WhatsApp New Features: ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ WhatsApp, ಇಲ್ಲಿದೆ ನೋಡಿ

ವಾಟ್ಸಾಪ್ ಪ್ಲಾಟ್‌ಫಾರ್ಮ್ ಇನ್-ಚಾಟ್ ಪೋಲ್‌ಗಳನ್ನು ಸ್ಟೋರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 32 ವ್ಯಕ್ತಿಗಳು ಒಂದೇ ಬಾರಿ ವೀಡಿಯೊ ಕರೆ ಮಾಡಬಹುದು, 1024 ಬಳಕೆದಾರರೊಂದಿಗೆ ಗ್ರೂಪ್ ಮಾಡಿಕೊಳ್ಳುವುದು. ಇಂತಹ ಅನೇಕ ಹೊಸ ಅಪ್ಡೇಟ್​ಗಳನ್ನು ತಂದಿದೆ.

WhatsApp New Features: ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದ WhatsApp, ಇಲ್ಲಿದೆ ನೋಡಿ
WhatsApp
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 03, 2022 | 4:47 PM

ವಾಟ್ಸಪ್​ ತಿಂಗಳಿಗೊಂದು ಅಪ್ಡೇಟ್​ಗಳನ್ನು ಮಾಡುತ್ತಿದೆ. ಕೆಲವೊಂದು ಹೊಸ ವೈಶಿಷ್ಟ್ಯಗಳನ್ನು ತಿಳಿಸುತ್ತಿದೆ. ಪ್ಲಾಟ್‌ಫಾರ್ಮ್ ಒಂದು ಇನ್-ಚಾಟ್ ಪೋಲ್‌ಗಳನ್ನು ಸ್ಟೋರ್ ಮಾಡುವ ಸಾಮರ್ಥ್ಯ, ಇನ್ನೊಂದು 32 ವ್ಯಕ್ತಿಗಳು ಒಂದೇ ಬಾರಿ ವೀಡಿಯೊ ಕರೆ ಮಾಡಬಹುದು, ಮತ್ತೊಂದು 1024 ಬಳಕೆದಾರರೊಂದಿಗೆ ಗ್ರೂಪ್ ಮಾಡಿಕೊಳ್ಳುವುದು. ಇಂತಹ ಅನೇಕ ಹೊಸ ಅಪ್ಡೇಟ್​ಗಳನ್ನು ತಂದಿದೆ. ಮೆಟಾ ತಿಳಿಸಿರುವಂತೆ ಎಮೋಜಿ ಪ್ರತಿಕ್ರಿಯೆಗಳು, ದೊಡ್ಡ ದೊಡ್ಡ ಫೈಲ್​ಗಳನ್ನು ಹಂಚಿಕೊಳ್ಳಲು ಕೆಲವೊಂದು ಹೊಸ ತಂತ್ರಗಳನ್ನು ತಂದಿದೆ.

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ನಾಲ್ಕು ಹೊಸ ವಾಟ್ಸಾಪ್ ವೈಶಿಷ್ಟ್ಯಗಳನ್ನು ಘೋಷಿಸಿದ್ದಾರೆ. WhatsApp ನಲ್ಲಿನ ಗ್ರೂಪ್​ಗಳ ಮೂಲಕ ಅಥವಾ Communityಗಳಂತೆ ಜಾಗತಿಕವಾಗಿ ಬಳಕೆದಾರರೊಂದಿಗೆ ಸಂಪರ್ಕ ಬೆಳಸಿಕೊಳ್ಳಬಹುದು. ಈ ಕಾರ್ಯವನ್ನು ಮುಂದಿನ ಕೆಲವು ತಿಂಗಳುಗಳಲ್ಲಿ ಎಲ್ಲರಿಗೂ ಲಭ್ಯವಿರುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ. WhatsApp ನಲ್ಲಿ Communityಗಳ ಮೂಲಕ WhatsApp ಗುಂಪುಗಳನ್ನು ಹೇಗೆ ಸಂಪರ್ಕಿಸಬಹುದು ಎಂಬುದರ ಪ್ರಮುಖ ಅಪ್‌ಡೇಟ್ ಆಗಿದೆ. ನಮ್ಮ ಮನೆಯವರ ಜೊತೆಗೆ, ಶಾಲೆಯಲ್ಲಿ, ಕೆಲಸದ ಸ್ಥಳಗಳಲ್ಲಿ ಸಮುದಾಯಗಳು ಈಗ WhatsApp ನಲ್ಲಿ ಗುಂಪು ಸಂಭಾಷಣೆಗಳನ್ನು ಆಯೋಜಿಸಲು ಒಂದೇ ವೇದಿಕೆಯಡಿಯಲ್ಲಿ ಅನೇಕ ಗುಂಪುಗಳನ್ನು ಒಟ್ಟಿಗೆ ಸಂಪರ್ಕಿಸಬಹುದು ಎಂದು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಹೇಳಿದೆ.

