Twitter Down: ಭಾರತದ ಕೆಲ ಕಡೆಗಳಲ್ಲಿ ಟ್ವಿಟರ್ ಡೌನ್: ಲಾಗಿನ್ ಮಾಡಲು ಜನರ ಪರದಾಟ
ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ (Twitter) ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಡೌನ್ಡಿಟೆಕ್ಟರ್ ಮಾಹಿತಿ ನೀಡಿದೆ.
ಕಳೆದ ಕೆಲವು ವಾರಗಳಿಂದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್ಆ್ಯಪ್ (WhatsApp), ಇನ್‌ಸ್ಟಾಗ್ರಾಮ್ ದಿಢೀರ್ ಕಾರ್ಯನಿರ್ವಹಿಸದೆ ತೊಂದರೆಗೆ ಒಳಗಾಗಿತ್ತು. ಇದೀಗ ಟ್ವಿಟರ್ ಸರದಿ. ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ (Twitter) ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಡೌನ್ಡಿಟೆಕ್ಟರ್ ಮಾಹಿತಿ ನೀಡಿದ್ದು, ಡೆಸ್ಕ್ಟಾಪ್ (Desktop) ಬಳಕೆದಾರರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆಯಂತೆ. ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಸಮಸ್ಯೆ ಕಂಡುಬಂದಿದೆ.
ಅನೇಕ ಭಾಗದಲ್ಲಿ ಟ್ವಿಟರ್ ಡೌನ್ ಆಗಿದ್ದರ ಕುರಿತು ಅಲ್ಲಿನ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದರು. ಟ್ವಿಟರ್ನಲ್ಲಿ ಪ್ರಸ್ತುತ ಟ್ವಿಟರ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಬಳಕೆದಾರರು ಮೀಮ್ಗಳನ್ನು ಹರಿಬಿಡುತ್ತಿದ್ದು, ಟ್ವಿಟರ್ ಡೌನ್ ಆಗಿರುವುದೋ, ನಮ್ಮ ಇಂಟರ್ನೆಟ್ಟೋ ತಿಳಿಯುತ್ತಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ.
#twitterdown@elonmusk pic.twitter.com/jq9B3lVzUS
— Shubham Choudhary (@Shubham42017457) November 4, 2022
ಇನ್‌ಸ್ಟಾಗ್ರಾಮ್- ವಾಟ್ಸ್ಆ್ಯಪ್ ಕೂಡ ಡೌನ್ ಆಗಿತ್ತು:
ಮೊನ್ನೆಯಷ್ಟೆ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಕೂಡ ತಾಂತ್ರಿಕ ದೋಷವನ್ನು ಎದುರಿಸಿತ್ತು. ಇದರಿಂದ ಯಾವುದೇ ಸೂಚನೆಯಿಲ್ಲದೆ ಬಳಕೆದಾರರ ಇನ್‌ಸ್ಟಾಗ್ರಾಮ್ ಖಾತೆಗಳು ಏಕಾಏಕಿ ಬ್ಲಾಕ್ ಆಗಿದ್ದವು. ಇದರಿಂದ ಬಳಕೆದಾರರು ವರದಿ ಮಾಡಿದ್ದರು. ಈ ಸಮಸ್ಯೆ ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿನ ಬಳಕೆದಾರರ ಮೇಲೂ ಪರಿಣಾಮ ಬೀರಿದೆ. ಇದಾದ ನಂತರ ಎಚ್ಚೆತ್ತ ಮೆಟಾ ಒಡೆತನದ ಕಂಪೆನಿ ಸಮಸ್ಯೆಯನ್ನು ಬಗೆಹರಿಸಿತು. ಮೆಟಾ ಒಡೆತನದ ಪ್ಲಾಟ್‌ಫಾರ್ಮ್‌ಗಳಲ್ಲಿ ಎದುರಾಗಿರುವ ತಾಂತ್ರಿಕ ದೋಷ ಇದೇ ಮೊದಲನೇಲ್ಲ. ಕಳೆದ ವಾರ ವಾಟ್ಸ್ಆ್ಯಪ್ ಅಪ್ಲಿಕೇಶನ್ ಕೂಡ ತಾಂತ್ರಿಕ ದೋಷವನ್ನು ಎದುರಿಸಿತ್ತು. ಇದರಿಂದ ವಾಟ್ಸ್ಆ್ಯಪ್ನಲ್ಲಿ ಮೆಸೇಜ್, ವಾಯ್ಸ್ ಕಾಲ್, ವಿಡಿಯೋ ಕಾಲ್ ಮಾಡುವುದಕ್ಕೆ ಕೂಡ ಸಾಧ್ಯವಾಗಿರಲಿಲ್ಲ. ಹೆಚ್ಚು ಕಡಿಮೆ ಎರಡು ಗಂಟೆಗಳ ಕಾಲ ಈ ಸಮಸ್ಯೆ ಉಂಟಾಗಿತ್ತು.
Published On - 9:22 am, Fri, 4 November 22