Nokia Logo: ನೂತನ ಬದಲಾವಣೆಗೆ ಮುಂದಾದ ನೋಕಿಯಾ: 60 ವರ್ಷಗಳ ಬಳಿಕ ಮೊದಲ ಬಾರಿ ಲೋಗೋ ಬದಲಾವಣೆ

ಆರು ದಶಕಗಳ ಕಾಲ ಒಂದೇ ಲೋಗೋವನ್ನು ಉಳಿಸಿಕೊಂಡು ಬಂದಿದ್ದ ನೋಕಿಯಾ ಇದೀಗ ಹೊಸ ಕಾರ್ಯತಂತ್ರದ ಸೂಚನೆ ನೀಡಿದೆ. ಹೊಸ ಲೋಗೋದಲ್ಲಿ 'ನೋಕಿಯಾ' ಪದದ ಐದು ಅಕ್ಷರಗಳು ಐದು ವಿಭಿನ್ನ ಶೈಲಿಯಲ್ಲಿದೆ.

Nokia Logo: ನೂತನ ಬದಲಾವಣೆಗೆ ಮುಂದಾದ ನೋಕಿಯಾ: 60 ವರ್ಷಗಳ ಬಳಿಕ ಮೊದಲ ಬಾರಿ ಲೋಗೋ ಬದಲಾವಣೆ
Nokia New Logo
Follow us
|

Updated on:Feb 27, 2023 | 11:09 AM

ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಕಂಪನಿ ಈಗ ಹೇಳಹೆಸರಿಲ್ಲದಂತಾಗಿದೆ. ನೋಕಿಯಾ (Nokia) ಕಂಪನಿಯ ಸ್ಮಾರ್ಟ್​ಫೋನ್​ಗಳು ಇಂದು ಮಾರುಕಟ್ಟೆಯಲ್ಲಿ ದೊಡ್ಟ ಮಟ್ಟದ ಯಶಸ್ಸು ಕೂಡ ಸಾಧಿಸುತ್ತಿಲ್ಲ. ಶವೋಮಿ, ಸ್ಯಾಮ್​ಸಂಗ್, ರಿಯಲ್ ಮಿ, ಒನ್​ಪ್ಲಸ್​ (OnePlus) ನಂತರ ಇತರೆ ಬ್ರ್ಯಾಂಡ್​ಗಳ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಪಾತಾಳಕ್ಕೆ ಕುಸಿದಿದೆ. ಆಗಾಗ್ಗೆ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿದ್ದರೂ ಇದಕ್ಕೆ ಬೇಡಿಕೆಯಿಲ್ಲ. ಹೀಗಿರುವಾಗ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ನೋಕಿಯಾ ನೂತನ ಬದಲಾವಣೆಗೆ ಮುಂದಾಗಿದೆ. ಕಳೆದ 60 ವರ್ಷದಲ್ಲಿ ಇದೇ ಮೊದಲ ಬಾರಿಗೆ ನೋಕಿಯಾ ತನ್ನ ಸಾಂಪ್ರದಾಯಿಕ ಲೋಗೋವನ್ನು (Nokia Logo) ಬದಲಾವಣೆ ಮಾಡಿದೆ.

ಆರು ದಶಕಗಳ ಕಾಲ ಒಂದೇ ಲೋಗೋವನ್ನು ಉಳಿಸಿಕೊಂಡು ಬಂದಿದ್ದ ನೋಕಿಯಾ ಇದೀಗ ಹೊಸ ಕಾರ್ಯತಂತ್ರದ ಸೂಚನೆ ನೀಡಿದೆ. ಹೊಸ ಲೋಗೋದಲ್ಲಿ ‘ನೋಕಿಯಾ’ ಪದದ ಐದು ಅಕ್ಷರಗಳು ಐದು ವಿಭಿನ್ನ ಶೈಲಿಯಲ್ಲಿದೆ. ಈ ಹಿಂದೆ ನೀಲಿ ಬಣ್ಣದಲ್ಲಿದ್ದ ನೋಕಿಯಾ ಅಕ್ಷರಗಳಿಗೆ ಇದೀಗ ಹೊಸ ರೂಪ ನೀಡಲಾಗಿದ್ದು ವಿನೂತನ ಡಿಸೈನ್‌ನ 5 ಫಾಂಟ್‌ನಲ್ಲಿ ಬಣ್ಣ ಬಣ್ಣದಲ್ಲಿ ನೋಕಿಯಾ ಪದದ ಅಕ್ಷರಗಳು ಲೋಗೋದಲ್ಲಿ ಕಂಗೊಳಿಸುತ್ತಿವೆ.