WhatsApp ಪ್ರಕಾರ, WhatsApp ನಲ್ಲಿ ಸಮುದಾಯಗಳನ್ನು ರಚಿಸುವ ಮತ್ತು ನಿರ್ವಹಿಸುವ ಜವಾಬ್ದಾರಿ ಗ್ರೂಪ್ ಅಡ್ಮಿನ್. ಇದಲ್ಲದೆ, ಹೊಸ ಗುಂಪುಗಳನ್ನು ರಚಿಸುವ ಮೂಲಕ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಗುಂಪುಗಳನ್ನು ಲಿಂಕ್ ಮಾಡುವ ಮೂಲಕ ಗ್ರೂಪ್ ಅಡ್ಮಿನ್ ತಮ್ಮ Community ಭಾಗವಾಗುವುದನ್ನು ಆಯ್ಕೆ ಮಾಡಬಹುದು. ಗ್ರೂಪ್ ಅಡ್ಮಿನ್ Communityಯಿಂದ ಗುಂಪುಗಳನ್ನು ಅನ್‌ಲಿಂಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಮತ್ತು Communityಯಿಂದ ವೈಯಕ್ತಿಕ ಸದಸ್ಯರನ್ನು ಸಂಪೂರ್ಣವಾಗಿ ತೆಗೆದು ಹಾಕುಬಹುದು. ಹೆಚ್ಚುವರಿಯಾಗಿ, ಗುಂಪಿನ ಎಲ್ಲಾ ಸದಸ್ಯರಿಗೆ ಅನುಚಿತ ಅಥವಾ ನಿಂದನೀಯ ಚಾಟ್‌ಗಳು ಕಂಡು ಬಂದರೆ ಗ್ರೂಪ್ ಅಡ್ಮಿನ್‌ಗಳು ತೆಗೆದು ಹಾಕಬಹುದು ಎಂದು ಹೇಳಿದೆ.

ಇದು ಮೂರು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ, ಅವುಗಳು ಇನ್-ಚಾಟ್ ಪೋಲ್‌ಗಳನ್ನು ರಚಿಸುವ ಸಾಮರ್ಥ್ಯ, 32-ವ್ಯಕ್ತಿಗಳ ವೀಡಿಯೊ ಕರೆ ಮತ್ತು 1024 ಬಳಕೆದಾರರೊಂದಿಗೆ ಗುಂಪುಗಳನ್ನು ರಚಿಸುವ ಸಾಮರ್ಥ್ಯ. ಎಮೋಜಿ ಪ್ರತಿಕ್ರಿಯೆಗಳು, ದೊಡ್ಡ ಫೈಲ್ ಹಂಚಿಕೆ ಮತ್ತು ನಿರ್ವಾಹಕ ಅಳಿಸುವಿಕೆಯಂತೆಯೇ, ಈ ವೈಶಿಷ್ಟ್ಯಗಳನ್ನು ಯಾವುದೇ ಗುಂಪಿನಲ್ಲಿ ಬಳಸಬಹುದು ಮತ್ತು ವಿಶೇಷವಾಗಿ Communityಗಳಿಗೆ ಸಹ ಸಹಾಯ ಮಾಡುತ್ತದೆ ಎಂದು WhatsApp ಹೇಳುತ್ತದೆ.

Published On - 4:46 pm, Thu, 3 November 22