ಇದುವರೆಗೆ ನೀವು ಅತ್ಯಂತ ಭಯನಕವಾದ ಮನೆ (Home), ಕಾಡು ಅಥವಾ ಬೇರೆ ಸ್ಥಳಗಳ ಬಗ್ಗೆ ಕೇಳಿರಬಹುದು. ಅಲ್ಲೆನಿದೆ ಎಂದು ಧೈರ್ಯದಿಂದ ಮುನ್ನುಗ್ಗಿ ಹೋದವರು ಹೇಳ ಹೆಸರಿಲ್ಲದಂತಾದವರ ಬಗ್ಗೆಯೂ ಕೇಳಿರಬಹುದು. ಆದರೆ ಭಯಾನಕ ಫೋನ್ (Phone) ಸಂಖ್ಯೆಯನ್ನು ನೀವು ಎಂದಾದರೂ ಕೇಳಿದ್ದೀರಾ?. ಹೌದು, ಭಯ ಹುಟ್ಟಿಸುವ ಮೊಬೈಲ್ ನಂಬರ್ (Mobile Number) ಕೂಡ ಒಂದು ಇದೆ ಎಂದರೆ ನೀವು ನಂಬಲೇಬೇಕು. ನಾವು ಹೇಳುತ್ತಿರುವ ಈ ಮೊಬೈಲ್ ನಂಬರ್ ಅನ್ನು ಉಪಯೋಗಿಸುತ್ತಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಇದನ್ನು ತಿಳಿದು ನಿಮಗೂ ಕೂಡ ಆಶ್ಚರ್ಯವಾಗಬಹುದು, ಆದರೂ ಇದು ನಿಜ. ಆ ಭಯಾನಕ ಮೊಬೈಲ್ ನಂಬರ್ 0888888888.
ಬಲ್ಗೇರಿಯಾದಲ್ಲಿ ಈ ನಂಬರ್ ಮೊದಲು ಬಳಕೆಯಲ್ಲಿತ್ತಂತೆ. ಬಲ್ಗೇರಿಯಾದ ಮೊಬಿಟೆಲ್ ಕಂಪನಿಯ ಸಿಇಒ ಮೊದಲು ಈ ಮೊಬೈಲ್ ನಂಬರ್ ಅನ್ನು ಖರೀದಿಸಿದ್ದರು. ಇದನ್ನು ಬಳಸುತ್ತಿದ್ದ ವ್ಲಾಡಿಮಿರ್ ಗೆಸಾನೋವ್ 2001ರಲ್ಲಿ ಸಾವನ್ನಪ್ಪಿದ್ದರು. ಕ್ಯಾನ್ಸರ್ ಬಂದು ಸಾವನ್ನಪ್ಪಿದ್ದಾನೆ ಎಂದು ಸುದ್ದಿಯಾಯಿತು. ಆದರೆ ಮೊಬೈಲ್ ನಂಬರ್ ಸಾವಿಗೆ ಕಾರಣವೆಂದು ಮಾಧ್ಯಮಗಳು ವರದಿ ಮಾಡಿದ್ದವು.
ಇದಾದ ನಂತರ ಈ ಸಂಖ್ಯೆಯನ್ನು ದಿಮಿತ್ರಿವ್ ಹೆಸರಿನ ಕುಖ್ಯಾತ ಡ್ರಗ್ ಡೀಲರ್ ಖರೀದಿ ಮಾಡಿದ್ದರು. 2003ರಲ್ಲಿ ಅವರನ್ನು ಹೊಡೆದು ಸಾಯಿಸಲಾಯಿತು. ಸಾವಿನ ವೇಳೆ ಈ ಸಂಖ್ಯೆ ದಿಮಿತ್ರಿವ್ ಬಳಿಯೇ ಇತ್ತು. ನಂತರ ಪ್ರಸಿದ್ಧ ವ್ಯಾಪಾರಿಯೊಬ್ಬರ ಕೈಗೆ ಈ ನಂಬರ್ ಬಂದಿತ್ತು. ಆ ವ್ಯಾಪಾರಿ ಕೂಡ ತುಂಬಾ ದಿನ ಬದುಕಲಿಲ್ಲವಂತೆ.
ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೆಯೋ, ಸಾವು ಅವರನ್ನು ಹುಡುಕಿಕೊಂಡು ಅಟ್ಟಾಡಿಸಿದೆ. ಅಂದರೆ, ಈ ಮೊಬೈಲ್ ಸಂಖ್ಯೆ ಬಳಸಿರುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆಗಳು ಒಂದೆರಡು ದಿನಗಳಿಂದ ನಡೆಯುತ್ತಿಲ್ಲ ಮತ್ತು ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಅಪಾಯಕಾರಿ ಮೊಬೈಲ್ ನಂಬರ್ ಚರ್ಚೆಗಳು ನಡೆದಿವೆ.
ಕಳೆದ 15 ವರ್ಷಗಳಲ್ಲಿ ಇಂತಹ ಒಟ್ಟು ಮೂರು ಘಟನೆಗಳು ಸಂಭವಿಸಿವೆ. ಇದುವರೆಗೆ ಈ ಮೂವರು ಜನರು ಈ ಮೊಬೈಲ್ ಸಂಖ್ಯೆಯನ್ನು ಖರೀದಿಸಿದ್ದಾರೆ ಹಾಗೂ ಖರೀದಿಸಿದ ಮೂವರು ಕೂಡ ಸಾವನ್ನಪ್ಪಿದ್ದಾರೆ. ಮೂರು ಮಂದಿ ಸಾವನ್ನಪ್ಪಿದ ಮೇಲೆ ಮೊಬೈಲ್ ಸಂಖ್ಯೆಯನ್ನು ನಿಷೇಧ ಮಾಡಲಾಯಿತು. 2005ರ ನಂತರ ಈ ಮೊಬೈಲ್ ಸಂಖ್ಯೆಯನ್ನು ಯಾರಿಗೂ ನೀಡದೆ ಬ್ಯಾನ್ ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಬಳಕೆದಾರರಿಗೆ ಹಗಲು ರಾತ್ರಿಯೆನ್ನದೆ ಕರೆ ಮಾಡುತ್ತಿದೆ, ಮೆಸೇಜ್ಗಳನ್ನು ಕಳುಹಿಸುತ್ತಿದೆ. ಇದು ಬಳಕೆದಾರರಿಗೆ ಸಾಕಷ್ಟು ತೊಂದರೆ ಉಂಟುಮಾಡುತ್ತಿದೆ ಎಂಬುದನ್ನು ಗಮನಿಸಿ ಜಾಹೀರಾತಿಗಾಗಿ ಕರೆ, ಮೆಸೇಜ್ ಮಾಡುವಂತಹ ವಿಶೇಷ ಸಂಖ್ಯೆಗಳನ್ನು ನಿರ್ಬಂಧಿಸಲು ಟ್ರಾಯ್ ಸಂಸ್ಥೆ ಮುಂದಾಗಿದೆ. ಈ ಮೂಲಕ ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೇಜ್‌ಗಳ ಬಗ್ಗೆ ಟ್ರಾಯ್ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಟ್ರಾಯ್ ಹೊರಡಿಸಿರುವ ಆದೇಶದ ಪ್ರಕಾರ, ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಟೆಲಿಕಾಂ ರೆಗ್ಯುಲೇಟರಿ ಸಂಸ್ಥೆಯು 30 ದಿನಗಳ ಕಾಲಾವಕಾಶ ನೀಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