Tech Tips: ನಿಮ್ಮ ಸ್ಮಾರ್ಟ್​ಫೋನ್ ಚಾರ್ಜ್​ಗೆ ಹಾಕಿದಾಗ ಬಿಸಿಯಾಗುತ್ತಾ?: ನಿರ್ಲಕ್ಷಿಸದಿರಿ

ಇದನ್ನೂ ಓದಿ
Image
Infinix Smart 7: 6000mAh ಬ್ಯಾಟರಿ, 7,299 ರೂ.: ಇಂದಿನಿಂದ ಇನ್ಫಿನಿಕ್ಸ್‌ ಸ್ಮಾರ್ಟ್‌ 7 ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ
Image
Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಹೈಡ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ನೋಡಿ ಟ್ರಿಕ್
Image
AI-Generated Images: AI ರಚಿತ ‘ಓಲ್ಡ್ ಡೆಲ್ಲಿಅಟ್ ನೈಟ್’ ಭಯಾನಕ ಚಿತ್ರಗಳು: ಈ ಚಿತ್ರಗಳು ನಿಮಗೆ ನಡುಕ ಹುಟ್ಟಿಸುವುದ ಖಂಡಿತ!
Image
Whatsapp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಬಹುನಿರೀಕ್ಷಿತ ಶೆಡ್ಯುಲ್‌ ಫೀಚರ್: ಬಳಕೆದಾರರು ಫುಲ್ ಖುಷ್

ಈ ಬಗ್ಗೆ ಮಾತನಾಡಿರುವ ನೋಕಿಯಾದ ಸಿಇಒ ಪೆಕ್ಕಾ ಲುಂಡ್ಮಾರ್ಕ್, ”ಹಳೆಯ ಲೋಗೋದ ವಿಶಿಷ್ಟ ನೀಲಿ ಬಣ್ಣವನ್ನು ಬಳಕೆಯ ಅನುಗುಣವಾಗಿ ಬಣ್ಣಗಳ ಶ್ರೇಣಿಗೆ ಕೈಬಿಡಲಾಗಿದೆ. ಈ ಹಿಂದೆ ಸ್ಮಾರ್ಟ್​ಫೋನ್​ಗಳಿಗೆ ಸಂಬಂಧಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನದ ಸಂಸ್ಥೆಯಾಗಿದೆ. 2020ರ ಬಿಕ್ಕಟ್ಟಿನ ಬಳಿಕ ಮರುಹೊಂದಿಕೆ, ವೇಗವರ್ಧನೆ ಮತ್ತು ಪ್ರಮಾಣ ಎಂಬ ಮೂರು ಕಾರ್ಯತಂತ್ರವನ್ನು ನಾವು ಇರಿಸಿಕೊಂಡಿದ್ದೆವು. ಇದೀಗ ಮರುಹೊಂದಿಸುವ ಹಂತ ಮುಗಿದಿದೆ. ನೋಕಿಯಾ ತನ್ನ ಸೇವಾ ಪೂರೈಕೆದಾರ ವ್ಯವಹಾರವನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಶೇ. 21 ರಷ್ಟು ಬೆಳವಣಿಗೆಯನ್ನು ಕಂಡಿದ್ದೇವೆ. ಇದು ಪ್ರಸ್ತುತ ನಮ್ಮ ಮಾರಾಟದ ಶೇಕಡಾ 8 ರಷ್ಟಿದೆ. ಭಾರತ ದೇಶ ನಮ್ಮ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ,” ಎಂದು ಹೇಳಿದ್ದಾರೆ.

ವಿಶೇಷ ಎಂದರೆ ಫೆಬ್ರವರಿ 27 ಇಂದಿನಿಂದ ಗುರವಾರದವರೆಗೆ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ (ಎಂಡ್ಬ್ಲ್ಯುಸಿ) ನಡೆಯಲಿದೆ. ಇದು ಆರಂಭಕ್ಕೂ ಮುನ್ನ ನೋಕಿಯಾ ತನ್ನ ಬ್ರ್ಯಾಂಡ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿರುವುದು ಕುತೂಹಲ ಕೆರಳಿಸಿದೆ. ”ಸೇವೆಗಳನ್ನು ಪೂರೈಸುವ ವಹಿವಾಟಿನತ್ತ ಕಂಪನಿ ಗಮನ ಮುಂದುವರಿಸಲಿದ್ದು, ದೂರಸಂಪರ್ಕ ಕಂಪನಿಗಳಿಗೆ ಅಗತ್ಯ ಸಾಧನಗಳನ್ನು ನೀಡುವುದು, ಅದರಲ್ಲಿಯೂ ಮುಖ್ಯವಾಗಿ ಬೇರೆ ಉದ್ದಿಮೆಗಳಿಗೆ ಟೆಲಿಕಾಂ ಗಿಯರ್‌ ಮಾರಾಟ ಮಾಡಲು ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇವೆ,” ಎಂದು ನೋಕಿಯಾದ ಸಿಇಒ ಪೆಕ್ಕಾ ಲುಂಡ್ಮಾರ್ಕ್ ಹೇಳಿದರು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:09 am, Mon, 27 February 23

ತಾಜಾ ಸುದ್ದಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಶ್ರೀರಾಮ ಮಂದಿರ ಮೇಲ್ಚಾವಣಿ ಸೋರಿಕೆಗೆ ಪೇಜಾವರಶ್ರೀ ಸ್ಪಷ್ಟನೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