Tech Tips: ನಿಮ್ಮ ಫೇಸ್ಬುಕ್ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್ಗೆ ವರ್ಗಾಹಿಸಬೇಕೇ?: ಇಲ್ಲಿದೆ ಟ್ರಿಕ್
Facebook: ಫೇಸ್ಬುಕ್ನಲ್ಲಿ ಹಂಚಿಕೊಳ್ಳುವ ಫೋಟೋ, ವಿಡಿಯೋ ಅಥವಾ ಯಾವುದೇ ಡಾಟಾವನ್ನು ಇತರೆ ಮಾಧ್ಯಮಕ್ಕೆ ವರ್ಗಾವಣೆ ಮಾಡಬಹುದು. ಹಾಗಾದರೆ ನೀವು ಫೇಸ್ಬುಕ್ನಲ್ಲಿ ಶೇರ್ ಮಾಡಿದ ಫೋಟೋ, ವಿಡಿಯೋವನ್ನು ಗೂಗಲ್ ಫೋಟೋಸ್ಗೆ (Google Photos) ವರ್ಗಾವಣೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಸೋಷಿಯಲ್ ಮೀಡಿಯಾ ಎಂಬುದು ಇಂದು ಮಾಂತ್ರಿಕ ಜಗತ್ತು ಎಂಬಂತಾಗಿದೆ. ಇದರಲ್ಲಿ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗರುವ ಫೇಸ್‌ಬುಕ್ (Facebook) ಅನ್ನು ಎಲ್ಲಾ ವಯಸ್ಸಿನ ಜನರು ಉಪಯೋಗಿಸುತ್ತಿದ್ದಾರೆ. ಪ್ರತಿದಿನ ಸುಮಾರು ಕೋಟಿಗಟ್ಟಲೆ ಜನರು ಇದರಲ್ಲಿ ಸಕ್ರಿಯರಾಗಿದ್ದಾರೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಮೆಟಾ (Meta) ಒಡೆತನದ ಕಂಪನಿ ಅನೇಕ ಫೀಚರ್ಗಳನ್ನು, ನೂತನ ಅಪ್ಡೇಟ್ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಹಾಗೆಯೆ ಎಫ್ಬಿಯಲ್ಲಿ ಹಂಚಿಕೊಳ್ಳುವ ಫೋಟೋ, ವಿಡಿಯೋ ಅಥವಾ ಯಾವುದೇ ಡಾಟಾವನ್ನು ಇತರೆ ಮಾಧ್ಯಮಕ್ಕೆ ವರ್ಗಾವಣೆ ಮಾಡಬಹುದು. ಹಾಗಾದರೆ ನೀವು ಫೇಸ್ಬುಕ್ನಲ್ಲಿ ಶೇರ್ ಮಾಡಿದ ಫೋಟೋ, ವಿಡಿಯೋವನ್ನು ಗೂಗಲ್ ಫೋಟೋಸ್ಗೆ (Google Photos) ವರ್ಗಾವಣೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
- ಮೊದಲಿಗೆ ಕಂಪ್ಯೂಟರ್ನಲ್ಲಿ ನಿಮ್ಮ ಫೇಸ್‌ಬುಕ್ ಖಾತೆಯಿಂದ ಲಾಗಿನ್ ಆಗಿ
- ಬಲ ತುದಿಯಲ್ಲಿರುವ ನಿಮ್ಮ ಪ್ರೊಫೂಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಸೆಟ್ಟಿಂಗ್ಸ್ಗೆ ಹೋಗಿ
