Twitter Down: ಭಾರತದ ಕೆಲ ಕಡೆಗಳಲ್ಲಿ ಟ್ವಿಟರ್ ಡೌನ್: ಲಾಗಿನ್ ಮಾಡಲು ಜನರ ಪರದಾಟ

| Updated By: Vinay Bhat

Updated on: Nov 04, 2022 | 9:35 AM

ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ (Twitter) ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಡೌನ್​ಡಿಟೆಕ್ಟರ್ ಮಾಹಿತಿ ನೀಡಿದೆ.

Twitter Down: ಭಾರತದ ಕೆಲ ಕಡೆಗಳಲ್ಲಿ ಟ್ವಿಟರ್ ಡೌನ್: ಲಾಗಿನ್ ಮಾಡಲು ಜನರ ಪರದಾಟ
ಟ್ವಿಟರ್
Follow us on

ಕಳೆದ ಕೆಲವು ವಾರಗಳಿಂದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್ (WhatsApp), ಇನ್​ಸ್ಟಾಗ್ರಾಮ್ ದಿಢೀರ್ ಕಾರ್ಯನಿರ್ವಹಿಸದೆ ತೊಂದರೆಗೆ ಒಳಗಾಗಿತ್ತು. ಇದೀಗ ಟ್ವಿಟರ್ ಸರದಿ. ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ (Twitter) ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಡೌನ್​ಡಿಟೆಕ್ಟರ್ ಮಾಹಿತಿ ನೀಡಿದ್ದು, ಡೆಸ್ಕ್​ಟಾಪ್ (Desktop) ಬಳಕೆದಾರರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆಯಂತೆ. ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಸಮಸ್ಯೆ ಕಂಡುಬಂದಿದೆ.

ಅನೇಕ ಭಾಗದಲ್ಲಿ ಟ್ವಿಟರ್ ಡೌನ್ ಆಗಿದ್ದರ ಕುರಿತು ಅಲ್ಲಿನ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದರು. ಟ್ವಿಟರ್​ನಲ್ಲಿ ಪ್ರಸ್ತುತ ಟ್ವಿಟರ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಬಳಕೆದಾರರು ಮೀಮ್​ಗಳನ್ನು ಹರಿಬಿಡುತ್ತಿದ್ದು, ಟ್ವಿಟರ್ ಡೌನ್ ಆಗಿರುವುದೋ, ನಮ್ಮ ಇಂಟರ್​ನೆಟ್ಟೋ ತಿಳಿಯುತ್ತಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ.

 

ಇನ್​ಸ್ಟಾಗ್ರಾಮ್- ವಾಟ್ಸ್​ಆ್ಯಪ್ ಕೂಡ ಡೌನ್ ಆಗಿತ್ತು:

ಮೊನ್ನೆಯಷ್ಟೆ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ಕೂಡ ತಾಂತ್ರಿಕ ದೋಷವನ್ನು ಎದುರಿಸಿತ್ತು. ಇದರಿಂದ ಯಾವುದೇ ಸೂಚನೆಯಿಲ್ಲದೆ ಬಳಕೆದಾರರ ಇನ್‌ಸ್ಟಾಗ್ರಾಮ್‌ ಖಾತೆಗಳು ಏಕಾಏಕಿ ಬ್ಲಾಕ್‌ ಆಗಿದ್ದವು. ಇದರಿಂದ ಬಳಕೆದಾರರು ವರದಿ ಮಾಡಿದ್ದರು. ಈ ಸಮಸ್ಯೆ ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿನ ಬಳಕೆದಾರರ ಮೇಲೂ ಪರಿಣಾಮ ಬೀರಿದೆ. ಇದಾದ ನಂತರ ಎಚ್ಚೆತ್ತ ಮೆಟಾ ಒಡೆತನದ ಕಂಪೆನಿ ಸಮಸ್ಯೆಯನ್ನು ಬಗೆಹರಿಸಿತು. ಮೆಟಾ ಒಡೆತನದ ಪ್ಲಾಟ್‌ಫಾರ್ಮ್‌ಗಳಲ್ಲಿ ಎದುರಾಗಿರುವ ತಾಂತ್ರಿಕ ದೋಷ ಇದೇ ಮೊದಲನೇಲ್ಲ. ಕಳೆದ ವಾರ ವಾಟ್ಸ್​ಆ್ಯಪ್ ಅಪ್ಲಿಕೇಶನ್‌ ಕೂಡ ತಾಂತ್ರಿಕ ದೋಷವನ್ನು ಎದುರಿಸಿತ್ತು. ಇದರಿಂದ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್‌, ವಾಯ್ಸ್‌ ಕಾಲ್‌, ವಿಡಿಯೋ ಕಾಲ್‌ ಮಾಡುವುದಕ್ಕೆ ಕೂಡ ಸಾಧ್ಯವಾಗಿರಲಿಲ್ಲ. ಹೆಚ್ಚು ಕಡಿಮೆ ಎರಡು ಗಂಟೆಗಳ ಕಾಲ ಈ ಸಮಸ್ಯೆ ಉಂಟಾಗಿತ್ತು.

Published On - 9:22 am, Fri, 4 November 22