಮಸ್ಯೆ ಎದುರಿಸಿದ ನೆಟ್ಟಿಗರು
ರವಿವಾರ ಸಂಜೆ 7 ಗಂಟೆ ಸುಮಾರಿಗೆ ಭಾರತದಾದ್ಯಂತ ಟ್ವಿಟರ್ನ ಸರ್ವರ್ ಡೌನ್ ಆಗಿ, ಪೇಜ್ ಎರರ್ ಕಂಡು ಬಂದಿದೆ.
ನಿನ್ನೆ (ಡಿ.10) ವಿಶ್ವಾದ್ಯಂತ ಒಂದು ಗಂಟೆಗಳ ಕಾಲ ಜಿಮೇಲ್ ಸರ್ವರ್ ಡೌನ ಆಗಿ ಬಳೆಕೆದಾರರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಇಂದು (ಡಿ.11) ಸಂಜೆ 7 ಗಂಟೆ ಸುಮಾರಿಗೆ ಟ್ವಿಟರ್ನ (Twitter) ಸರ್ವರ್ ಡೌನ್ ಆಗಿ, ಪೇಜ್ ಎರರ್ ಕಂಡು ಬಂದಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ. Downdetector ವರದಿ ಪ್ರಕಾರ ದೇಶದಲ್ಲಿ 2,838 ಬಳಕೆದಾರರು ಪೇಜ್ ಎರರ್ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.
ಸಾಯಂಕಾಲ ಹಲವು ಬಳಕೆದಾರರು ಟ್ವಿಟರ್ ಓಪನ್ ಮಾಡಿದಾಗ ಪೇಜ್ ಎರರ್ ಎಂದು ಬಂದಿದೆ. ಆಗ ಬಳಕೆದಾರ ರಿಫ್ರೆಶ್ ಮಾಡಿದರೂ ಟೈಮ್ಲೈನ್ ರಿಫ್ರೆಶ್ ಆಗಲಿಲ್ಲ. ಹೀಗಾಗಿ ಅನೇಕ ಖಾತೆಗಳು ಅಸ್ತಿತ್ವದಲ್ಲಿಲ್ಲ ಎಂದು ತೋರಿಸಿದೆ. ಇದರಿಂದ ಬಳಕೆದಾರರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.
ಟ್ವಿಟರ್ ಕೆಲವು ಸರ್ವರ್ಗಳಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಕೆಲವು ಸರ್ವರ್ಗಳಲ್ಲಿ ಸಮಸ್ಯೆ ಕಂಡು ಬಂದಿದೆ. ಇನ್ನು ಈ ಸಮಸ್ಯೆ ಅಂಡ್ರಾಯಡ್ ಮೊಬೈಲ್ಗಳಲ್ಲಿ ಮಾತ್ರ ಕಂಡುಬಂದಿದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ವಿಪಿಎನ್ ಸಂಪರ್ಕದೊಂದಿಗೆ ಟ್ವಿಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
ಟ್ವಿಟರ್ ಸರ್ವರ್ ಡೌನ್ ಕುರಿತು ಕೆಲವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಎಲನ್ ಮಾಸ್ಕ್ ಈ ಸಮ್ಯಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆಂದು ಕಾಲೆಳೆದಿದ್ದಾರೆ.
Elon Musk trying to solve the issue ? #TwitterDown pic.twitter.com/FitpmernBN
— Keyur Rohit (@CryptoKingKeyur) December 11, 2022
ಮತ್ತೆ ಕೆಲವು ಬಳಕೆದಾರರು ಟ್ವಿಟರ್ ಡೌನ್ನಿಂದ ನಾವು ಇನ್ಸ್ಟಾಗ್ರಮ್ ರೀಲ್ಸ್ ವೀಕ್ಷಿಸುತ್ತಿದ್ದೇವೆ ಎಂದು ಟ್ವಿಟ್ ಮಾಡಿದ್ದಾರೆ.
Me watching instagram reels when twitter is down. #Twitterdown pic.twitter.com/gGhpT9BxAt
— Prayag (@theprayagtiwari) December 11, 2022
Published On - 8:26 pm, Sun, 11 December 22