- ಈಗ ಎಡ ಬದಿಯಲ್ಲಿರುವ ಫೇಸ್‌ಬುಕ್ ಇನ್ಫಾರ್ಮೇಷನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಂತರ ಟ್ರಾನ್ಫರ್ ಕಾಪಿ ಎಂಬ ಆಯ್ಕೆಯಲ್ಲಿರುವ ವೀವ್ ಬಟನ್ ಮೇಲೆ ಒತ್ತಿರಿ
- ಇದರಲ್ಲಿ ಗೂಗಲ್ ಫೋಟೋಸ್ ಆಯ್ಕೆ ಮಾಡಿ
- ಈಗ ನಿಮಗೆ ಯಾವ ಫೈಲ್ ಟ್ರಾನ್ಫರ್ ಮಾಡಬೇಕು ಅದನ್ನು ಆಯ್ಕೆ ಮಾಡಿ ಒಕೆ ಒತ್ತಿರಿ
- ನಂತರ ಕನೆಕ್ಟ್ ಬಟಲ್ ಒತ್ತಿ ಗೂಗಲ್ ಅಕೌಂಟ್ಗೆ ಲಾಗಿನ್ ಆಗಿ, ಟ್ರಾನ್ಫರ್ ಬಟಲ್ ಕ್ಲಿಕ್ ಮಾಡಿದರೆ ಆಯಿತು
iQOO Z7: ಕೇವಲ ಫೋಟೋದಿಂದಲೇ ರೋಚಕತೆ ಸೃಷ್ಟಿಸಿದ ಐಕ್ಯೂ ಕಂಪನಿಯ ಹೊಸ ಸ್ಮಾರ್ಟ್‌ಫೋನ್: ಯಾವುದು?
ಹಣ ಕೊಟ್ಟು ಫೇಸ್‌ಬುಕ್ ಬ್ಲೂ ಟಿಕ್ ಪಡೆದುಕೊಳ್ಳಿ:
ಬ್ಲೂ ಟಿಕ್ ವಿಚಾರ ಟ್ವಿಟ್ಟರ್ ಬಳಿಕ ಇದೀಗ ಮೆಟಾ ಕಂಪನಿಯಲ್ಲೂ ಸದ್ದು ಮಾಡುತ್ತಿದೆ. ಟ್ವಿಟರ್ ಅನ್ನೇ ಅನುಸರಿಸಿರುವ ಮೆಟಾ ಈಗ ಹಣ ಪಾವತಿ ಮಾಡಿದರೆ ಬ್ಲೂ ಟಿಕ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೆಟಾ ವೆರಿಫೈಡ್ ಅನ್ನು ಶುರು ಮಾಡಲಿದ್ದದೇವೆ ಎಂದು ಹೇಳಿದ್ದಾರೆ. ಇದು ಒಬ್ಬರ ಖಾತೆಯನ್ನು ದೃಢೀಕರಿಸಲು ತಿಂಗಳಿಗೆ $11.99 ರಿಂದ ಪ್ರಾರಂಭವಾಗುವ ಸೇವೆಯಾಗಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 900 ರೂ. ಎನ್ನಬಹುದು.
“ಈ ಹೊಸ ಫೀಚರ್ನಿಂದ ನಮ್ಮ ಸೇವೆಗಳನ್ನು ನೀಡುತ್ತೇವೆ. ಜೊತೆಗೆ ಸುರಕ್ಷತೆಯನ್ನು ಹೆಚ್ಚಿಸುತ್ತೇವೆ,” ಎಂದು ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಪೋಸ್ಟ್ ಮಾಡಿದ್ದಾರೆ. ಫೆಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಸದ್ಯಕ್ಕೆ ಪ್ರಸಿದ್ಧ ವ್ಯಕ್ತಿಗಳಿಗೆ ಮಾತ್ರ ಬ್ಲೂ ಬ್ಯಾಡ್ಜ್ ಇರುವ ವೆರಿಫೈಡ್ ಅಕೌಂಟ್ ನೀಡಲಾಗುತ್ತಿದ್ದು, ಇನ್ನು ಮುಂದೆ ಟ್ವಿಟ್ವರ್‌ನಂತೆಯೇ ಹಣ ಪಾವತಿಸಿದ ಖಾತೆದಾರರಿಗೆ ಬ್ಲೂ ಟಿಕ್ ನೀಡಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Mon, 27 February 23